ಮಾನವೀಯ ಮೌಲ್ಯದ ಹರಿಕಾರ ಶ್ರೀ ಸುಭಾಷ್ ಭರಣಿ.

By Editor
08:56:52 AM / Wed, Feb 21st, 2018

ಅಚಲವಾದ ನಂಬಿಕೆ,ಆತ್ಮೀಯ ಅಪ್ಪುಗೆಗೆಯ ಸಾಕಾರ ಮೂರ್ತಿ,ಬುದ್ಧ,ಬಸವ ಮತ್ತು ಅಂಬೇಡ್ಕರ್ ತತ್ವ ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟು ತಮ್ಮ ಕಾಯಕದಲ್ಲಿ ಮಾನವೀಯತೆ ಮೆರೆದ ತತ್ವ ಯೋಗಿ ಅಂದರೆ ನೆನಪಾಗುವುದು ಕನ್ನಡ ನಾಡಿನ ದಲಿತರ ಮತ್ತು ಶೋಷಿತರ ಆಶಾಕಿರಣ ಶ್ರೀ ಸುಭಾಷ್ ಭರಣಿ.ಒಳ್ಳೆಯ ವಿಚಾರವಂತರ ಮನೆಯಲ್ಲಿ ಒಳ್ಳೆಯವರೆ ಹುಟ್ಟುತ್ತಾರೆ ಅನ್ನುವುದಕ್ಕೆ ಸುಭಾಷ್ ಭರಣಿಯವರ ಕುಟುಂಬವೇ ಸಾಕ್ಷಿ. ದೇಶ ನಾಡ ಪ್ರೇಮ ಮತ್ತು ಸರ್ಕಾರ ಸೇವೆಯಲ್ಲಿ ತೊಡಗಿಸಿಕೊಂಡ ಕುಟುಂಬದ ಮತ್ತೊಂದು ರತ್ನ ಭರಣಿ ಸಾಹೇಬರು ಅಂದರೆ ತಪ್ಪಾಗಲಾರದು.ಚಿಕ್ಕ ವಯಸ್ಸಿನಿಂದಲ್ಲೆ ಓದುವುದರಲ್ಲಿ ಕಲೆಯಲ್ಲಿ ಯಾವಾಗಲೂ ಮುಂದೆ ಇದ್ದ ಸುಭಾಷ್ ಅವರ ಜೀವನದಲ್ಲಿ ತಾಯಿಯನ್ನು ಕೂಡಾ ಬಹುಬೇಗ ಕಲೆದುಕೊಂಡರು.ತಾಯಿ ಪ್ರೀತಿಯನ್ನು ಶಿಕ್ಷಣ ಮತ್ತು ಜನರ ಮಧ್ಯ ಕಂಡು ಗುರುಗಳಿಗೆ ಮತ್ತು ಶಿಕ್ಷಣಕ್ಕೆ ಅತ್ಯಂತ ವಿನಯಪೂರ್ವಕವಾಗಿ ಜೀವನದ ಪಾಠಗಳ ಜೊತೆಗೆ ಅಗಾಧ ಪ್ರಮಾಣದ ಜ್ಞಾನ ಪಡೆಯುತ್ತ ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಗಾದೆಯಂತೆ ಬೆಳೆದರು. ಶ್ರೀಯುತರ ಓದುವದಲ್ಲೆ ಮಗ್ದರಾಗಿ ಪ್ರಪಂಚವನ್ನು ಮರೆಯುತ್ತಿದ್ದರು.ಸದಾ ಹಸನ್ಮುಖದ ಬಿಂಬದಂತೆ ಜನರ ನೋವುಗಳ ಕಂಡು ಬೆಳೆದವರು.ಇದರ ಮಧ್ಯ ತಂದೆಯನ್ನು ಕಳೆದುಕೊಂಡ ಸುಭಾಷ್ ಭರಣಿ,ಅವರ ಆದರ್ಶ ಮತ್ತು ತತ್ವಗಳ ಜೊತೆಗೆ ದಲಿತರಿಗೆ,ಮಹಿಳೆಯರಿಗೆ ಮತ್ತು ಹಿಂದುಳಿದವರಿಗೆ ಬರವಣೆಗೆಯ ಅಥವಾ ಭಾಷಣ ಮೂಲಕ ಸುಧಾರಣೆ ಹುಡುಕದೇ ಕಾರ್ಯರೂಪದಿಂದ ಸುಧಾರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.ಹಿಂದುಳಿದವರ,ದಲಿತರ ಉದ್ದಾರ ಎಂದರೆ ಮೇಲ್ಜಾತಿಗಳನ್ನು ಕೀಳಾಗಿ ಕಾಣುವುದು ದ್ವೇಷಿಸುವುದು ಅಲ್ಲ ಅಂತ ನಂಬಿರುವ ಶ್ರೀಯುತರು ಎಲ್ಲರೊಂದಿಗೂ ಸ್ನೇಹ ವಿಶ್ವಾಸದಿಂದ ಇರುತ್ತಿದ್ದರು.

