26 ವರ್ಷ ವಯಸ್ಸಿನ ಆಟಗಾರರಿಗಿಂತ ಧೋನಿ ಹೆಚ್ಚು ಫಿಟ್: ರವಿ ಶಾಸ್ತ್ರಿ


By Editor
08:38:51 AM / Wed, Feb 21st, 2018

ಭಾರತ ಕ್ರಿಕೆಟ್ ತಂಡದಲ್ಲಿ ಫಿಟ್ ಹಾಗೂ ಫಾಸ್ಟರ್ ಆಗಿರುವ ಆಟಗಾರರು ಎಂಎಸ್ ಧೋನಿಗಿಂತ 10 ವರ್ಷ ಕಿರಿಯರು ಆದರೆ ಎಂಎಸ್ ಧೋನಿ 26 ವರ್ಷ ವಯಸ್ಸಿನ ಆಟಗಾರರಿಗಿಂತ ಹೆಚ್ಚು ಫಿಟ್ ಆಗಿದ್ದಾರೆ ಎಂದು ಟೀಂ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಎಂಎಸ್ ಧೋನಿ ಅವರಲ್ಲಿ ನ್ಯೂನತೆಗಳನ್ನು ಹುಡುಕುವ ಟೀಕಾಕಾರರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 36 ನೇ ವಯಸ್ಸಿನಲ್ಲಿ ಹೇಗಿದ್ದರು ಎಂಬುದನ್ನು ವಿಶ್ಲೇಷಿಸಿಕೊಳ್ಳಬೇಕು ಎಂದು ರವಿ ಶಾಸ್ತ್ರಿ ಸಲಹೆ ನೀಡಿದ್ದಾರೆ. ಎಂಎಸ್ ಧೋನಿ ಅವರ ಇತ್ತೀಚಿನ ಬ್ಯಾಟಿಂಗ್ ಫಾರ್ಮ್ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಆದರೆ ನೆನ್ನೆಯಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದ್ದರು.

ನಾವು ಮೂರ್ಖರಲ್ಲ, ಈ ಕ್ರೀಡೆಯನ್ನು 30-40 ವರ್ಷಗಳಿಂದ ಗಮನಿಸುತ್ತಿದ್ದೇವೆ. ವಿರಾಟ್ ಕೊಹ್ಲಿ ಭಾರತ ತಂಡ ಪ್ರವೇಶಿಸಿ ಒಂದು ದಶಕವಾಯಿತು. ಧೋನಿ ಈ ವಯಸ್ಸಿನಲ್ಲಿಯೂ 26 ವರ್ಷ ವಯಸ್ಸಿನ ಆಟಗಾರರಿಗಿಂತ ಹೆಚ್ಚು ಫಿಟ್ ಆಗಿದ್ದಾರೆ. ಆದರೆ ಟೀಕೆ ಮಾಡುವವರು ತಾವೂ ಸಹ ಕ್ರೀಡಾಪಟುಗಳಾಗಿದ್ದೆವು ಎಂಬುದನ್ನು ಮರೆತುಬಿಡುತ್ತಾರೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ವಿಕೆಟ್ ಹಿಂದೆ ಧೋನಿ ಕ್ಷಣ ಮಾತ್ರದಲ್ಲಿ ಸ್ಟಂಪ್ ಎಗರಿಸುವುದನ್ನು ಇಂದಿಗೂ ಯಾರಿಂದಲೂ ಸರಿಗಟ್ಟುವುದಕ್ಕೆ ಸಾಧ್ಯವಿಲ್ಲ, ಯುವ ಆಟಗಾರರಲ್ಲಿ ಧೋನಿಯವರಲ್ಲಿರುವ ಗೇಮ್ ಚೇಂಜರ್ ಸಾಮರ್ಥ್ಯವನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಅವರೂ ಹೇಳಿದ್ದಾರೆ. ಧೋನಿಯನ್ನು ಟೀಕಿಸುವವರು ಕನ್ನಡಿ ಎದುರು ನಿಂತು 36 ನೇ ವಯಸ್ಸಿನಲ್ಲಿ ನಾವೇನಾಗಿದ್ದೆವು ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. .

Leave A Comment

ಕ್ರೀಡೆ

ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್

ಕ್ರೀಡೆ

ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್

By Editor
08:38:51 AM / Wed, Feb 21st, 2018
ರವಿ ಶಾಸ್ತ್ರಿ

ಕ್ರೀಡೆ

26 ವರ್ಷ ವಯಸ್ಸಿನ ಆಟಗಾರರಿಗಿಂತ ಧೋನಿ ಹೆಚ್ಚು ಫಿಟ್

By Editor
08:38:51 AM / Wed, Feb 21st, 2018
ಆರ್ ಸಿಬಿ ಕೋಚ್ ಆಗುವರೇ ಗ್ಯಾರಿ?

ಕ್ರೀಡೆ

ಐಪಿಎಲ್ 2018 : ಆರ್ ಸಿಬಿ ಕೋಚ್ ಆಗುವರೇ ಗ್ಯಾರಿ?

By Editor
08:38:51 AM / Wed, Feb 21st, 2018