ಅಪ್ಪಟ ಕನ್ನಡ ಕಲಾವಿದೆ ಅನು ಚಿತ್ತ ರಾಜಕೀಯ ಅತ್ತ.


By Editor
08:56:26 AM / Wed, Feb 21st, 2018

“ಕಲೆ ಎಲ್ಲರನ್ನು ಕೈಬಿಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ” ಎನ್ನುವ ಮಾತಿನಂತೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಂದ ಜನಮೆಚ್ಚಿದ ಕಲಾವಿದೆ ಅನು ಗೌಡ. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯವರು ಇವರ ಮೂಲ ಹೆಸರು ಅನಿತಾ ಗೌಡ. ಆದರೆ ಚಲನಚಿತ್ರ ಸೇರಿದಂತೆ ಆತ್ಮೀಯುರಲ್ಲಿ ಅನು ಅಥವಾ ಅನು ಗೌಡ ಅಂತ ಖ್ಯಾತಿ ಪಡೆದಿದ್ದಾರೆ. ಒಳ್ಳೆಯ ಓದಿನೊಂದಿಗೆ ಮಯಾನಗರಿ ಬೆಂಗಳೂರಿಗೆ ಕಾಲಯಿಡುತ್ತಲ್ಲೇ, ಎಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಕೆಲಸ, ಆ ಕೆಲಸದ ನಿಮಿತ್ಯ ನಿರ್ಮಾಪಕರೊಬ್ಬರ ಪರಿಚಯ ಅನು ಗೌಡ ಅವರ ಜೀವನದ ದೊಡ್ಡ ತಿರುವು ಅನ್ನಬಹುದು. ಇದೇ ಸಂದರ್ಭದಲ್ಲಿ ಕಲಾ ದೇವಿಯ ದೃಷ್ಟಿ ಅಪ್ಪಟ ಕನ್ನಡತಿ ಮೇಲೆ ಬಿದ್ದು ಕೈ ಬಿಸಿ ಬಾಚಿಕೊಂಡಳು. ಕನ್ನಡ ಕಲಾ ರತ್ನ ಮೊದಲು ಚೈತನ ನಿದೇಶನದ ಮತ್ತು ರಾಜೇಶ ಕೃಷ್ಣನ,ಸಿರಿ, ಪ್ರೇಮಾ ಅಭಿನಯದ ಮೂರು ಮನಸು ನೂರು ಕನಸು ಚಿತ್ರದ ಮೂಲಕ ಬಣ್ಣ ಹಂಚಿ ಅಭಿನಯಕ್ಕೆ ನಾಂಧಿ ಹಾಡಿದ್ದರು. ಈ ಚಿತ್ರದ ನಂತರ ಶಶಿರ,ಅಂಬಿ,ಕನ್ನಡ ಕಂದ,ಮುನಿ ಮುಂತಾದ ಚಿತ್ರಗಳಲ್ಲಿ ಐಟಂ ಸಾಂಗ ಮೂಲಕ ನೋಡುಗರ ಮನ ಸೆಳೆದರು.ನಂತರದ ದಿನಗಳಲ್ಲಿ ವಿಷ್ಟುವರ್ಧನ ಅವರ ನಟನೆಯ ಸ್ಕೂಲ್ ಮಾಸ್ತರ,ಪಿ.ವಾಸು ಅವರ ಆಪ್ತ ರಕ್ಷಕ,ಭೂಗರ ಸುದೀಪ ಅವರ ಕೆಂಪೇಗೌಡ,ಬೃಂದಾವನ,ಹುಡುಗರು ಹೀಗೆ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಿಂದ ಕನ್ನಡ ಕಲಾಭಿಮಾನಿಗಳ ಮನ ಸೊರೆಗೊಂಡಿದ್ದಾರೆ. ಚಿತ್ರರಂಗದ ವೃತ್ತಿ ಬದುಕಿನಲ್ಲಿ ದೊಡ್ಡ ತಿರುವು ಕೊಟ್ಟಿರುವುದು “ಮೇಘವೇ ಮೇಘವೇ” ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಅದ್ಬುತ ಅಭಿನಯದ ಮೂಲಕ ಕಲಾರಸಿಕರಿಗೂ ಗಾಂಧಿನಗರಕ್ಕೂ ಚಿರಪರಿಚಿತರಾದರೂ ಈಗ ಸಧ್ಯ “ ಗಂಡ ಊರಿಗೆ ಹೋದಾಗ” ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅದರಲ್ಲೂ ವಿಭಿನ್ನ ಪಾತ್ರ ಮಾಡಿದ್ದಾರೆ.ಚಿತ್ರಿಕರಣ ಮುಗಿದ್ದು ಈಗ ಸದ್ಯ ಬಿಡುಗಡೆ ಹಂತದಲ್ಲಿದೆ.ಕನ್ನಡ ಚಿತ್ರರಂಗದಲ್ಲಿ ಹಲವಾರು ವಿಭಿನ್ನ ಪಾತ್ರಗಳನ್ನು ಮಾಡಿ ನಿರ್ದೇಶಕರ ಮತ್ತು ಚಿತ್ರ ವಿಕ್ಷಕರಿಂದ ಸೈ ಎನ್ನಿಸಿಕೊಂಡು, ಯಾವುದೇ ಪಾತ್ರವಾಗಲಿ ಅದಕ್ಕೆ ಜೀವ ತುಂಬಿ ಅಭಿನಯಿಸುವ ಅಭಿನಯ ಕಲಾವಿದೆ.