ಶ್ರೀ ಸುಭಾಷ್ ಭರಣಿ ಮೂಲತಃ ಮೈಸೂರು ಪ್ರಾಂತ್ಯದ ಮಂಡ್ಯದವರು ಇವರು ಖ್ಯಾತ ಸಮಾಜ ಸುಧಾರಕ ಮತ್ತು ರಾಜಕಾರಣಿಯಾದ ಶ್ರೀ ರಂಗನಾಥವರ ಮಗನಾಗಿ 15ನೇ 1949ರಲ್ಲಿ ಜನಿಸಿದರು. ಬಾಲ್ಯದ ದಿನಗಳಲ್ಲೆ ತಾಯಿಯನ್ನು ಕಳೆದುಕೊಂಡು ಪ್ರಾಥಮಿಕದಿಂದ ಉನ್ನತ ಶಿಕ್ಷಣವನ್ನು ಕಷ್ಟಪಟ್ಟು ಇಷ್ಟದಿಂದ ಮುಗಿಸಿ ನಂತರ ಸ್ವರ್ದಾತ್ಮಕ ಪರೀಕ್ಷೆಯ ಮೂಲಕ ತಮ್ಮ 25ನೇ ವಯಸ್ಸಿನಲ್ಲೇ ಅಂದರೆ 1974ರಲ್ಲಿ ಮಂಡ್ಯದಲ್ಲಿ ತಹಸಿಲ್ದಾರ್ ಆಗಿ ಸರ್ಕಾರಿ ಸೇವೆಯನ್ನು ಪ್ರಾರಂಭಿಸಿದರು.ಮುಂದೆ ಹುದ್ದೆಗೆ ತೃಪ್ತಿ ಪಡೆಯದೇ ಯು.ಪಿ.ಎಸ್.ಸಿಯ ಪಿ.ಎಸ್.ಐ ಪಾಸ ಮಾಡಿ 1981ರಲ್ಲಿ ರಾಜ್ಯಕ್ಕೆ ಹೆಸರುತಂದು ಕೊಟ್ಟರು.ಮುಂದೆ ಜೀವನವೇ ಒಂದು ಸಿನಿಮಯ ರೀತಿಯಲ್ಲಿ ನಡೆಯಿತ್ತು, ದಾರವಾಡ,ಬಳ್ಳಾರಿ,ಚಿಕ್ಕಮಗಳೂರು ಹೀಗೆ ರಾಜ್ಯದ ವಿವಿಧ ಕಡೆ ಪ್ರಾಮಾಣಿಕ ಸೇವೆಯಿಂದ ಜನಮನ್ನಣೆ ಪಡೆಯುತ್ತಾ ಅದುವರೆಗೂ ಪೋಲಿಸ್ ಅಂದರೆ ಭಯ ಹುಟ್ಟಿಸುವ ವಾತಾವರಣವನ್ನು ಹೋಗಲಾಡಿಸಿ ಪೋಲಿಸ್ ಇಲಾಖೆಯಲ್ಲೂ ಮಾನವೀಯ ಮೌಲ್ಯಗಳು ಮತ್ತು ಹೃದಯವಂತರು ಇರುತ್ತಾರೆ ಎಂದು ತಮ್ಮನ್ನೇ ಸಾಕ್ಷಿಯಾಗಿ ತೋರಿಸಿದ ಕಲಿಯುಗದ ಅಂಬೇಡ್ಕರ್ ಅನ್ನಬಹುದು, ಕಾನೂನು ಪಾಲನೆಯ ಜೊತೆಗೆ ಮಾನವೀಯತೆ ಮತ್ತು ದಲಿತರ ಉದ್ದಾರ ಅವರ ರಕ್ಷಣೆಯ ಹೊಣೆಯನ್ನು ಅಂಬೇಡ್ಕರ್ ನಂತರ ತಮ್ಮ ಹೆಗಲ ಮೇಲೆ ಹೋತ್ತು ನಡೆದ ದಂತ ಕಥೆ ನಮ್ಮ ನೆಚ್ಚಿನ ಶ್ರೀ ಸುಭಾಷ್ ಭರಣಿ. ಶ್ರೀ ಸುಭಾಷ್ ಭರಣಿ ಅಂದರೆ ಅದೊಂದು ಶಕ್ತಿ, ಪೊಲೀಸ್ ಇಲಾಖೆಯಲ್ಲಿ ಸರ್ವರಿಗೂ ನ್ಯಾಯ ಒದಗಿಸುವ ಜೊತೆಗೆ ಮಹಿಳೆಯರಿಗೆ ಮತ್ತು ದಲಿತರನ್ನು ಉದ್ದರಿಸುವ ಮತ್ತು ದಲಿತರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸದಾ ಮಾಡುತ್ತಲ್ಲೆ ಬಂದಿದ್ದಾರೆ.ಸರಳ ಸಜ್ಜನ ವ್ಯಕ್ತಿತ್ವದ ಶ್ರೀ ಸುಭಾಷ್ ಭರಣಿಯ ಸದಾ ಕಾಲವು ಕೃರ್ತವ್ಯ ಮತ್ತು ಸಮಾಜ ಸೇವೆಯಲ್ಲೆ ತೊಡಗಿಸಿಕೊಂಡಿದ್ದಾರೆ,ಇವರದು ಒಂದು ಸುಂದರ ಕುಟುಂಬವು ಇದ್ದು ಶ್ರೀಮತಿ ಮೋಹನಾ ಭರಣಿಯವರು ಶ್ರೀ ಸುಭಾಷ್ ಭರಣಿಯವರ ಸೇವೆ ಮತ್ತು ಕೃರ್ತವ್ಯಕ್ಕೆ ಸದಾ ಆಸರೆಯಾಗಿ ನಿಂತಿದ್ದಾರೆ, ಮುದ್ದಾದ ಕುಮಾರ ಸಮರ್ಥ,ಕುಮಾರಿ ಸೌಜನ್ಯ ಮತ್ತು ಕುಮಾರಿ ಸೌಮ್ಯ ಮಕ್ಕಳು ಸದಾ ನಗು ಮೋಗದೊಂದಿಗೆ ತಂದೆಯ ಎಲ್ಲಾ ಕಾರ್ಯಗಳನ್ನು ಬೆಂಬಲಿಸುವ ಸುಖಿ ಕುಟುಂಬ.

