ಸಮಾಜ ಸೇವಾ ಮಾಣಿಕ್ಯ ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

 
By Editor
08:57:01 AM / Wed, Feb 21st, 2018

ದೇವರ ಮೇಲೆ ಅಗ್ಗಾದ ಪ್ರೀತಿ, ಜನರ ಸೇವೆಯಲ್ಲಿ ದೇವರನ್ನು ಕಾಣುವಿನ ಮೂಲ ಕೊಡಗಿನವರಾದರೂ ಬೆಂಗಳೂರಿನ ದಲಿತರಿಗೆ,ಬಡವರಿಗೆ ಮತ್ತು ಅವಶ್ಯಿರುವವರಿಗೆ ಸಹಾಯ ಮಾಡುವ ಸಮಾಜ ಸೇವಾ ಮಾಣಿಕ್ಯವೇ ನಮ್ಮೇಲ್ಲರ ಪ್ರೀತಿಯ ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ. ಶ್ರೀಯುತರ ತಂದೆಯವರ ಕಾಲದಲ್ಲಿಯೇ ಬೆಂಗಳೂರಿಗೆ ಬಂದು ಹಾಗೂ ಇವರ ತಂದೆಯರಾದ ಶ್ರೀ ಲೇ.ಬಿ.ಫ್ರಾನ್ಸಿಸ್ ಅವರು ಸಮಾಜ ಸೇವಕರು ಮತ್ತು ರಾಜಕೀಯ ದುರೀಣರು ಪ್ರಗತಿಪರ ಚಿಂತಕರು ಅವರ ಆರ್ಶಿವಾದ ಮತ್ತು ಮಾರ್ಗದರ್ಶನ ಬೆಳೆದವರು ಅವರ ಪ್ರೀತಿಯ ಮಗ ಡ್ಯಾನಿಯಲ್ ಅವರು. ಡಿಪ್ಲೋಮಾ ಇನ್ ವಾಟರ್ ಟ್ರಿಂಟಮೆಂಟ್ 1983 ರಿಂದ 1988 ರ ವರೆಗೆ ಓದು ಮುಗಿಸಿ ಏಷ್ಯಾದ ಹೆಸರಾಂತ ಕಂಪನಿಯೊಂದರಲ್ಲಿ ಸತತ 7ವರ್ಷ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ 7ನೇ ವಯಸ್ಸಿನಿಂದ ಚರ್ಚಿನ ಸಂಪರ್ಕ ಇಟ್ಟುಕೊಂಡು, ದೇವರ ಸೇವೆಯಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿದ್ದಾರೆ.2011 ರಲ್ಲಿ ತಂದೆಯವ ನಿಧನ ಆದ್ದಾಗ ಕಂಪನಿಯ ಕೆಲಸ ಬಿಟ್ಟು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಅದರಲ್ಲೂ ಯಶಸ್ವ ಕಂಡರು.ತಂದೆಯವರ ರಾಜಕೀಯ ಅನುಭವ ಮತ್ತು ಅವರ ಆಶೆಗಳನ್ನು ಈಡೇರಿಸಲು 1990 ರಿಂದಲ್ಲೆ ರಾಜಕೀಯ ಮಾಡುತ್ತಿದ್ದರು ಜೆ.ಸಿ.ನಗರದ ಜಯಮಹಲ ವಾರ್ಡ್ ಅಂದರೆ ಈಗಿನ ಶಿವಾಜಿನಗರ ವಾರ್ಡ್‍ನಲ್ಲಿ ಹಲವಾರು ಉತ್ತಮ ಕೆಲಸಗಳನ್ನು ಮಾಡುತ್ತಾ ನಾಡಿನ ಅತ್ಯುತ್ತಮ ರಾಜಕಾರಣಿಗಳಲ್ಲಿ ಹೆಸರಾಂತ ಜೀವರಾಜ ಆಳ್ವ,ರತನಸಿಂಗ್ ಮತ್ತು ಸಿದ್ದರಾಮಯ್ಯನವರ ಸಂಪರ್ಕದಿಂದ ಜನತಾ ಪಕ್ಷ ನಂತರದ ಜನತಾದಳ ಪಕ್ಷಗಳಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸಿ ರಾಜಕೀಯ ಅನುಭವ ಜೊತೆಗೆ ಸಮಾಜ ಸೇವೆ ಮಾಡುತ್ತಾ ಇಡೀ ಜೀವನವನ್ನೇ ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ.ಜೆ.ಹೆಚ್.ಪಟೇಲ ಆಡಳಿತದಲ್ಲಿ ಈ ಬಾಗದ ಜನರಿಗೆ ಹಲವಾರು ಸೇವೆಗಳನ್ನು ಮಾಡುತ್ತಾ ಇವತ್ತಿನ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಆಪ್ತರಾಗಿ ಅವರ ಹಿಂಬಾಲಕರಾಗಿ ಅವರೊಂದಿಗೆ ಹಲವಾರು ಪ್ರಗತಿಪರ ವಿಚಾರಗಳಿಗೆ ಹೆಜ್ಜೆ ಹಾಕಿದ್ದಾರೆ. ಬಡತನಕ್ಕಿಂತ ಅವಶ್ಯಕತೆ ಇರುವವರಿಗೆ ಸಹಾಯ ಮಾಡಬೇಕು ಎಂಬ ಹಂಬಲದಿಂದ ಸಮಾಜ ಸೇವೆ ಮತ್ತು ರಾಜಕೀಯವನ್ನು ಕಾಯಾ ವಾಚಾ ಮನಸ್ಸಾ ನಿಷ್ಠೆಯಿಂದ ಮಾಡುತ್ತಾ ಇಷ್ಟು ದಿನದ ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚಿಕ್ಕಿ ಇಲ್ಲದೆದಂತೆ ಬಾಳಿ ಬದುಕಿ ತೋರಿಸಿದವರ ಸಾಲಿನಲ್ಲಿ ಮೊದಲಿಗರು ಅನ್ನಬಹುದು. ಮಾನ್ಯ ಸಿದ್ದಾರಾಮಯ್ಯನವರ ಪ್ರಭಾವದಿಂದ ಅಹಿಂದ ಸಂಘಟನೆಯಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸಿ,ಮಾನ್ಯ ಸಿದ್ದರಾಮಯ್ಯನವರ ನಡೆಯಂತೆ ಕಾಂಗ್ರೆಸ್ ಸೇರಿ ಹಲವಾರು ಪ್ರಗತಿಪರ ಕೆಲಸಗಳನ್ನು ಅಧಿಕಾರಿಗಳು ಸರ್ಕಾರ,ಸ್ಥಳೀಯ ಜನಪ್ರತಿನಿಧಿನಿಧಿಗಳಿಂದ ಮಾಡಿಸುತ್ತಾ ಬಂದಿದ್ದಾರೆ.2013 ರ ವಿಧಾನ ಸಭಾ ಚುನಾವಣೆಯಲ್ಲಿ ಬೆಂಗಳೂರಿನ ಶಿವಾಜಿ ನಗರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ದಿಸಿ,ಜನರ ಮನಗೆದ್ದರು ಚುನಾವಣಾ ತಂತ್ರ ಹಣಬಲದ ಮತ್ತು ಕೇಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸೋತ್ತರು. ಇವರು ರಾಜಕೀಯವನ್ನು ಸೋಲು ಮತ್ತು ಗೆಲವಿಗೆ ಯಾವತ್ತು ವ್ಯತ್ಯಾಸ ಮಾಡುವವರು ಅಲ್ಲ. ಚುನಾವಣಾ ಸೊಲ್ಲಿನಿಂದ ಮನೆಯಲ್ಲಿ ಕುಳಿತುಕೊಳ್ಳದೇ ಜನಸೇವೆ ಜನಾರ್ದನ ಸೇವೆ ಅಂತ ತಿಳಿದು ಜನಸೇವೆಯಲ್ಲೆ ಜೀವನದ ಆತ್ಮಾನಂದ ಪಡೆಯುತ್ತಿದ್ದಾರೆ. ಇವರ ಸಮಾಜ ಸೇವೆಯೂ ಯಾವತ್ತು ಮಾಸಿಲ್ಲ ಮತ್ತು ಅಪೇಕ್ಷೆ ಪಡೆಯದೇ ಜೀವನದ ಪೂರ್ಣ ಪ್ರಮಾಣವು ಜನರ ಸೇವೆಯಲ್ಲೆ ತೊಡಗಿದ್ದಾರೆ. ಚರ್ಚಿನಲ್ಲೂ ಕ್ಯಾಟಲಿಸ್ಟ್‍ರಾಗಿ ಸೇವೆ ಸಲ್ಲಿಸುತ್ತಾ ದೇವರ ಪ್ರಾರ್ಥನೆಗಳನ್ನು ಜನತೆಗೆ ತಲುಪಿಸಿ ಭಗವಂತನಲ್ಲಿ ಏಸು ಪ್ರಭುವಿನಲ್ಲಿ ಜನರ ಕಷ್ಟಗಳನ್ನು ಪರಿಹರಿಸುತ್ತಾ, ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಹುಟ್ಟು ಸಮಾಜಸೇವಕರಾಗಿ ಸೇವೆ ಪ್ರಾರಂಬಿಸಿ,ಇವತ್ತಿನವರೆಗೆ ಜೀವನದಲ್ಲಿ ಭ್ರಷ್ಠಾಚಾರ ಅಪರಾಧ ಮಾಡದೇ ರಾಜಕೀಯ ಮಾಡುತ್ತಾ,ರಾಜಕೀಯದಲ್ಲೂ ಸಮಾಜ ಸೇವೆಯನ್ನು ಮಾಡುತ್ತಾ ಜನರ ಮನಸ್ಸಿನಲ್ಲೂ ಹಲವಾರು ಹಿರಿಯ ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇವರು ಶಿವಾಜಿನಗರದ ಜನರ ಮನೆಮಾತಾಗಿದ್ದಾರೆ. ಈ ಭಾಗದಲ್ಲಿ ಹಲವಾರು ಧಾರ್ಮಿಕ ಸಾಂಸ್ಕøತೀಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡುತ್ತಾ ಜೊತೆಗೆ ಸ್ಥಳೀಯ ಪ್ರತಿಭಾವಂತ ಮಕ್ಕಳಿಗೆ ಬಡವರಿಗೆ ದಲಿತರಿಗೆ ಮತ್ತು ಹಿಂದುಳಿದವರಿಗೆ ಸಹಾಯ ಸಹಕಾರ ನೀಡುತ್ತಾ ಎಲ್ಲರ ಮೆಚ್ಚುಗೆಯ ನಾಯಕರಾಗಿದ್ದಾರೆ. ಇಂತಹ ಮುತ್ಸದ್ಧಿ ರಾಜಕಾರಣಿ ಮತ್ತು ಸಮಾಜ ಸೇವಕರಿಗೆ ರಾಜಕೀಯ ಅವಕಾಶ ನೀಡಿದ್ದರೆ, ಭವ್ಯ ಭಾರತದ ಕನಸು ನನಸಾಗುತ್ತದೆ.ಇವರ ಕನಸು ಕನಸಾಗಲೆಂದು ಕನಸಿನ ಭಾರತ ಪತ್ರಿಕೆ ಹಾರೈಸುತ್ತದೆ.

Leave A Comment

ಲೇಖನಗಳು

ಶ್ರೀ ಸುಭಾಷ್ ಭರಣಿ.

ಲೇಖನಗಳು

ಮಾನವೀಯ ಮೌಲ್ಯದ ಹರಿಕಾರ ಶ್ರೀ ಸುಭಾಷ್ ಭರಣಿ.

By Editor
08:57:01 AM / Wed, Feb 21st, 2018
ಶ್ರೀ ವಸಂತ ಕುಮಾರ್

ಲೇಖನಗಳು

ಶ್ರೀ ವಸಂತ ಕುಮಾರ್

By Editor
08:57:01 AM / Wed, Feb 21st, 2018
ಲೇಖನಗಳು

ಲೇಖನಗಳು

ಅಪ್ಪಟ ಕನ್ನಡ ಕಲಾವಿದೆ ಅನು ಚಿತ್ತ ರಾಜಕೀಯ ಅತ್ತ.

By Editor
08:57:01 AM / Wed, Feb 21st, 2018
ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

ಲೇಖನಗಳು

ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

By Editor
08:57:01 AM / Wed, Feb 21st, 2018
ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

ಲೇಖನಗಳು

ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

By Editor
08:57:01 AM / Wed, Feb 21st, 2018