ಗೆಲುವಿನ ಟ್ರ್ಯಾಕ್ ಗೆ ಮರಳಿದ ಬಿಜೆಪಿ: ಸೆನ್ಸೆಕ್ಸ್ 290 ಅಂಕಗಳ ಏರಿಕೆ!


By Editor
08:39:42 AM / Wed, Feb 21st, 2018

ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ಚುನಾವಣಾ ಫಲಿತಾಂಶ ಭಾರತೀಯ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಬೆಳಗ್ಗೆ ಕುಸಿತಕಂಡಿದ್ದ ಷೇರುಮಾರುಕಟ್ಟೆ ಇದೀಗ ಚೇತರಿಕೆಯತ್ತ ಮುಖಮಾಡಿದೆ.

ಬೆಳಗ್ಗೆ ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ವೇಳೆ ಮಾರುಕಟ್ಟೆ ಆರಂಭದಲ್ಲೇ 600 ಅಂಕಗಳನ್ನು ಸೆನ್ಸೆಕ್ಸ್ ಕಳೆದುಕೊಂಡಿತ್ತು. ಇದೀಗ ಗುಜರಾತ್ ಚುನಾವಣಾ ಮತಎಣಿಕೆಯಲ್ಲಿ ಬಿಜೆಪಿ ಮತ್ತೆ ಪುಟಿದೆದಿದ್ದು, ಸರಳ ಬಹುಮತದತ್ತ ಸ್ಪಷ್ಟ ಹೆಜ್ಜೆಹಾಕಿರುವಂತೆಯೇ ಪಾತಾಳಕ್ಕಿಳಿದಿದ್ದ ಸೆನ್ಸೆಕ್ಸ್ ಕೂಡ ಏರಿಕೆಯತ್ತ ಮುಖ ಮಾಡಿದೆ.

ಬೆಳಗ್ಗೆ ಮಾರುಕಟ್ಟೆ ಆರಂಭದಲ್ಲೇ ಬರೊಬ್ಬರಿ 600 ಅಂಕಗಳಷ್ಟು ಕುಸಿತ ಕಂಡಿದ್ದ ಸೆನ್ಸೆಕ್ಸ್ ಇಂದು ಮಧ್ಯಾಹ್ನದ ವೇಳೆಗೆ ಚೇತರಿಸಿಕೊಂಡಿದ್ದು, ಒಟ್ಟು 290 ಅಂಕಗಳ ಏರಿಕೆ ಕಂಡಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು ಶೇ.086ರಷ್ಚು ಏರಿಕೆ ದಾಖಲಿಸಿದ್ದು, ಆ ಮೂಲಕ ತನ್ನ ಗಳಿಕೆಯನ್ನು 33,758.83 ಅಂಕಗಳಿಗೆ ಏರಿಕೆ ಮಾಡಿಕೊಂಡಿದೆ.

ಇನ್ನು ನಿಫ್ಟಿ 50 ಕೂಡ ಶೇ.0.95ರಷ್ಟು ಏರಿಕೆ ದಾಖಲಿಸಿದ್ದು, ಒಟ್ಟು 96.5 ಅಂಕಗಳ ಏರಿಕೆ ಮೂಲಕ 10,429.90ಗಳಿಗೆ ಏರಿಕೆಯಾಗಿದೆ.

Leave A Comment

ವಾಣಿಜ್ಯ