ನಿಮ್ಮ ವೆಬ್ಸೈಟ್ ಲೋಡ್ ಆಗುವ ವೇಗ ಗೂಗಲ್ ಕ್ರೋಮ್ ಬಳಸಿ ಹೀಗೆ ತಿಳಿಯಿರಿ


By Editor
08:38:17 AM / Wed, Feb 21st, 2018

ಭಪರ್ಸನಲ್ ಬ್ಲಾಗಿಂಗ್ , ಸಣ್ಣ ವ್ಯಾಪಾರ ವಹಿವಾಟುಗಳು ಅಥವಾ ಇತರ ಆನ್ಲೈನ್ ವ್ಯವಹಾರಗಳಲ್ಲಿ ಪೇಜ್ ಲೋಡಿಂಗ್ ಎನ್ನುವ ಅಂಶ ಬಹು ಮುಖ್ಯದ್ದಾಗಿರುತ್ತದೆ. ನಿಮ್ಮ ವೆಬ್ ಪೇಜ್ ಗೆ ಹೊಸ ಹೊಸ ಬಳಕೆದಾರರ ಆಗಮನವಾಗುತ್ತಿರಬೇಕಾದರೆ ನಿಮ್ಮ ವೆಬ್ ಪೇಜ್ ಬೇಗನೇ ಲೋಡ್ ಆಗುತ್ತಿದೆಯೆಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಒಂದು ವರದಿಯ ಪ್ರಕಾರ ಜನರು ಒಂದು ವೆಬ್ ಪೇಜ್ 3 ಸೆಕೆಂಡ್ ಗಳ ಒಳಗೆ ಲೋಡ್ ಆಗದಿದ್ದರೆ ಆ ವಬ್ಸೈಟ್ ನಿಂದ ಹೊರ ಬರುತ್ತಾರೆ.

ಅಷ್ಟೇ ಅಲ್ಲದೆ ಉತ್ತಮ ಸರ್ಚ್ ಎಂಜಿನ್ ರ್ಯಾಂಕಿಂಗ್ ಹೊಂದಲು ಮತ್ತು ಗ್ರಾಹಕರಿಗೆ ಉತ್ತಮ ಅನುಭವ ನೀಡುವಲ್ಲಿ ಲೋಡಿಂಗ್ ಟೈಮ್ ಬಹು ಮುಖ್ಯ ಪಾತ್ರ ವಹಿಸುತ್ತದೆ./

ನೀವು ಬೇರೆ ವೆಬ್ ಪೇಜ್ ಗಳ ವೇಗ ಪರೀಕ್ಷಿಸಲು ಬಯಸಿದರೆ ಅದನ್ನೂ ಮಾಡಬಹುದು. ಸಾಮಾನ್ಯವಾಗಿ ನಿಮ್ಮ ಪೇಜ್ ನ ಲೋಡಿಂಗ್ ವೇಗ ನಿಮ್ಮ ISP ನೀಡುವ ಬ್ಯಾಂಡ್ವಿಡ್ತ್ ಸೇವೆಯ ಗುಣಮಟ್ಟದ ಮೇಲೆ ಅವಲಂಬಿಸಿರುತ್ತದೆ.

ಒಂದು ವೇಳೆ ನೀವು ಗೂಗಲ್ ಕ್ರೋಮ್ ಮೂಲಕ ವೆಬ್ ಪೇಜ್ ನ ಲೋಡಿಂಗ್ ವೇಗ ಪರೀಕ್ಷಿಸಲು ಬಯಸಿದರೆ ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ.

