ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ


By Editor
08:41:07 AM / Wed, Feb 21st, 2018

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಮತ್ತು ಅಂತಿಮ ಟಿ20ಐ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅತಿಥೇಯ ಭಾರತ ತಂಡ 5 ವಿಕೆಟ್​ಗಳ ಜಯ ಗಳಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡಿದೆ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನೀಡಿದ್ದ 136 ರನ್​ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 19.2 ಓವರ್​ಗಳಲ್ಲಿ 139 ರನ್​ ಗಳಿಸಿ ಗೆಲುವಿನ ನಗೆ ಬೀರಿತು. ಎಂಎಸ್ ಧೋನಿ ಅವರು ಮತ್ತೊಮ್ಮೆ ಗೆಲುವಿನ ರನ್ ಬಾರಿಸಿ, ಅಭಿಮಾನಿಗಳಲ್ಲಿ ಕಿಚ್ಚು ಹಬ್ಬಿಸಿದರು.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸತತ ಅರ್ಧಶತಕ ಗಳಿಸಿದ್ದ ಕನ್ನಡಿಗ ಕೆ.ಎಲ್​. ರಾಹುಲ್​ ಅವರು ಈ ಪಂದ್ಯದಲ್ಲಿ 4 ರನ್​ ಗಳಿಸಿ ಔಟಾಗಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಉಳಿದಂತೆ, ನಾಯಕ ರೋಹಿತ್ ಶರ್ಮ 27, ಮನೀಷ್​ ಪಾಂಡೆ 32, ಶ್ರೇಯಸ್​ ಅಯ್ಯರ್​ 30 ಗಳಿಸಿದರು. ಅಂತಿಮವಾಗಿ ದಿನೇಶ್​ ಕಾರ್ತಿಕ್​ ಅಜೇಯ 18 ಹಾಗೂ ಮಹೇಂದ್ರ ಸಿಂಗ್​ ಧೋನಿ ಅಜೇಯ 16 ರನ್​ ಗಳಿಸಿ ತಂಡಕ್ಕೆ ಜಯ ತಂದಿತ್ತರು.

Leave A Comment

ಕ್ರೀಡೆ

ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್

ಕ್ರೀಡೆ

ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್

By Editor
08:41:07 AM / Wed, Feb 21st, 2018
ರವಿ ಶಾಸ್ತ್ರಿ

ಕ್ರೀಡೆ

26 ವರ್ಷ ವಯಸ್ಸಿನ ಆಟಗಾರರಿಗಿಂತ ಧೋನಿ ಹೆಚ್ಚು ಫಿಟ್

By Editor
08:41:07 AM / Wed, Feb 21st, 2018
ಆರ್ ಸಿಬಿ ಕೋಚ್ ಆಗುವರೇ ಗ್ಯಾರಿ?

ಕ್ರೀಡೆ

ಐಪಿಎಲ್ 2018 : ಆರ್ ಸಿಬಿ ಕೋಚ್ ಆಗುವರೇ ಗ್ಯಾರಿ?

By Editor
08:41:07 AM / Wed, Feb 21st, 2018