ಗದಗ

ವೀರಶೈವ-ಲಿಂಗಾಯತ ಸಮಾವೇಶ ಇಂದು

By Editor
08:45:52 AM / Wed, Feb 21st, 2018

ಗದಗಿನ ವಿಡಿಎಸ್ ಮೈದಾನದಲ್ಲಿ ಡಿ. 24ರಂದು ಬೆಳಗ್ಗೆ ನಡೆಯಲಿರುವ ಗುರುವಿರಕ್ತರ ಸಮನ್ವಯ ವೀರಶೈವ ಲಿಂಗಾಯತ ಬೃಹತ್ ಸಮಾವೇಶಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಸಾವಿರಕ್ಕೂ ಹೆಚ್ಚು ಮಠಾಧೀಶರು, ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ..

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧವಿದೆ ಎಂಬ ಸ್ಪಷ್ಟ ನಿಲುವನ್ನು ಮತ್ತೊಮ್ಮೆ ಘೊಷಿಸುವುದು ಹಾಗೂ ವೀರಶೈವ ಲಿಂಗಾಯತ ಒಂದೇ ಎಂದು ಒಕ್ಕೊರಲಿನ ಸಂದೇಶ ರವಾನಿಸುವುದು ಸಮಾವೇಶದ ಮುಖ್ಯ ಉದ್ದೇಶ.

ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು, ಶ್ರೀ ಕಾಶೀ, ಶ್ರೀ ಶ್ರೀಶೈಲ ಮತ್ತು ಶ್ರೀ ಉಜ್ಜಯಿನಿ ಪೀಠದ ಜಗದ್ಗುರುಗಳು, ಶಿವಯೋಗಮಂದಿರ ಅಧ್ಯಕ್ಷರು ಹಾಗೂ ಹಾಲಕೆರೆ, ಹೊಸಪೇಟೆ ಮಠದ ಶ್ರೀ ಸಂಗನಬಸವ ಸ್ವಾಮೀಜಿ, ಮುಂಡರಗಿಯ ನಾಡೋಜ ಶ್ರೀ ಅನ್ನದಾನ ಸ್ವಾಮೀಜಿ, ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಹೊಸಳ್ಳಿಯ ಶ್ರೀ ಬೂದೀಶ್ವರ ಸ್ವಾಮೀಜಿ ಸೇರಿ ನೂರಾರು ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ನಾಡಿನ ಎಲ್ಲೆಡೆಯಿಂದ ಭಕ್ತರು ಆಗಮಿಸಲಿದ್ದಾರೆ.

ರಾಜ್ಯ ಹಾಗೂ ಹೊರರಾಜ್ಯಗಳಲ್ಲಿರುವ ಪಂಚಪೀಠಗಳ ಶಾಖಾ ಪೀಠದ ಶಿವಾಚಾರ್ಯರು, ವೀರಶೈವ ಲಿಂಗಾಯತ ಒಂದೇ ಎಂಬ ವಾದದಲ್ಲಿ ಗುರುತಿಸಿಕೊಂಡಿರುವ ವಿರಕ್ತ ಮಠಾಧೀಶರು ಆಗಮಿಸಲಿದ್ದು, ವೀರಶೈವ ಲಿಂಗಾಯತ ಮಠಗಳ ಪೈಕಿ ಶೇ. 80ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಚಾಮರಾಜನಗರದಿಂದ ಬೀದರ್​ವರೆಗೂ ಇರುವ ಸಮಾಜದವರು, ಪೀಠಾಭಿಮಾನಿಗಳು ಸ್ವಯಂ ಸ್ಪೂರ್ತಿಯಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಮೈಸೂರು, ಬೆಂಗಳೂರಿನಿಂದ ಸಾವಿರಾರು ಮಂದಿ ಆಗಮಿಸಿದ್ದು, ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಹಠಕ್ಕೆ ಬಿದ್ದಿರುವ ಸಿಎಂ:

