ರಾಜಕೀಯ ಬಿಡಿ, ಮೊದಲು ನೀರು ಕೊಡಿ

By Editor
08:50:29 AM / Wed, Feb 21st, 2018

ಧಾರವಾಡ, ಗದಗ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಮಹದಾಯಿ ಹೋರಾಟದ ಕಿಚ್ಚು ಬುಧವಾರ ಹಾವೇರಿ ಜಿಲ್ಲೆಗೂ ವ್ಯಾಪಿಸಿತು. ರಾಜಕೀಯ ಬಿಡಿ ಮೊದಲು ನೀರಿಲ್ಲದೇ ಬತ್ತುತ್ತಿರುವ ರೈತರಿಗೆ ಹೊಲಗಳಿಗೆ, ಹಾಗೂ ಕುಡಿಯಲು ನೀರಿಲ್ಲದೇ ಬಿಕ್ಕುತ್ತಿರುವ ಸಾರ್ವಜನಿಕರಿಗೆ ನೀರು ಕೊಡಿ ಎನ್ನುವ ಕೂಗು ವ್ಯಕ್ತವಾಗಿದೆ.

ಹೋರಾಟಕ್ಕೆ ಬೆಂಬಲ ಸೂಚಿಸಿ, ಜಿಲ್ಲಾದ್ಯಂತ ವಿವಿಧ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಕೆಜೆಪಿ ಪದಾಧಿಕಾರಿಗಳು ಅಣಕು ಶವಯಾತ್ರೆ, ಪ್ರತಿಕೃತಿ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಣೇಬೆನ್ನೂರ, ಶಿಗ್ಗಾವಿ, ಹಾವೇರಿ ಹಾಗೂ ಹಿರೇಕೇರೂರಲ್ಲಿ ರಸ್ತೆ ತಡೆ ನಡೆದು ಕೆಲ ಕಾಲ ಸಂಚಾರ ಸ್ಥಗಿತಗೊಂಡಿದ್ದನ್ನು ಹೊರತು ಪಡಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ವಾಹನ ಸಂಚಾರ, ಶಾಲಾ-ಕಾಲೇಜುಗಳು, ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕರ್ನಾಟಕ ಜನತಾ ಪಕ್ಷದ ಜಿಲ್ಲಾ ಘಟಕದ ಮುಖಂಡರು, ಕಾರ್ಯಕರ್ತರು ಹಾವೇರಿಯಲ್ಲಿ ಹಾಲಿ ಮತ್ತು ಮಾಜಿ ಸಿಎಂಗಳ ಅಣಕು ಶವಯಾತ್ರೆ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಮೇಲೆ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಣೇಬೆನ್ನೂರಿಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ರಾಣೇಬೆನ್ನೂರ ಬಂದ್‌ಗೆ ಕರೆ ಕೊಟ್ಟಿದ್ದರೂ, ನಿತ್ಯದ ಚಟುವಟಿಕೆಗಳು ಯಥಾಸ್ಥಿತಿಯಲ್ಲಿದ್ದವು. ಹೆದ್ದಾರಿ ತಡೆ ನಡೆಸಿದ ವೇಳೆ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಬ್ಯಾಡಗಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು. ಬಿಜೆಪಿ ನಾಯಕರು ಮಾಡಿದ ಮೋಸವನ್ನು ಖಂಡಿಸಿ, ರಾಜಕೀಯ ಡೊಂಬರಾಟ ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು. ವೀರ ಕನ್ನಡಿಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಹ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.

Leave A Comment

   

ಹಾವೇರಿ ಜಿಲ್ಲಾ ಸುದ್ಧಿಗಳು

News Tag

News Name

News Name

By Editor
08:50:29 AM / Wed, Feb 21st, 2018
News Tag

News Name

News Name

By Editor
08:50:29 AM / Wed, Feb 21st, 2018
News Tag

News Name

News Name

By Editor
08:50:29 AM / Wed, Feb 21st, 2018
News Tag

News Name

News Name

By Editor
08:50:29 AM / Wed, Feb 21st, 2018
News Tag

News Name

News Name

By Editor
08:50:29 AM / Wed, Feb 21st, 2018
News Tag

News Name

News Name

By Editor
08:50:29 AM / Wed, Feb 21st, 2018
News Tag

News Name

News Name

By Editor
08:50:29 AM / Wed, Feb 21st, 2018
News Tag

News Name

News Name

By Editor
08:50:29 AM / Wed, Feb 21st, 2018
News Tag

News Name

News Name

By Editor
08:50:29 AM / Wed, Feb 21st, 2018