ಚುನಾವಣಾ ವರ್ಷದಲ್ಲಿ ಜೆಡಿಎಸ್ ಪಕ್ಷದ ಮೇಲೆ ಸಿಎಂ ಎರಡೆರಡು ಬ್ರಹ್ಮಾಸ್ತ!

By Editor
08:42:27 AM / Wed, Feb 21st, 2018

ಹಾಲೀ ಸರಕಾರದ ಅವಧಿ ಅಧಿಕೃತವಾಗಿ ಮುಗಿಯಲು ಇನ್ನೂ ಆರು ತಿಂಗಳು ಬಾಕಿಯಿದೆ, ಆದರೂ ಚುನಾವಣೆಯ ಕಾವು ಈಗಾಗಲೇ ಭರ್ಜರಿಯಾಗಿಯೇ ಆರಂಭವಾಗಿದೆ. ತಾವು ಸರಿ, ಇನ್ನೊಂದು ಪಕ್ಷದವರದ್ದು ಬರೀ ಬೊಗಳೆ ಎನ್ನುವ ಹೇಳಿಕೆಗಳನ್ನು ಮೂರೂ ಪ್ರಮುಖ ಪಕ್ಷಗಳು ನೀಡುತ್ತಿವೆ.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವ ಕೆಲವು ಸಮೀಕ್ಷೆಗಳ ನಂತರ, ಹಳೇ ಮೈಸೂರು ಭಾಗದ ಪ್ರಮುಖ ಜೆಡಿಎಸ್ ಮುಖಂಡರ ಮೇಲೆ, ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರಾ? ಜೆಡಿಎಸ್ ಪ್ರಕಾರ ಹೌದು, ಕಾಂಗ್ರೆಸ್ ಪ್ರಕಾರ ಇಲ್ಲ.

ಈ ಎಲ್ಲಾ ಹೌದು, ಅಲ್ಲಗಳ ನಡುವೆ, ಜೆಡಿಎಸ್ ಪಕ್ಷದ ಇಬ್ಬರು ಮುಖಂಡರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ 'ಎಸಿಬಿ' ಅನ್ನೋ ಬ್ರಹ್ಮಾಸ್ತ ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಸಿಎಂ ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದ ಹಾಲೀ ಶಾಸಕ, ಹಾಗೂ ಮುಂದಿನ ಚುನಾವಣೆಯಲ್ಲಿ ಸಂಭಾವ್ಯ ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡ ಮತ್ತು ಮಂಡ್ಯ ಸಂಸದ ಪುಟ್ಟರಾಜು ಮೇಲಿನ ಹಳೇ ಕೇಸನ್ನು ಮತ್ತೆ ಓಪನ್ ಮಾಡಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಖುದ್ದು ಪುಟ್ಟರಾಜು ಹೇಳಿದ್ದಾರೆ.

Leave A Comment