ತರಕಾರಿ, ಹೂ, ಹಣ್ಣು ಧಾರಣೆ ಸ್ಥಿರ

By Editor
08:46:27 AM / Wed, Feb 21st, 2018

ನಗರದ ಮಾರುಕಟ್ಟೆಯಲ್ಲಿ ಕಳೆದ ಮೂರು, ನಾಲ್ಕು ತಿಂಗಳಿನಿಂದ ಏರಿಳಿತ ಕಾಣುತ್ತಿದ್ದ ತರಕಾರಿ, ಹೂವು ಹಾಗೂ ಹಣ್ಣಿನ ಬೆಲೆಗಳಲ್ಲಿ ಎರಡು ವಾರಗಳಿಂದ ಸ್ಥಿರತೆ ಕಂಡು ಬಂದಿದೆ. ತರಕಾರಿಗಳ ದರ ಗ್ರಾಹಕ ಸ್ನೇಹಿಯಾಗಿ ಪರಿಣಮಿಸಿದೆ.

ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಿನಲ್ಲಿ ತರಕಾರಿಗಳ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದರು. ಕೆಲವು ತರಕಾರಿಗಳು ಪ್ರತಿ ಕೆ.ಜಿಗೆ ₹ 50 ರಿಂದ 60ಕ್ಕೆ ಮಾರಾಟವಾಗುತ್ತಿದ್ದವು. ನಂತರದ ದಿನಗಳಲ್ಲಿ ಬೆಲೆ ಕುಸಿತ ಉಂಟಾಯಿತು. ಕಳೆದ ವಾರ ಟೊಮೆಟೊ ಧಾರಣೆ ಏಕಾಏಕಿ ಕುಸಿತವಾಗಿ ಕೆ.ಜಿಗೆ ₹ 5 ರಿಂದ 10ರಂತೆ ಮಾರಾಟವಾಗುತ್ತಿದೆ. ಇದರಿಂದ ಬೆಳೆ ಬೆಳೆಯುವುದಕ್ಕೆ ಹಾಕಿದ ಖರ್ಚು ಕೂಡ ಬಾರದಂತೆ ಆಗಿದ್ದು, ರೈತರು ಕಂಗೆಟ್ಟಿದ್ದಾರೆ.

ವರ್ಷಾಂತ್ಯದಲ್ಲಿ ಒಂದೆರಡು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದ ತರಕಾರಿಗಳ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ. ಸಣ್ಣ ಈರುಳ್ಳಿ ಮತ್ತು ನುಗ್ಗೆಕಾಯಿ ಧಾರಣೆ ಕೆ.ಜಿ.ಗೆ ₹ 180 ರಿಂದ 200 ಇದ್ದು, ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

‘ಮಾರುಕಟ್ಟೆಗೆ ತರಕಾರಿ ಪೂರೈಕೆ ಪ್ರಮಾಣ ಕಳೆದ ವಾರದಿಂದ ಹೆಚ್ಚಾಗಿರುವುದರಿಂದ ಬೆಲೆ ಇಳಿಕೆಯಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಸಂಚಾರ ಸ್ಥಗಿತವಾಗಿರುವುದರಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ರಂಗಸ್ವಾಮಿ ತಿಳಿಸಿದರು.

Leave A Comment

   

ಚಾಮರಾಜ ನಗರ ಜಿಲ್ಲಾ ಸುದ್ಧಿಗಳು

News Tag

News Name

News Name

By Editor
08:46:27 AM / Wed, Feb 21st, 2018
News Tag

News Name

News Name

By Editor
08:46:27 AM / Wed, Feb 21st, 2018
News Tag

News Name

News Name

By Editor
08:46:27 AM / Wed, Feb 21st, 2018
News Tag

News Name

News Name

By Editor
08:46:27 AM / Wed, Feb 21st, 2018
News Tag

News Name

News Name

By Editor
08:46:27 AM / Wed, Feb 21st, 2018
News Tag

News Name

News Name

By Editor
08:46:27 AM / Wed, Feb 21st, 2018
News Tag

News Name

News Name

By Editor
08:46:27 AM / Wed, Feb 21st, 2018
News Tag

News Name

News Name

By Editor
08:46:27 AM / Wed, Feb 21st, 2018
News Tag

News Name

News Name

By Editor
08:46:27 AM / Wed, Feb 21st, 2018