ದತ್ತಮಾಲಾ ಶೋಭಾಯಾತ್ರೆ


By Editor
08:54:07 AM / Wed, Feb 21st, 2018

ವಿಶ್ವಹಿಂದು ಪರಿಷತ್, ಬಜರಂಗದಳದ ದತ್ತಮಾಲಾ ಅಭಿಯಾನದ ಅಂಗವಾಗಿ ನಗರದಲ್ಲಿ ಶನಿವಾರ ಭವ್ಯ ಶೋಭಾಯಾತ್ರೆ ನಡೆಯಿತು.

ಮಧ್ಯಾಹ್ನ 3.30ರ ಸುಮಾರಿಗೆ ಕಾಮಧೇನು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿಧ್ಯುಕ್ತವಾಗಿ ಮೆರವಣಿಗೆ ಆರಂಭಗೊಂಡಿತು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ವಾದ್ಯ ಮೇಳ ಮುಂಚೂಣಿಯಲ್ಲಿದ್ದಂತೆ ದತ್ತಾತ್ರೇಯರ ಸಂಕೀರ್ತನೆ ಹಾಡುತ್ತ ಶಾಸಕ ಸಿ.ಟಿ.ರವಿ, ಜಿಪಂ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಮತ್ತಿತರರು ಹೆಜ್ಜೆ ಹಾಕಿ ಗಮನ ಸೆಳೆದರು.

ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್​ವೆಲ್, ವಿಭಾಗೀಯ ಸಂಚಾಲಕ ರಘು ಸಕಲೇಶಪುರ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಎಂಎಲ್​ಸಿ ಎಂ.ಕೆ.ಪ್ರಾಣೇಶ್, ಸಂಸದೆ ಶೋಭಾ ಕರಂದ್ಲಾಜೆ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪಡಿ ಸ್ವೀಕಾರ: ಶಾಸಕ ಸಿ.ಟಿ.ರವಿ ಸೇರಿದಂತೆ ದತ್ತಮಾಲೆ ಧರಿಸಿರುವವರು ಬೆಳಗ್ಗೆ ನಗರದ ವಿವಿಧ ಮನೆಗಳಿಗೆ ತೆರಳಿ ಪಡಿ ಸ್ವೀಕರಿಸಿದರು. ದತ್ತಪೀಠದಲ್ಲಿ ಇಂದು: ಡಿ.3ರ ಬೆಳಗ್ಗೆ 7.30 ರಿಂದ ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ಪಾದುಕೆಗಳ ದರ್ಶನ ಆರಂಭವಾಗಲಿದೆ. ವ್ರತಧಾರಿಗಳು ತಾವು ಸಂಗ್ರಹಿಸಿದ ಪಡಿ ಅರ್ಪಿಸಿ ದೇವರ ದರ್ಶನ ಪಡೆಯಲಿದ್ದಾರೆ. ಗಣಪತಿ ಹೋಮ, ದತ್ತಹೋಮ, ಧರ್ಮ ಸಭೆ ನಡೆಯಲಿದೆ. ಬಿಗುವಿನ ವಾತಾವರಣ.

ಶೋಭಾಯಾತ್ರೆ ವೇಳೆ ಕೆಲ ಕಿಡಿಗೇಡಿಗಳು ಭಕ್ತರಿಗೆ ಬೇಗ ಸಾಗುವಂತೆ ಕೈಸಂಜ್ಞೆ ಮಾಡಿದ್ದೇ ಕೆಲ ಸಮಯ ಬಿಗುವಿನ ವಾತಾವರಣಕ್ಕೆ ಕಾರಣವಾಯಿತು. ಈ ವೇಳೆ ಶೋಭಾಯಾತ್ರೆಯಲ್ಲಿದ್ದ ಭಕ್ತರನ್ನು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಎಸ್ಪಿ ಕೆ.ಅಣ್ಣಾಮಲೈ ಸಮಾಧಾನಪಡಿಸಿದರು..

ಮೂರು ತಿಂಗಳೊಳಗೆ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸದಿದ್ದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದಿಲ್ಲ. ದತ್ತಪಾದುಕೆ ಹಾಗೂ ದತ್ತಪೀಠ ಹಿಂದುಗಳ ಕೈಗೆ ಸೇರದಿದ್ದಲ್ಲಿ ಅದು ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ..

ಗೋಪಾಲ್ ವಿಎಚ್​ಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ.

ದೇವಲಗಾಣಗಾಪುರಕ್ಕೆ ಭಕ್ತಸಾಗರ.

ದೇವಲಗಾಣಗಾಪುರ(ಕಲಬುರಗಿ): ಶ್ರೀ ದತ್ತ ಜಯಂತಿ ನಿಮಿತ್ತ ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲಗಾಣಗಾಪುರದಲ್ಲಿ ಸಹಸ್ರಾರು ಭಕ್ತರ ಜೈಘೊಷಗಳ ಮಧ್ಯೆ ಶನಿವಾರ ಮಧ್ಯಾಹ್ನ 12ಕ್ಕೆ ತೊಟ್ಟಿಲೋತ್ಸವ ನೆರವೇರಿತು. ಕ್ಷೇತ್ರದ ಶಾಸಕರಾದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಆರಾಧ್ಯ ದೈವ ದತ್ತನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರ ಮಾತ್ರವಲ್ಲ ಇಡೀ ಭಕ್ತಸಂಕುಲಗಳ ಇಷ್ಟಾರ್ಥ ಪೂರೈಸುವಂತೆ ಪ್ರಾರ್ಥನೆ ಸಲ್ಲಿಸಿದರು. ವ್ರತಾಚರಣೆ ಸಂಪನ್ನ.

ಗಂಗಾವತಿ (ಕೊಪ್ಪಳ): ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾಧಾರಿಗಳು ಮಾಲಾ ವಿಸರ್ಜನೆ ಮೂಲಕ ವ್ರತಾಚರಣೆಗೆ ತೆರೆ ಎಳೆದಿದ್ದು, ಶಾಂತಿಯುತವಾಗಿ ಶನಿವಾರ ಪೂರ್ಣಗೊಂಡಿತ್ತು. ಮಹಾರಾಷ್ಟ್ರ, ಆಂಧ್ರ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಾಲಾಧಾರಿಗಳು ಬೆಟ್ಟದ ಮುಂಭಾಗದಿಂದ ಪ್ರವೇಶಿಸಿ ಮಾಲೆ ವಿಸರ್ಜಿಸಿ, ಹಿಂಭಾಗದಿಂದ ಇಳಿದರು..

Leave A Comment

   

ಚಿಕ್ಕಮಗಳೂರು ಜಿಲ್ಲಾ ಸುದ್ಧಿಗಳು

News Tag

News Name

News Name

By Editor
08:54:07 AM / Wed, Feb 21st, 2018
News Tag

News Name

News Name

By Editor
08:54:07 AM / Wed, Feb 21st, 2018
News Tag

News Name

News Name

By Editor
08:54:07 AM / Wed, Feb 21st, 2018
News Tag

News Name

News Name

By Editor
08:54:07 AM / Wed, Feb 21st, 2018
News Tag

News Name

News Name

By Editor
08:54:07 AM / Wed, Feb 21st, 2018
News Tag

News Name

News Name

By Editor
08:54:07 AM / Wed, Feb 21st, 2018
News Tag

News Name

News Name

By Editor
08:54:07 AM / Wed, Feb 21st, 2018
News Tag

News Name

News Name

By Editor
08:54:07 AM / Wed, Feb 21st, 2018
News Tag

News Name

News Name

By Editor
08:54:07 AM / Wed, Feb 21st, 2018