ವರ್ಚ್ಯುವಲ್ ರಿಯಾಲಿಟಿಯಲ್ಲಿ ಮಸ್ತಕಾಭಿಷೇಕ ಕಣ್ತುಂಬಿಕೊಳ್ಳಿ


By Editor
08:52:18 AM / Wed, Feb 21st, 2018

ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ನಿರಾಸೆ ಬೇಡ. ಈ ಬಾರಿ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಶ್ರವಣಬೆಳಗೊಳದ ವಿಂಧ್ಯಗಿರಿ ಮೇಲೆ ನಿಂತು ಮಹಾಮಜ್ಜನ ಕಣ್ತುಂಬಿಕೊಳ್ಳಬಹುದು!

ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ವಿರಾಟ್ ವಿರಾಗಿಯ ಮಹಾಮಜ್ಜನದ ಅದ್ಭುತ ದೃಶ್ಯಗಳನ್ನು ವರ್ಚ್ಯುವಲ್ ರಿಯಾಲಿಟಿ (ವಿಆರ್) ಮಾದರಿಯಲ್ಲಿ ನೇರ ಪ್ರಸಾರ ಮಾಡಲಿದ್ದು, ಪ್ರತಿ ವೀಕ್ಷಕರಿಗೂ ಸಾಕ್ಷಾತ್ ದರ್ಶನ ಪಡೆದ ಅನುಭವ ಲಭ್ಯವಾಗಲಿದೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು, ಪ್ರವಾಸಿಗರು ಶ್ರವಣಬೆಳಗೊಳಕ್ಕೆ ಭೇಟಿ ನೀಡಿದರೂ ಸುಮಾರು 10-12 ಸಾವಿರ ಜನರಷ್ಟೇ ವಿಂಧ್ಯಗಿರಿ ಏರಿ, ಪ್ರೇಕ್ಷಕರ ಗ್ಯಾಲರಿಯಲ್ಲಿ ಜಾಗ ಗಿಟ್ಟಿಸಿಕೊಂಡು ಮಹಾಮಜ್ಜನವನ್ನು ವೀಕ್ಷಿಸಬಹುದು.

ನೀವು ವೀಕ್ಷಿಸುವುದು ಹೇಗೆ?

ಮಹಾಮಸ್ತಕಾಭಿಷೇಕ ವೇಳೆ ಜಿಲ್ಲಾಡಳಿತ ಬಾರ್​ಕೋಡ್ ನೀಡುತ್ತದೆ. ಇದನ್ನು ಸ್ಮಾರ್ಟ್​ಫೋನ್​ನಲ್ಲಿ ಸ್ಕಾ್ಯನ್ ಮಾಡಿ ವರ್ಚ್ಯುವಲ್ ರಿಯಾಲಿಟಿ ಕನ್ನಡಕಗಳ ಮೂಲಕ ನೇರ ಪ್ರಸಾರ ವೀಕ್ಷಿಸಬಹುದು.

360 ಡಿಗ್ರಿ ದೃಶ್ಯಾವಳಿ

ವಿಂಧ್ಯಗಿರಿ ಬೆಟ್ಟದಲ್ಲಿ 58 ಅಡಿ ಎತ್ತರದ ಗೊಮ್ಮಟೇಶ್ವರ ಏಕಶಿಲಾಮೂರ್ತಿಯ 360 ಡಿಗ್ರಿ ದೃಶ್ಯಾವಳಿ ವರ್ಚ್ಯುವಲ್ ರಿಯಾಲಿಟಿ ಮಾದರಿಯಲ್ಲಿ ನೇರ ಪ್ರಸಾರವಾಗಲಿದ್ದು, ಬಾಹುಬಲಿ ಮುಡಿಯಿಂದ ಅಡಿವರೆಗೂ ವಿವಿಧ ದ್ರವ್ಯಗಳಲ್ಲಿ ಪವಿತ್ರ ಸ್ನಾನವನ್ನು ಎದುರಿನಲ್ಲೇ ನಿಂತು ನೋಡುತ್ತಿರುವ ಅನುಭವ ವೀಕ್ಷಕರಿಗೆ ಲಭ್ಯವಾಗಲಿದೆ.

10 ಲಕ್ಷ ಕನ್ನಡಕ ವಿತರಣೆಗೆ ಚಿಂತನೆ

ಜಿಲ್ಲಾಡಳಿತ ಹಲವು ಖಾಸಗಿ ಸಂಸ್ಥೆಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಹಲವು ಕಂಪನಿಗಳು ವಿಆರ್ ನೇರ ಪ್ರಸಾರದ ಯೋಜನೆಯಲ್ಲಿ ಭಾಗಿಯಾಗಲು ಆಸಕ್ತಿ ತೋರಿವೆ. ಅಲ್ಲದೆ, ವಿಆರ್ ನೇರ ಪ್ರಸಾರಕ್ಕಾಗಿ ಬಿಎಸ್​ಎನ್​ಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ವಿಂಧ್ಯಗಿರಿಯ ಮೇಲೆ ಅಂತರ್ಜಾಲ ಸೇವೆ ಉತ್ತಮಗೊಳಿಸಲು ಕೋರಲಾಗಿದೆ. ವೇಗದ ಇಂಟರ್​ನೆಟ್​ನಿಂದ ನೇರ ಪ್ರಸಾರದ ದೃಶ್ಯಗಳು ಯಾವುದೇ ಅಡೆತಡೆಯಿಲ್ಲದೆ ವಿಆರ್ ಕನ್ನಡಕ ಧರಿಸಿದವರನ್ನು ಕ್ಷಣಮಾತ್ರದಲ್ಲಿ ತಲುಪಲಿವೆ. ಜಿಲ್ಲಾಡಳಿತ ಸಾರ್ವಜನಿಕರಿಗೆ ಸುಮಾರು 10 ಲಕ್ಷ ವರ್ಚ್ಯುವಲ್ ರಿಯಾಲಿಟಿ ಕನ್ನಡಕಗಳನ್ನು ವಿತರಿಸುವ ಆಲೋಚನೆ ಹೊಂದಿದ್ದು, ಫೆಬ್ರವರಿ 17ರಿಂದ ಒಂದು ವಾರ ನೇರ ಪ್ರಸಾರ ಸೌಲಭ್ಯ ಲಭ್ಯವಿದೆ.

Leave A Comment

   

ಹಾಸನ ಜಿಲ್ಲಾ ಸುದ್ಧಿಗಳು

News Tag

News Name

News Name

By Editor
08:52:18 AM / Wed, Feb 21st, 2018
News Tag

News Name

News Name

By Editor
08:52:18 AM / Wed, Feb 21st, 2018
News Tag

News Name

News Name

By Editor
08:52:18 AM / Wed, Feb 21st, 2018
News Tag

News Name

News Name

By Editor
08:52:18 AM / Wed, Feb 21st, 2018
News Tag

News Name

News Name

By Editor
08:52:18 AM / Wed, Feb 21st, 2018
News Tag

News Name

News Name

By Editor
08:52:18 AM / Wed, Feb 21st, 2018
News Tag

News Name

News Name

By Editor
08:52:18 AM / Wed, Feb 21st, 2018
News Tag

News Name

News Name

By Editor
08:52:18 AM / Wed, Feb 21st, 2018
News Tag

News Name

News Name

By Editor
08:52:18 AM / Wed, Feb 21st, 2018