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅವಕಾಶ ಕೊಡಬಾರದು ಎಂದು ಅನೇಕ ಬಾರಿ ಮನವಿ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದ್ದಾರೆ. ಪಂಚಪೀಠಗಳು ಮತ್ತು ಅನೇಕ ವಿರಕ್ತ ಮಠಾಧೀಶರ ಮಾತಿಗೂ ಕಿಮ್ಮತ್ತು ಕೊಡದೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ವರ್ಗಾಯಿಸಿದ್ದಲ್ಲದೇ, ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯಾತ ಮೀಸಲು ಸವಲತ್ತು ನೀಡಿಕೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಳು ಜನರ ಸಮಿತಿ ರಚಿಸಿರುವ ಸರ್ಕಾರದ ಕ್ರಮ ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸಮಾವೇಶದಲ್ಲಿ ಸೂಕ್ತ ಉತ್ತರ ನೀಡಲು ಸ್ವಾಮೀಜಿಗಳು ಸಜ್ಜಾಗಿದ್ದು, ಸರ್ಕಾರದ ಕ್ರಮ, ಮುಖ್ಯಮಂತ್ರಿ ನಡೆ ಸೇರಿ ಹಲವಾರು ವಿಷಯಗಳು ಸಮಾವೇಶದಲ್ಲಿ ಪ್ರತಿಧ್ವನಿಸಲಿವೆ.

ಸ್ವಾಮೀಜಿಗಳು ಕಿಡಿಕಿಡಿ:

ಸರ್ಕಾರ ಸಮಿತಿ ರಚಿಸಿದ ಕ್ರಮವನ್ನು ಪಂಚಪೀಠಗಳು, ಹಲವಾರು ನಿರಂಜನ ಜಗದ್ಗುರುಗಳು ಖಂಡಿಸಿದ್ದಲ್ಲದೆ, ಆಕ್ರೋಶ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದು, ಹೀಗಾಗಿ ಅವರ ನಡೆ ಹತ್ತಾರು ಸಂಶಯ ಮೂಡಿಸಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರ ಧರ್ಮ ಒಡೆಯಲು ಮುಂದಾಗಿದೆ ಎಂದು ಸ್ವಾಮೀಜಿಗಳು ಆರೋಪಿಸಿದ್ದಾರೆ.

ಸರ್ಕಾರದ ಧೋರಣೆ ಖಂಡಿಸಿ ಮಹತ್ವದ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ. ಸರ್ಕಾರ ವೀರಶೈವ ಮತ್ತು ಲಿಂಗಾಯತರ ನಡುವೆ ಸಂಘರ್ಷ ಹುಟ್ಟುಹಾಕುವುದರ ಜತೆಗೆ ತರಾತುರಿಯಲ್ಲಿ ಅರ್ಜಿಗಳ ಪರಿಶೀಲನೆಗಾಗಿ ತಜ್ಞರ ಸಮಿತಿ ರಚಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.

Leave A Comment

   

ಗದಗ ಜಿಲ್ಲಾ ಸುದ್ಧಿಗಳು

ಕೆರೆ ತುಂಬಿಸಲು ₹ 7 ಸಾವಿರ ಕೋಟಿ ಖರ್ಚು

ಕೆರೆ ತುಂಬಿಸಲು ₹ 7 ಸಾವಿರ ಕೋಟಿ ಖರ್ಚು

ಕೆರೆ ತುಂಬಿಸಲು ₹ 7 ಸಾವಿರ ಕೋಟಿ ಖರ್ಚು

By Editor
08:45:52 AM / Wed, Feb 21st, 2018
ಭೀಷ್ಮಕೆರೆಯಲ್ಲೀಗ ಜಟ್ಸಕೀ ಸದ್ದು

ಭೀಷ್ಮಕೆರೆಯಲ್ಲೀಗ ಜಟ್ಸಕೀ ಸದ್ದು

ಭೀಷ್ಮಕೆರೆಯಲ್ಲೀಗ ಜಟ್ಸಕೀ ಸದ್ದು

By Editor
08:45:52 AM / Wed, Feb 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017