ಹಂತ 1: ನಿಮ್ಮ ವೆಬ್ಸೈಟ್ ನ ವೇಗವನ್ನು ಕರಾರುವಕ್ಕಾಗಿ ತಿಳಿಯಬಯಸಿದರೆ ಮೊದಲಿಗೆ ನಿಮ್ಮ ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಕ್ಯಾಶ್ ಅನ್ನು ಕ್ಲಿಯರ್ ಮಾಡಿ. ಅದಕ್ಕಾಗಿ ಸೆಟ್ಟಿಂಗ್ಸ್-> ಹಿಸ್ಟರಿ-> ಕ್ಲಿಯರ್ ಬ್ರೌಸಿಂಗ್ ಡೇಟಾ ಮೇಲೆ ಕ್ಲಿಕ್ ಮಾಡಿ

ಹಂತ 2: ನಿಮ್ಮ ಮುಂದೆ ಪ್ರಾಂಪ್ಟ್ ಒಂದು ಬಂದಾಗ "ಎಂಪ್ಟಿ ದಿ ಕ್ಯಾಶ್" ಎಂಬ ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ "ಕ್ಲಿಯರ್ ಬ್ರೌಸಿಂಗ್ ಡೇಟಾ" ಮೇಲೆ ಕ್ಲಿಕ್ ಮಾಡಿ.

ಹಂತ 3: ನೀವು ವೆಬ್ಸೈಟ್ ನ ವೇಗ ಪರೀಕ್ಷಿಸಲು ಕ್ರೋಮ್ ನ ಇನ್ಕಾಗ್ನಿಟೋ ಮೋಡ್ ಅನ್ನು ಕೂಡ ಬಳಸಬಹುದು. ಇಲ್ಲಿ ಯಾವುದೇ ರೀತಿಯ ಕುಕೀ ಅಥವಾ ಕ್ಯಾಶ್ ನ ಬಳಕೆ ಆಗುವುದಿಲ್ಲ. ಇನ್ಕಾಗ್ನಿಟೋ ಮೋಡ್ ನಲ್ಲಿ ಹೊಸ ಟ್ಯಾಬ್ ತೆರೆಯಲು Ctrl+Shift+N ಒತ್ತಿರಿ..

ಹಂತ 4: ಕ್ಯಾಶ್ ಅನ್ನು ಡಿಲೀಟ್ ಮಾಡಿದ ನಂತರ Ctrl+Shift+C ಒತ್ತುವ ಮೂಲಕ ಕ್ರೋಮ್ ನ ಕನ್ಸೋಲ್ ಟೂಲ್ಸ್ ತೆರೆಯಿರಿ ಮತ್ತು "ನೆಟ್ವರ್ಕ್" ಮೇಲೆ ಕ್ಲಿಕ್ ಮಾಡಿ

ಹಂತ 5: ಈಗ ಡೊಮೈನ್ ಸ್ಪೇಸ್ ನಲ್ಲಿ ನಿಮ್ಮ ವೆಬ್ಸೈಟ್ ನ ಡೊಮೈನ್ ನೇಮ್ ನಮೂದಿಸಿ. ನಂತರ ಎಂಟರ್ ಒತ್ತಿದ ಕೂಡಲೆ ನಿಮ್ಮ ವೆಬ್ಪೇಜ್ ಲೋಡ್ ಆಗಲು ಆರಂಭವಾಗುತ್ತದೆ. ಈ ಮೂಲಕ ನೀವು ನಿಮ್ಮ ವೆಬ್ಪೇಜ್ ಲೋಡ್ ಆಗಲು ತೆಗೆದುಕೊಳ್ಳುವ ಸಮಯ ತಿಳಿಯಬಹುದು. ಅಲ್ಲದೆ ಟೈಮ್ಲೈನ್ ಟ್ಯಾಬ್ ನಲ್ಲಿ ನಿಮ್ಮ ವೆಬ್ ಪೇಜ್ ನ ಪ್ರತಿಯೊಂದು ಅಂಶ ಲೋಡ್ ಆಗಲು ತೆಗೆದುಕೊಂಡ ಸಮಯವನ್ನೂ ತಿಳಿಯಬಹುದು. ಬೆಸ್ಟ್ ಬ್ಯಾಟರಿ ಸ್ಮಾರ್ಟ್‌ಫೋನ್‌ ಪಟ್ಟಿಯಲ್ಲಿ ಹಾನರ್ 7X ಬೆಸ್ಟ್: ಯಾಕೆ ಅಂದ್ರಾ..?

Leave A Comment