.!"/> ಹೊಸದಾಗಿ ಬಿಡುಗಡೆಯಾಗುವ ಐಫೋನ್‌ನಲ್ಲಿ ಆಂಡ್ರಾಯ್ಡ್ ಮೀರಿಸುವ ಬ್ಯಾಟರಿ... kanasina Bharatha
 

ಹೊಸದಾಗಿ ಬಿಡುಗಡೆಯಾಗುವ ಐಫೋನ್‌ನಲ್ಲಿ ಆಂಡ್ರಾಯ್ಡ್ ಮೀರಿಸುವ ಬ್ಯಾಟರಿ...


By Editor
08:39:07 AM / Wed, Feb 21st, 2018

ಭಾರತದ ಅತೀ ದೊಡ್ಡ ಮೊಬೈಲ್-ಫರ್ಸ್ಟ್- ಆರ್ಥಿಕ ಸೇವೆಗಳ ಪ್ಲ್ಯಾಟ್ಫಾರ್ಮ್ ಆದ ಪೇಟಿಯಂ ತನ್ನ ಗ್ರಾಹಕರಿಗೆ 'ಲಾಯಲ್ಟಿ ಪಾಯಿಂಟ್ಸ್ ಪ್ರೋಗ್ರಾಮ್ ' ಅನ್ನು ಲಾಂಚ್ ಮಾಡಿದ್ದು, ಪೇಟಿಯಂ ಬಳಕೆದಾರರು ಪೇಟಿಯಂ ನಲ್ಲಿ ನಿರ್ವಹಿಸುವ ಹಲವು ಚಟುವಟಿಕೆಗಳ ಮೂಲಕ ಈ ಪಾಯಿಂಟ್ಗಳನ್ನು ಸಂಪಾದಿಸಬಹುದಾಗಿದೆ.

ಗ್ರಾಹಕರು ಪೇಟಿಯಂನಲ್ಲಿ ಗಳಿಸುವ ಎಲ್ಲಾ ಕ್ಯಾಶ್ಬ್ಯಾಕ್ ಗಳು ಪೇಟಿಯಂ ಲಾಯಲ್ಟಿ ಪಾಯಿಂಟ್ ಗಳಾಗಿ ಸಂಗ್ರಹವಾಗುತ್ತದೆ. ಈ ಎಲ್ಲಾ ಪಾಯಿಂಟ್ಗಳನ್ನು ಪೇಟಿಯಂನಲ್ಲಿ ಮತ್ತು ಪೇಟಿಯಂ ಮೂಲಕ ಹಣ ಸ್ವೀಕರಿಸುವ 5 ಮಿಲಿಯನ್ ಗೂ ಅಧಿಕ ವರ್ತಕರ ಬಳಿ ಬಳಸಬಹುದಾಗಿದೆ. ಪೇಟಿಯಂ ಸಂಸ್ಥೆಯು ಮುಂದಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಮತ್ತಷ್ಟು ಸವಲತ್ತುಗಳನ್ನು ನೀಡುವ ಇರಾದೆ ಹೊಂದಿದ್ದು, ತನ್ನ ದೊಡ್ಡ ಗ್ರಾಹಕರ ಬಳಗಕ್ಕೆ ಸೂಕ್ತ ಬಹುಮಾನಗಳನ್ನು ನೀಡುವ ಜೊತೆಗೆ ಡಿಜಿಟಲ್ ವ್ಯವಹಾರಗಳನ್ನು ನಡೆಸುವಂತೆ ಪ್ರೋತ್ಸಾಹಿಸುವ ಯೋಚನೆ ಹೊಂದಿದೆ.

ಗಈ ಹೆಜ್ಜೆ ಪೇಟಿಯಂ ನ ಆಫ್ಲೈನ್ ವರ್ತಕರಿಗೆ ತಮ್ಮ ಬಿಸ್ನೆಸ್ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಪೇಟಿಯಂ ಬಹಳ ವಿಸ್ತಾರವಾದ ಇಕೋಸಿಸ್ಟಮ್ ಹೊಂದಿದ್ದು ರೀಚಾರ್ಜ್ಗಳು, ಯುಟಿಲಿಟಿ ಪಾವತಿಗಳು, ಮೂವಿ/ಫ್ಲೈಟ್/ಬಸ್ ಟಿಕೆಟ್ ಕಾದಿರಿಸುವಿಕೆಗಳು ಮೊದಲಾದ ಹಲವು ರೀತಿಯ ಸೇವೆಗಳನ್ನು ನೀಡುತ್ತದೆ. ಹಲವಾರು ಆನ್ಲೈನ್ ಪ್ಲ್ಯಾಟ್ಫಾರ್ಮ್ ಗಳಲ್ಲಿ ಪೇಟಿಯಂ ಬಹಳಷ್ಟು ಜನರ ಆದ್ಯತೆಯ ಆಯ್ಕೆಯಾಗಿದೆ.

ಅಲ್ಲದೆ ಪೇಟಿಯಂ ನ ಖ್ಯಾತ ಪೇಟಿಯಂ QR ಬಹಳಷ್ಟು ಆಫ್ಲೈನ್ ವರ್ತಕರಿಗೆ 0% ವೆಚ್ಚದಲ್ಲಿ ಪೇಟಿಯಂ, ಯುಪಿಐ ಮತ್ತು ಕಾರ್ಡ್ ಪಾವತಿಗಳ ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಅಗುವ ಸೌಲಭ್ಯ ನೀಡುತ್ತದೆ. ಪೇಟಿಯಂ ಲಾಯಲ್ಟಿ ಪಾಯಿಂಟ್ ನ ಮೂಲಕ ಪೇಟಿಯಂ ತನ್ನ ಸಂಪೂರ್ಣ ಇಕೋಸಿಸ್ಟಮ್ ಅನ್ನು ಜೊತೆಯಾಗಿರಿಸಲು ಪ್ರಯತ್ನಿಸುತ್ತಿದ್ದು ಗ್ರಾಹಕರು ಈ ಇಕೋಸಿಸ್ಟಮ್ ನಲ್ಲಿ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಲಾಯಲ್ಟಿ ಪಾಯಿಂಟ್ಗಳನ್ನು ಗಳಿಸಿ, ಸಂಗ್ರಹಿಸಿ ವ್ಯಯಿಸಬಹುದು. ಉದಾಹರಣೆಗೆ, ಒಬ್ಬ ಗ್ರಾಹಕ ತನ್ನ ನೆರೆಯಲ್ಲಿರುವ ಅಂಗಡಿಗೆ ಹೋಗಿ ತನ್ನ ಪೇಟಿಯಂ QR ಅನ್ನು ಸ್ಕ್ಯಾನ್ ಮಾಡುವ ಮೂಲಕ ತನ್ನ ಪಾಯಿಂಟ್ಗಳನ್ನು ವ್ಯಯಿಸಬಹುದು.

"ಪೇಟಿಯಂ ಅನ್ನು ಎಲ್ಲರ ಆದ್ಯತೆಯ ಪಾವತಿಯ ಆಯ್ಕೆಯನ್ನಾಗಿ ಮಾಡಿರುವ ನಮ್ಮ ಲಕ್ಷಾಂತರ ಗ್ರಾಹಕರಿಗೆ ನಾವು ತುಂಬಾ ಕೃತಜ್ಞರಾಗಿದ್ದೇವೆ. ಪೇಟಿಯಂ ಲಾಯಲ್ಟಿ ಪಾಯಿಂಟ್ಸ್ ನೊಂದಿಗೆ ನಾವು ನಮ್ಮ ಗ್ರಾಹಕರಿಗೆ ಆಕರ್ಷಕ ಅನುಭವ ನೀಡಲಿದ್ದು, ಗ್ರಾಹಕರು ಈಗ ಪೇಟಿಯಂ ನಲ್ಲಿ ವ್ಯವಹರಿಸುವಾಗ ಮತ್ತು ಇತರ ದೊಡ್ಡ ಆನ್ಲೈನ್ ಮಳಿಗೆಗಳಲ್ಲಿ ಅಥವಾ ಆಫ್ಲೈನ್ ವರ್ತಕರೊಂದಿಗೆ ವ್ಯವಹರಿಸುವಾಗ ಲಾಯಲ್ಟಿ ಪಾಯಿಂಟ್ಗಳನ್ನು ಗಳಿಸಬಹುದಲ್ಲದೆ ಅದನ್ನು ವ್ಯಯಿಸಬಹುದು ಕೂಡ. ಇದು ನಮ್ಮ ಗ್ರಾಹಕರಿಗೆ ಪೇಟಿಯಂ ಅನ್ನು ಮತ್ತಷ್ಟು ಬಳಸಲು ಪ್ರೋತ್ಸಾಹಿಸುತ್ತದಲ್ಲದೆ ನಮ್ಮ ಮರ್ಚಂಟ್ ಪಾರ್ಟನರ್ಗಳ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ತರಬಹುದು." ಎಂದು ಈ ಕುರಿತು ಮಾತನಾಡಿದ ಪೇಟಿಯಂ ನ ಸೀನಿಯರ್ ವೈಸ್-ಪ್ರೆಸಿಡೆಂಟ್ ಆದ ದೀಪಕ್ ಎಬೋಟ್ ಅವರು ಹೇಳಿದ್ದಾರೆ.

Leave A Comment