ಕಾಂಗ್ರೆಸ್‌ನಲ್ಲಿ ಗೊಂದಲವಿಲ್ಲ, ಯಾತ್ರೆ ಅನುಕರಣೆಯೂ ಇಲ್ಲ: ಪರಂ

By Editor
08:43:12 AM / Wed, Feb 21st, 2018

ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಚುನಾವಣೆ ತಯಾರಿಗಾಗಿ ಬಿಜೆಪಿಯಂತೆ ಯಾತ್ರೆ ಮಾಡುವ ಅಗತ್ಯವೂ ಇಲ್ಲ. ಈಗಾಗಲೇ ಮನೆ ಮನೆಗೆ ಕಾಂಗ್ರೆಸ್‌ ನಡಿಗೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ''ಬಿಜೆಪಿಯಂತೆ ಯಾತ್ರೆ ಮಾಡಿದರೆ ಮಾತ್ರ ಚುನಾವಣಾ ತಯಾರಿ ಎನ್ನುವಂತಿಲ್ಲ. ನಮಗೂ ನಮ್ಮದೇ ಆದ ರಣತಂತ್ರವಿದೆ. ನಾವು ಯಾರನ್ನೂ ಅನುಕರಿಸುವುದಿಲ್ಲ' ಎಂದು ಸ್ಪಷ್ಟ ಪಡಿಸಿದರು.

'ಸಿಎಂ ಸಿದ್ದರಾಮಯ್ಯ ಹಾಗೂ ನಾವೆಲ್ಲರೂ ಸೇರಿ ಪಕ್ಷದ ಸಂಘಟನೆಗೆ ಹಲವು ಕಾರ್ಯಕ್ರಮ ರೂಪಿಸಿದ್ದೇವೆ. ಸರಕಾರ ಜನಪರ ಆಡಳಿತ ನಡೆಸುತ್ತಿದೆ. ಮನೆ ಮನೆಗೆ ಕಾಂಗ್ರೆಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ,'' ಎಂದರು.

''ಮಾಜಿ ಸಂಸದೆ ರಮ್ಯಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ನಾವೂ ಈ ಬಗ್ಗೆ ಪ್ರಸ್ತಾಪಿಸಿಲ್ಲ. ರಮ್ಯಾ ಅವರೂ ಈ ವಿಚಾರದಲ್ಲಿ ಯಾರ ಸಂಪರ್ಕದಲ್ಲಿದ್ದಾರೆಂದು ತಿಳಿದಿಲ್ಲ. ಜನ್ಮ ದಿನದಂದು ಆಕೆಗೆ ಕರೆ ಮಾಡಿ ಶುಭಾಶಯ ಹೇಳಿದ್ದೇನೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Leave A Comment