ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

By Editor
08:56:43 AM / Wed, Feb 21st, 2018

“ ಭೂಮಿಯ ಮೇಲೆ ಹುಟ್ಟುತ್ತಲ್ಲೆ ಕೇಲವರಿಗೆ ಹೋರಾಟದ ಗುಣ ಬಂದಿರುತ್ತದೆ ಅಂದರೆ ರಕ್ತಗತವಾದ ಹೋರಾಟ ಮತ್ತು ಸಮಾಜದ ಏಳಿಗಾಗಿ ನಡೆಯುವ ಒಂದು ಯುದ್ಧ “ ಇದನ್ನು ಅಮೇರಿಕದ ಕೆನಡಿ ಹೇಳಿರುವುದನ್ನು ಓದುವಾಗ ನಮಗೆ ಅತೀ ಹೆಚ್ಚಾಗಿ ನೆನಪಾಗುವುದು ಸಮಾಜದ ಅತ್ಯಂತ ಸರಳ ಸಜ್ಜನ ಮತ್ತು ಕ್ರಿಯಾಶೀಲ ಹೋರಾಟಗಾರ ಶ್ರೀ ಎ.ಎಸ್.ರಾಜನ್. ವಿಶ್ವದ ಹಲವಾರು ವಿಬಿನ್ನ ಹೋರಾಟದ ಆಯಾಮಗಳನ್ನು ಕಂಡು ಕೇಳಿರುವ ಶ್ರೀಯುತರು ಬಡವರು,ದಲಿತರು,ಹಿಂದುಳಿದವು ಮತ್ತು ಕಾರ್ಮಿಕರ ಪರ ಹಲವಾರು ವರ್ಷಗಳಿಂದ ದ್ವನಿ ಎತ್ತಿದ್ದಾರೆ ಆದರೆ ಪ್ರಚಾರದ ಅಬ್ಬರವಿಲ್ಲದ ಇವರ ಸರಳತೆಗೆ ಹೋರಾಟಗಳು ಪ್ರಚಾರ ಪಡೆಯಲಿಲ್ಲ ಆದರೆ ತಲುಪಬೇಕಾದ ವ್ಯವಸ್ಥೆಗೆ ತಲುಪಿಸಿದ ಗರುಮೆ ಮಾತ್ರ ಶ್ರೀಯುತರಿಗೆ ಸಲ್ಲುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ನಾಡಿನ ದೇಶದ ಹಿಂದುಳಿದವ ಬಗ್ಗೆ ನಿಜವಾದ ಕಾಳಜಿಯಿಂದ ಹೋರಾಟಕ್ಕೆ ಇಳಿದ ಕೇಲವರಲ್ಲಿ ಶ್ರೀಯುತ ರಾಜನ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಶ್ರೀ ಎ.ಎಸ್.ರಾಜನ್ ಅವರು ಕರ್ನಾಟಕ ಗೋವರ್‍ಮೆಂಟ್ ಫಿಸ್‍ರ ಡಿಪಾಟ್‍ಮೆಂಟ್ ಕ್ಲಾಸ್ 4 ಎಂಪಾಲಿಯ ಅಶೋಸಿಯನ್ಸ್ ಸಂಸ್ಥಾಪಕ ಅದ್ಯಕ್ಷರು. ಸಂಸ್ಥಾಪಕ ಅಧ್ಯಕ್ಷರ ಇಂಡಿಯನ್ ಬಹುಜನ ಪೆಡೆರಷನ್, ಭಾರತೀಯ ರಿಜರ್ವ್ ಬ್ಯಾಂಕಿನ ಅಸೋಸಿಯನ್‍ನ ಸಂಸ್ಥಾಪಕ ಕಾರ್ಯದರ್ಶಿಯಾಗಿ ಹಲವಾರು ವರ್ಷ ನೌಕರರ ಪರವಾಗಿ ಹೋರಾಟ ಮಾಡಿ,ನೌಕರರ ವರ್ಗಕ್ಕೆ ನೆಮ್ಮದಿ ತಂದಿದ್ದಾರೆ.ದಲಿತರು ಮತ್ತು ಹಿಂದುಳಿದವ ದ್ವನಿಯಾಗಿ ಹಲವಾರು ಹೋರಾಟ ನಡೆಸಿದ ದಿಟ್ಟ ಹೋರಾಟಗಾರ ಅನ್ನಬಹುದು.ಶ್ರೀಯುತರು ಸಂಸ್ಥಾಪಕ ಅಧ್ಯಕ್ಷರಾಗಿ – ಕರ್ನಾಟಕ ವಿಭಾಗದ ಆಲ್ ಇಂಡಿಯಾ ಬ್ಲಾಕ್‍ವರ್ಡ್ (ಎಸ್.ಸಿ,ಎಸ್.ಟಿ,ಒಬಿಸಿ) ಮತ್ತು ಮೈನಾರಿಟಿ ಕಮೀಟಿ ಎಂಪಲಾಯಿ ಪೆಂಡರೆಷನ್ ಇದು ಬಹುಜನ ಸಮಾಜ ಪಕ್ಷದ ಭಾಗವಾಗಿ ದೇಶದ ಉದ್ದಗಲಕ್ಕೂ ಹೋರಾಟ ಮತ್ತು ಜನತೆಯನ್ನು ಅಭಿವೃದ್ಧಿ ಪಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶ ಕಂಡರು.