ವಿಜಯಪುರ: ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಜಿಲ್ಲಾ ಬಂದ್


By Editor
08:37:25 AM / Wed, Feb 21st, 2018

ವಿಜಯಪುರ, ಡಿಸೆಂಬರ್ 23: ವಿಜಯಪುರದಲ್ಲಿ ಇತ್ತೀಚಗೆ ಬಾಲಕಿಯೊಬ್ಬಾಕೆ ಮೇಲೆ ನಡೆದ ಅಮಾನವೀಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಇಂದು ವಿಜಯಪುರ ಬಂದ್ ಆಚರಿಸಲಾಗುತ್ತಿದೆ.

ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಜನರು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಬಂದ್ ಹಿನ್ನೆಲಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ, ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಸಂಘಟನೆಗಳು ಮನವಿ ಮಾಡಿದ್ದಾರೆ. ನಿನ್ನೆ ಸಾಯಂಕಾಲ ಮುಸುಕುದಾರಿಗಳು ಕೆಲವರು ಬಸ್ ಗೆ ಬೆಂಕಿ ಇಡಲು ಯತ್ನಿಸಿದ್ದ ಕಾರಣ ಇಂದು ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ.

ಶಾಂತಿ ಕಾಪಾಡುವಂತೆ ಮನವಿ

ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ 7 ಕೆಎಸ್‌ಆರ್‌ಪಿಸಿ ತುಕಡಿಗಳು, 6ಡಿಎಆರ್ ತುಕಡಿಗಳು, 350 ಪೊಲೀಸ್ ಸಿಬ್ಬಂದಿ ಹಗೂ ಹೋಮ್ ಗಾರ್ಡ್ಸ್‌ಗಳನ್ನು ನೇಮಿಸಲಾಗಿದೆ. ಮೇಲುಸ್ತುವಾರಿಗೆಂದು 35 ಪೊಲೀಸ್ ಅಧಿಕಾರಿಗಳನ್ನು ನಗರಕ್ಕೆ ಕರೆಸಿಕೊಳ್ಳಲಾಗಿದೆ.

ಬಂದ್ ಆಚರಿಸುವವರು ಶಾಂತಿ ಕಾಪಾಡಬೇಕೆಂದು ಎಸ್.ಪಿ.ಕುಲದೀಪ್ ಜೈನ್ ಹೇಳಿದ್ದಾರೆ, ಬಂದ್ ನಲ್ಲಿ ಪಾಲ್ಗೊಳ್ಳುತ್ತಿರುವ ಸಂಘಟನೆಗಳು ಬಲವಂತವಾಗಿ ಬಂದ್ ಆಚರಿಸಲು ಮುಂದಾದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಇಂಡಿ ರಸ್ತೆಯಲ್ಲಿ ಘಟನೆ ಬಂದ್

ವೇಳೆ ಕಿಡಿಗೇಡಿಗಳು ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಬಸ್ ನಿರ್ವಾಹಕನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ್ದಾರೆ. ನಗರದ ಇಂಡಿ ರಸ್ತೆಯಲ್ಲಿರೋ ರೈಲ್ವೆ ಗೇಟ್ ಬಳಿ ಘಟನೆ ನಡೆದಿದ್ದು, ಬಸ್ ಗೆ ಪೆಟ್ರೋಲ್ ಹಾಕಿ ಬೆಂಕಿ ಇಡಲು ದುಷ್ಕರ್ಮಿಗಳು ಯತ್ನಿಸಿದ್ದು ಕಂಡೆಕ್ಟರ್ ಶಿವಲಿಂಗಪ್ಪ ಪೆಟ್ರೊಲ್ ಸಿಡಿದ ಕಾರಣ ಗಾಯಗಳಾಗಿವೆ ಕೂಡಲೇ ಕಿಡಿಗೇಡಿಗಳು ಸ್ಥಳದಿಂದ ಪರಾರಿ ಆಗಿದ್ದಾರೆ.

Leave A Comment

ಅಪರಾಧ

ಕೆಟ್ಟುನಿಂತ ಟೂರಿಸ್ಟ್ ವಾಹನ;

ಅಪರಾಧ

ಕೆಟ್ಟುನಿಂತ ಟೂರಿಸ್ಟ್ ವಾಹನ; ಸ್ಪ್ಯಾನರ್ ಹಿಡಿದ ಎಸ್ಪಿ ಅಣ್ಣಾಮಲೈ

By Editor
08:37:25 AM / Wed, Feb 21st, 2018
ವಿಜಯಪುರ:

ಅಪರಾಧ

ವಿಜಯಪುರ: ಸಾಮೂಹಿಕ ಅತ್ಯಾಚಾರ

By Editor
08:37:25 AM / Wed, Feb 21st, 2018