ಟೈಗರ್‌ ಜಿಂದಾ ಹೈ: ಮೂರೇ ದಿನದಲ್ಲಿ 114.93 ಕೋಟಿ ಕೊಳ್ಳೆ


By Editor
08:38:33 AM / Wed, Feb 21st, 2018

ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಮತ್ತು ಕತ್ರೀನಾ ಕೈಫ್ ಅಭಿನಯದ ಟೈಗರ್‌ ಜಿಂದಾ ಹೈ ನೂತನ ಚಿತ್ರ ಬಾಕ್ಸ್‌ ಆಫೀಸನ್ನು ಚಿಂದಿ ಚೂರು ಮಾಡಿ ಕೊಳ್ಳೆ ಹೊಡೆಯುತ್ತಿದೆ. ಬೆಳ್ಳಿ ತೆರೆ ಕಂಡ ಕೇವಲ ಮೂರು ದಿನಗಳ ಒಳಗೆ ಈ ಚಿತ್ರ 114.93 ಕೋಟಿ ರೂ. ಬಾಕ್ಸ್‌ ಆಫೀಸ್‌ ಗಳಿಕೆಯನ್ನು ದಾಖಲಿಸಿದೆ.

ಟೈಗರ್‌ ಜಿಂದಾ ಹೈ ಚಿತ್ರ ಪೂರ್ತಿಯಾಗಿ ಆ್ಯಕ್ಷನ್‌ ಚಿತ್ರವೇ ಆದರೂ ಅದರ ಗಟ್ಟಿ ಕಥೆ ಮತ್ತು ನಿರೂಪಣೆಯೇ ಅದರ ಜೀವಾಳವಾಗಿದೆ; ಅಂತೆಯೇ ನಟ ಸಲ್ಮಾನ್‌ ಖಾನ್‌ ಮತ್ತು ಕತ್ರೀನಾ ಅಭಿನಯದಲ್ಲಿ ಮಿಂಚಿದ್ದಾರೆ ಎಂದು ಚಿತ್ರ ವಿಮರ್ಶಕರು ಮತ್ತು ವೀಕ್ಷಕರು ಏಕ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದುವೇ ಚಿತ್ರದ ಹೆಗ್ಗಳಿಕೆಯಾಗಿದೆ.

ಅಂದ ಹಾಗೆ ಟೈಗರ್‌ ಜಿಂದಾ ಹೈ ಚಿತ್ರ ಸಲ್ಮಾನ್‌ ಅವರ 100 ಕೋಟಿ ರೂ. ಗಳಿಕೆ ದಾಟಿದ ಸಾಧನೆ ದಾಖಲಿಸಿರುವ 12ನೇ ಬಾಲಿವುಡ್‌ ಚಿತ್ರವಾಗಿದೆ.

ಸಲ್ಮಾನ್‌ ಖಾನ್‌ ಅವರ ಈ ಹಿಂದಿನ ಬಜರಂಗೀ ಭಾಯಿಜಾನ್‌ ಚಿತ್ರದ ಸಾರ್ವಕಾಲಿಕ ಗಳಿಕೆ 320.34 ಕೋಟಿ ರೂ.ಗಳಾಗಿದ್ದು ಅನಂತರದ ಸುಲ್ತಾನ್‌ ದಾಖಲೆ 300.45 ಕೋಟಿ ರೂ.ಗಳಾಗಿದ್ದು ಆ ದಾಖಲೆಗಳನ್ನು ಅವರ ಈ ಹೊಸ ಚಿತ್ರ ಮುರಿಯುವುದೇ ಎಂಬುದನ್ನು ಈಗ ಕಾತರದಿಂದ ಎದುರುನೋಡಲಾಗುತ್ತಿದೆ.

ಟೈಗರ್‌ ಜಿಂದಾ ಹೈ ಚಿತ್ರವನ್ನು ನಿರ್ದೇಶಿಸಿದವರು "ಸುಲ್ತಾನ್‌' ನಿರ್ದೇಶಕ ಅಲಿ ಅಬ್ಟಾಸ್‌ ಜಫ‌ರ್‌.

Leave A Comment

ಮನರಂಜನೆ

ಮನರಂಜನೆ

By Editor
08:38:33 AM / Wed, Feb 21st, 2018

ಮನರಂಜನೆ

By Editor
08:38:33 AM / Wed, Feb 21st, 2018

ಮನರಂಜನೆ

By Editor
08:38:33 AM / Wed, Feb 21st, 2018
ಟೈಗರ್‌ ಜಿಂದಾ ಹೈ:

ಮನರಂಜನೆ

ಟೈಗರ್‌ ಜಿಂದಾ ಹೈ: ಮೂರೇ ದಿನದಲ್ಲಿ 114.93 ಕೋಟಿ ಕೊಳ್ಳೆ !
By Editor
08:38:33 AM / Wed, Feb 21st, 2018
ಗಂಟೆ, ದಿನ, ಸೆಕೆಂಡುಗಳ ಲೆಕ್ಕಾಚಾರ

ಮನರಂಜನೆ

ಗಂಟೆ, ದಿನ, ಸೆಕೆಂಡುಗಳ ಲೆಕ್ಕಾಚಾರ
By Editor
08:38:33 AM / Wed, Feb 21st, 2018