ಇವರು ಸ್ವತಂ ಸಂಸ್ಥಾಪಕಾರಿಗಿ ಕಟ್ಟಿ ಬೆಳೆಸಿದ ಸಂಘ-ಸಂಸ್ಥೆಗಳು ಹಲವಾರು ಅಂತಹವದರಲ್ಲಿ ದಲಿತ ಮತ್ತು ಬಹುಜನ ಚಳುವಳಿಯನ್ನು ಕರ್ನಾಟಕದಲ್ಲಿ ತಂದು ಹೋರಾಟದ ಹೊಸ ದಾರಿಗಳನ್ನು ತೆರೆದರು. ದಲಿತರು,ಹಿಂದುಳಿದವರು,ಅಲ್ಪಸಂಖ್ಯಾತರ ಪರವಾಗಿ ಹಲವಾರು ಹೋರಾಟಗಳನ್ನು ಮಾಡುತ್ತಲ್ಲೇ ತಮ್ಮ ಜೀವನವನ್ನು ಸಮಾಜ ಸುಧಾರಣೆಯಲ್ಲೇ ಮಾನವ ರೂಪದಲ್ಲಿ ಬಂಧ ದೇವರು ಅನ್ನಬಹುದು. ಸರಳವಾದ ಜೀವನ ಜೊತೆಗೆ ಅತ್ಯಂತ ಮೇದಾವಿ ಜ್ಞಾನದ ಆಳದಲ್ಲಿ ಮುಳಗಿದ ಸಜ್ಜನ ಮಾನವತಾವಾದಿ ಅಂದರೆ ತಪ್ಪಾಗಲಾರದು.ಬುದ್ಧ ಬಸವ ಅಂಬೇಡ್ಕರ್ ಸಿದ್ದಾಂತಗಳನ್ನು ಆಳವಾಗಿ ತಿಳಿದ ಜೀವನ ಶೈಲಿಯಲ್ಲೂ ಅದನ್ನು ಕಾಯಾ-ವಾಚಾ-ಮನಸ್ಸಾ ರೂಡಿಸಿಕೊಂಡು ಜನ ಸೇವೆಗೆ ನಿಂತಿದ್ದಾರೆ. “ಮಹಾತ್ಮರು ಬಂದರೂ ಹೋದರು ನಾವು ಮಾತ್ರ ಬದಲಾಗಲಿಲ್ಲ” ಅನ್ನುವ ಹಾಗೇ ಇರುವ ಈ ಜಡ ಕಟ್ಟಿರುವ ಸಮಾಜವನ್ನು ತಿದ್ದಲು ಹಗಲು-ಇರಳು ಅನ್ನದೆ ಶ್ರಮವಹಿಸಿದ ಶ್ರಮಜೀವಿ ಅಂದರೆ ಶ್ರೀ ರಾಜನ್ ಅವರು ಅಂತ ಹಲವರು ಹೇಳುತ್ತಾರೆ. ಸಮಾಜ ಮತ್ತು ಹಿಂದುಳಿದವರ ಪರವಾಗಿ ಸದಾ ಚಿಂತನೆ ಮಾಡುತ್ತಾ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ,ನಾಡಿನ ಉದ್ದಗಲಕ್ಕೂ ಚಿರಪರಿತರು ಆದರೆ ಶುದ್ಧ ಹಸ್ತರಾದ ಇವರು ಬಗ್ಗೆ ಮಾದ್ಯಮಗಳು ಬೆಳಕು ಚೆಲ್ಲದೆ ಇರುವುದು ಅತ್ಯಂತ ನೋವಿನ ಸಂಗತಿ. ಕರ್ನಾಟಕದಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ.ಬಡವರು ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ರಾಜಕೀಯವಾಗಿ ಬೆಳೆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬ ನಿಲುವಿನಲ್ಲಿ ನಂಬಿಕೆ ಇಟ್ಟು ಜನ ಸಂಘಟನೆ ಮತ್ತು ಸಮಾಜದ ಮುಖ್ಯ ವಾಹಿನಿಗೆ ಹಿಂದುಳಿದವರನ್ನು ತರುವ ಇವರ ಪ್ರಾಮಾಣಿಕ ಪ್ರಯತ್ನವು ದಶಕಗಳಿಂದ ನಡೆಯುತ್ತಾ ಬಂದಿದೆ. ಇವರು ಸದಾ ನಗುಮುಖದೊಂದಿಗೆ ಸೇವೆ ನಿಲ್ಲುತ್ತಾರೆ.ಪ್ರತಿಯೊಬ್ಬ ಬಡವ,ನಿರ್ಗತಿಕರ ಸೇವೆ ಮಾಡುತ್ತಾ ಅನಾಥರು,ದಲಿತರು ಮತ್ತು ನಿರ್ಗತಿಕರ ಬದುಕನ್ನು ಹಸನ್ನು ಮಾಡುವಲ್ಲಿ ದೇವರನ್ನು ಕಾಣುತ್ತಿದ್ದಾರೆ. ಉತ್ತಮ ಉದ್ದೇಶ ಹೋರಾಟದ ಇಂತಹ ಮಹಾನ ವ್ಯಕ್ತಿಗಳಿಗೆ ಜನ ಬೆಂಬಲ ಮತ್ತು ಮಾಧ್ಯಮದ ಬೆಂಬಲ ನೀಡಬೇಕು.ಅಂಬೇಡ್ಕರ ಅವರ ಜೀವನದ ದಾರಿಯನ್ನು ಮೈಗೂಡಿಕೊಂಡಿರುವ ಸದಾ ತಮ್ಮ ಕುಟುಂಬ ಮತ್ತು ಸೇವಾ ಕ್ಷೇತ್ರವನ್ನು ಎರಡು ಕಣ್ಣಿನಂತೆ ಕಾಪಾಡಿಕೊಂಡು ಬಂದಿದ್ದಾರೆ.