ಶ್ರೀ ಸುಭಾಷ ಭರಣಿಯವರು ಕಾಯಕದಲ್ಲಿ ದೇವರನ್ನು ಕಾಣುವವರು,ಡೊಂಗಿ ದಲಿತ ಹೋರಾಟಗಾರನ್ನು ದೂರ ಇಟ್ಟು, ಒಳ್ಳೆಯ ಮನಸ್ಸಿನ ನಿಜವಾದ ಸಾಮಾಜಿಕ ಕಳಕಳಿಯ ಹೋರಾಟಗಾರರನ್ನು ಮತ್ತು ನಾಯಕರನ್ನು ಬೆಂಬಲಿಸಿ, ಎಲ್ಲಕ್ಕಿಂತ ಹೆಚ್ಚಾಗಿ ಸಮಾನತೆಗಾಗಿ ಹೋರಾಟ ಮಾಡಿದ ಕಲಿಯುಗದ ದೇವತಾ ಮನುಷ್ಯ. ಎಲ್ಲ ಜಾತಿ ಧರ್ಮದವರನ್ನು ಗೌರವಿಸುವ ಇವರಿಗೆ ನಾಡಿನ ಹೆಸರಾಂತ ಪತ್ರಕರ್ತರು,ಸಾಹಿತಿಗಳು, ಹೋರಾಟಗಾರರು ಮತ್ತು ಬುದ್ದಿಜೀವಿಗಳು ಅತ್ಯಂತ ಆತ್ಮೀಯ ಪರಿಚಯ ಮಾಡಿಕೊಂಡು ಸ್ನೇಹದಿಂದ ಇದ್ದರು,ಅದಕ್ಕಾಗಿ ಇವರನ್ನು ಸ್ನೇಹಜೀವಿ ಸಮಾನತೆಯ ಹರಿಕಾರ ಅನ್ನದರೇ ತಪ್ಪಾಗಲಾರದು.ಇಲಾಖೆಯಲ್ಲೂ ಅತ್ಯಂತ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಹಿರಿಯ ಅಧಿಕಾರಿಗಳಿಗೂ ಮತ್ತು ಜನತೆಗೂ ಹತ್ತಿರವಾಗಿದ್ದರೂ, ಎಸ್.ಪಿ ಇಂದ ಡಿ.ಐ.ಜಿ ಮತ್ತು ಹಲವಾರು ಇಲಾಖೆಯ ಮುಖ್ಯಸ್ಥರಾಗಿ ಇನ್ನು ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾಗಲ್ಲೂ ಸತ್ಯ ಮತ್ತು ಸರಳತೆ ಬಿಡದೇ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಪೋಲಿಸ್ ಇಲಾಖೆಯ ನಿವೃತ್ತಿಯ ನಂತರ ತಂದೆ ಹಾದಿಯಲ್ಲೆ ರಾಜಕೀಯ ಮಾಡುತ್ತಿದ್ದು, ರಾಜ್ಯದ ಪ್ರಮುಖ ರಾಜಕಾರಣಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದು,ಈಗಲ್ಲೂ ದಲಿತರಿಗಾಗಿ,ಹಿಂದುಳಿದವರ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಸದಾ ಸಲಹೆ ಸಹಕಾರ ನೀಡುತ್ತಿರುತ್ತಾರೆ,ಹಲವಾರು ದಲಿತ ಮುಖಂಡರು ಇವರ ಮಾರ್ಗದರ್ಶನ ಪಡೆದು ಹೋರಾಟಗಳನ್ನು ಮಾಡುತ್ತಿರುವುದನ್ನು ನೋಡಿದರೇ ಇವರ ಮೇದಾವಿತನ ಗೊತ್ತಾಗುತ್ತದೆ. ನನ್ನ ನೆಚ್ಚಿನ ದಲಿತ ಹೋರಾಟಗಾರ,ಮಾನವೀಯ ಮೌಲ್ಯಗಳ ಹರಿಕಾರ ಶ್ರೀ ಸುಭಾಷ ಭರಣಿಯವರಿಗೆ ರಾಜಕೀಯದಲ್ಲೂ ಯಶ ದೊರೆತು ಹಿಂದುಳಿದವರ ದ್ವನಿ ವಿಧಾನ ಸೌಧ ಮತ್ತು ಲೋಕಸಭೆಯಲ್ಲಿ ಪ್ರತಿದ್ವನಿಸಲ್ಲಿ ನಮ್ಮೆಲ್ಲರ ಆಶೋತ್ತರು ಮತ್ತು ಅಂಬೇಡ್ಕರ್ ಕನಸಿನ ಭಾರತ ನನಸಾಗಲಿ ಎಂಬುದು ನಮ್ಮೇಲ್ಲರ ಹಾರೈಕೆ.

