38 ಕೆರೆ ನೀರು ತುಂಬಿಸಲು ಬಜೆಟ್‌ನಲ್ಲಿ ಅನುದಾನ

By Editor
08:52:08 AM / Wed, Feb 21st, 2018
ದಾವಣಗೆರೆ/ಹೊನ್ನಾಳಿ:

ನ್ಯಾಮತಿ ವ್ಯಾಪ್ತಿಯಲ್ಲಿನ 32 ಗ್ರಾಮಗಳಲ್ಲಿನ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂಬರುವ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಹೊನ್ನಾಳಿಯ ಎಲ್‌ಐಸಿ ಕಚೇರಿ ಪಕ್ಕದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಒಳಗೊಂಡಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ₹ 672 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾಡಿದ ಮನವಿಗೆ ಸಿ.ಎಂ ಪ್ರತಿಕ್ರಿಯಿಸಿದರು.

ಕೆರೆ ತುಂಬಿಸುವುದು ಅತ್ಯಂತ ಅವಶ್ಯ. ಇದಕ್ಕೆ ಎಷ್ಟು ಹಣ ಬೇಕಾದರೂ ಕೊಡಲು ಸಿದ್ಧ. ಕೆರೆ ತುಂಬಿಸುವ ಯೋಜನೆಗಳಿಗಾಗಿಯೇ ಇದುವರೆಗೂ ₹ 7 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಕರ್ನಾಟಕ, ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಹೆಚ್ಚು ಒಣ ಭೂಮಿ ಪ್ರದೇಶ ಹೊಂದಿದ ರಾಜ್ಯ. 16 ವರ್ಷಗಳಲ್ಲಿ 13 ವರ್ಷ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿ ನೀರಾವರಿಗೆ ಪೂರಕವಾದ ಕಾಮಗಾರಿ ಕೈಗೊಳ್ಳಲು ಸರ್ಕಾರ ಬದ್ಧ ಎಂದರು.

ಹೊನ್ನಾಳಿ ತಾಲ್ಲೂಕಿಗೆ ₹ 2,313 ಕೋಟಿ ಅನುದಾನ: ‘ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 2,313 ಕೋಟಿ ಅನುದಾನ ನೀಡಿದ್ದು, ತಾಲ್ಲೂಕನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಶ್ರಮಪಟ್ಟಿದ್ದೇನೆ’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

‘ಜಿಲ್ಲೆಯಲ್ಲಿ ಬಯಲು ಶೌಚ ಮುಕ್ತ ತಾಲ್ಲೂಕಾಗಿ ಘೋಷಣೆಯಾಗಿದ್ದು ಹೊನ್ನಾಳಿ. ತಾಲ್ಲೂಕಿನ 175 ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ತಾಲ್ಲೂಕಿಗೆ ಇಂಧನ ಇಲಾಖೆಯಡಿ ₹ 150 ಕೋಟಿ ಬಿಡುಗಡೆಯಾಗಿದ್ದು, ನಿರಂತರ ಜ್ಯೋತಿ ಯೋಜನೆಯಡಿ ದಿನದ 24 ಗಂಟೆಗಳ ಕಾಲವೂ ಸತತವಾಗಿ ವಿದ್ಯುತ್ ನೀಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ತಮ್ಮ ಅವಧಿಯಲ್ಲಿ 10,800 ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಇನ್ನು 2,650 ಮನೆಗಳನ್ನು ನಿರ್ಮಿಸಿಕೊಟ್ಟರೆ ಇಡೀ ತಾಲ್ಲೂಕು ಗುಡಿಸಲು ಮುಕ್ತವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಗಮನಹರಿಸಬೇಕು ಎಂದು ಮನವಿ ಮಾಡಿದರು.

ತುಂಗಾ ನಾಲೆ ಆಧುನೀಕರಣಕ್ಕೆ ₹ 143 ಕೋಟಿ ಮಂಜೂರು ಮಾಡಿದ್ದು, ಮುಂದಿನ ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಮುಗಿಸಲಾಗುವುದು. ತಾಲ್ಲೂಕಿನ 49 ಗ್ರಾಮಗಳನ್ನು ಪೋಡಿಮುಕ್ತ ಮಾಡಲಾಗಿದೆ ಎಂದರು.

Leave A Comment

   

ದಾವಣಗೆರೆ ಜಿಲ್ಲಾ ಸುದ್ಧಿಗಳು

News Tag

News Name

News Name

By Editor
08:52:08 AM / Wed, Feb 21st, 2018
News Tag

News Name

News Name

By Editor
08:52:08 AM / Wed, Feb 21st, 2018
News Tag

News Name

News Name

By Editor
08:52:08 AM / Wed, Feb 21st, 2018
News Tag

News Name

News Name

By Editor
08:52:08 AM / Wed, Feb 21st, 2018
News Tag

News Name

News Name

By Editor
08:52:08 AM / Wed, Feb 21st, 2018
News Tag

News Name

News Name

By Editor
08:52:08 AM / Wed, Feb 21st, 2018
News Tag

News Name

News Name

By Editor
08:52:08 AM / Wed, Feb 21st, 2018
News Tag

News Name

News Name

By Editor
08:52:08 AM / Wed, Feb 21st, 2018
News Tag

News Name

News Name

By Editor
08:52:08 AM / Wed, Feb 21st, 2018