ಶ್ರೀ ಎ.ಎಸ್.ರಾಜನ್ ಅವರು ಹೋರಾಟಗಳು ದೇಶದ ಉದ್ದಕ್ಕೂ ಪರಿಚಯ ಏಕೆಂದರೆ ಇವರು ಬಡವರು,ಶ್ರಮಿಕರು ಮತ್ತು ದುಡಿಯವ ಕಾರ್ಮಿಕರ ದ್ವನಿಯಾಗಿ ಅವರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ನ್ಯಾಯ ನಿಷ್ಠೆಯ ಹೋರಾಟದಿಂದ ಜನಪ್ರಿಯತೆ ಪಡೆದ ಹಿರಿಯ ಜೀವ. ಶ್ರೀಯುತರ ಕನಸುಗಳು ನನಸಾಗಲಿ ಎಂದು ನಮ್ಮ ಕನಸಿನ ಭಾರತ ಟೀಮ ಹಾರೈಸುತ್ತದೆ.

Leave A Comment

ಲೇಖನಗಳು

ಶ್ರೀ ಸುಭಾಷ್ ಭರಣಿ.

ಲೇಖನಗಳು

ಮಾನವೀಯ ಮೌಲ್ಯದ ಹರಿಕಾರ ಶ್ರೀ ಸುಭಾಷ್ ಭರಣಿ.

By Editor
08:56:43 AM / Wed, Feb 21st, 2018
ಶ್ರೀ ವಸಂತ ಕುಮಾರ್

ಲೇಖನಗಳು

ಶ್ರೀ ವಸಂತ ಕುಮಾರ್

By Editor
08:56:43 AM / Wed, Feb 21st, 2018
ಲೇಖನಗಳು

ಲೇಖನಗಳು

ಅಪ್ಪಟ ಕನ್ನಡ ಕಲಾವಿದೆ ಅನು ಚಿತ್ತ ರಾಜಕೀಯ ಅತ್ತ.

By Editor
08:56:43 AM / Wed, Feb 21st, 2018
ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

ಲೇಖನಗಳು

ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

By Editor
08:56:43 AM / Wed, Feb 21st, 2018
ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

ಲೇಖನಗಳು

ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

By Editor
08:56:43 AM / Wed, Feb 21st, 2018