ಅಳುಮುಜ್ಜಿಯಿಂದ ಹಿಡಿದು,ಕಾಮಿಡಿ,ರೌಡಿಯಂತೆ ಹೀಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಕನ್ನಡ ನಾಡಿನ ಜನರ ಮನಗೆದ್ದಿದ್ದಾರೆ. ಅನಿತಾ ಗೌಡ ಅವರು ಕೆವಲ ನಟಿ ಅಷ್ಟೆ ಅಲ್ಲ.ಸಮಾಜ ಸೇವಕಿ,ಆತ್ಮೀಯ ಒತ್ತಾಯ ಮತ್ತು ಭಾರತೀಯ ಪ್ರಜಾ ಪಕ್ಷದ ಬೆಂಬಲದೊಂದಿಗೆ 2013ರಲ್ಲಿ ರಾಜಾಜಿನಗರ ಕ್ಷೇತ್ರದಿಂದ ಚುನಾವಣಾ ಕ್ಷೇತ್ರದಿಂದ ಸ್ವರ್ದಿಸಿ ರಾಜಕೀಯ ಪ್ರವೇಶವು ಮಾಡಿದ್ದಾರೆ.ದೂರದೃಷ್ಟಿಕೋನ ಮತ್ತು ಸೇವಾ ಮನೋಭಾವದಿಂದಲ್ಲೆ ರಾಜಕೀಯ ಪ್ರವೇಶ ಮಾಡಿದ್ದು, ರಾಜಕೀಯ ಮೂಲಕ ಮಹಿಳೆಯರಿಗೆ ಸ್ವಾಭಿಮಾನ ಮತ್ತು ದೈರ್ಯ ತುಂಬಿ ದೇಶದಲ್ಲಿ ಮಹಿಳೆಯರಿಗೆ ಭದ್ರತೆ ಮತ್ತು ಸ್ವಾವಲಂಬನೆ ಮಾಡಲು ದಿಟ್ಟ ಪ್ರಯತ್ನ ಮಾಡುತ್ತಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಅಲ್ಲದೇ ಸಮಾಜ ಸೇವೆಯನ್ನು ಕಾಯಾ ವಾಚಾ ಮನಸ್ಸಾ ಮಾಡುತ್ತಿದ್ದಾರೆ.ರಕ್ತದಾನ ಶಿಬಿರ,ಆರೋಗ್ಯ ಶಿಬಿರ ಮತ್ತಿತರ ಸೇವೆಗಳನ್ನು ಸದಾ ಮಾಡುತ್ತಾ ಜನರಿಗೆ ಹತ್ತಿರವಾಗಿದ್ದಾರೆ. ಬಡವರ,ದಲಿತರ ಮತ್ತು ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ರೀತಿ ಹೋರಾಟ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಸಮಾಜ ಸೇವೆಯನ್ನು ಮಾಡುತ್ತಾ ಸಾರ್ವಜನಿಕರಿಗೆ ಹತ್ತಿರವಾದ ಇವರು ಯಾವತ್ತು ಪ್ರಚಾರ ಬಯಸದೇ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇಂತಹ ಆದರ್ಶ ಮಯ ಅನಿತಾ ಗೌಡ ಅವರು ರಾಜಕೀಯವಾಗಿ ಬೆಳೆಯಬೇಕು. ಇಂತಹ ಪ್ರತಿಭೆಗಳು ರಾಜಕೀಯವಾಗಿ ಬೆಳೆದರೆ ಸಮಾಜದಲ್ಲಿ ಸಮಾನತೆ ಮತ್ತು ಅಭಿವೃದ್ಧಿಯನ್ನು ಕಾಣಬಹುದು.ಇವರ ಕನಸು ನನಸಾಗಲೇಂದು ಕನಸಿನ ಭಾರತ ಹಾರೈಸುತ್ತದೆ.

Leave A Comment

ಲೇಖನಗಳು

ಶ್ರೀ ಸುಭಾಷ್ ಭರಣಿ.

ಲೇಖನಗಳು

ಮಾನವೀಯ ಮೌಲ್ಯದ ಹರಿಕಾರ ಶ್ರೀ ಸುಭಾಷ್ ಭರಣಿ.

By Editor
08:56:26 AM / Wed, Feb 21st, 2018
ಶ್ರೀ ವಸಂತ ಕುಮಾರ್

ಲೇಖನಗಳು

ಶ್ರೀ ವಸಂತ ಕುಮಾರ್

By Editor
08:56:26 AM / Wed, Feb 21st, 2018
ಲೇಖನಗಳು

ಲೇಖನಗಳು

ಅಪ್ಪಟ ಕನ್ನಡ ಕಲಾವಿದೆ ಅನು ಚಿತ್ತ ರಾಜಕೀಯ ಅತ್ತ.

By Editor
08:56:26 AM / Wed, Feb 21st, 2018
ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

ಲೇಖನಗಳು

ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

By Editor
08:56:26 AM / Wed, Feb 21st, 2018
ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

ಲೇಖನಗಳು

ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

By Editor
08:56:26 AM / Wed, Feb 21st, 2018