Leave A Comment

ಲೇಖನಗಳು

ಶ್ರೀ ಸುಭಾಷ್ ಭರಣಿ.

ಲೇಖನಗಳು

ಮಾನವೀಯ ಮೌಲ್ಯದ ಹರಿಕಾರ ಶ್ರೀ ಸುಭಾಷ್ ಭರಣಿ.

By Editor
08:56:52 AM / Wed, Feb 21st, 2018
ಶ್ರೀ ವಸಂತ ಕುಮಾರ್

ಲೇಖನಗಳು

ಶ್ರೀ ವಸಂತ ಕುಮಾರ್

By Editor
08:56:52 AM / Wed, Feb 21st, 2018
ಲೇಖನಗಳು

ಲೇಖನಗಳು

ಅಪ್ಪಟ ಕನ್ನಡ ಕಲಾವಿದೆ ಅನು ಚಿತ್ತ ರಾಜಕೀಯ ಅತ್ತ.

By Editor
08:56:52 AM / Wed, Feb 21st, 2018
ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

ಲೇಖನಗಳು

ಹುಟ್ಟು ಹೋರಾಟಗಾರ ಶ್ರೀ ಎ.ಎಸ್.ರಾಜನ್

By Editor
08:56:52 AM / Wed, Feb 21st, 2018
ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

ಲೇಖನಗಳು

ಶ್ರೀ ಮರಿಯಾ ಡ್ಯಾನಿಯಲ್ ಸನ್ನಿ

By Editor
08:56:52 AM / Wed, Feb 21st, 2018