ಬಳ್ಳಾರಿ

ಕನ್ನಡ ನಾಡು ಕಟ್ಟುವಲ್ಲಿ ದೇಜಗೌ ಶ್ರಮ ಅನನ್ಯ


By Editor
08:52:40 AM / Wed, Feb 21st, 2018
ಸಂಡೂರು:

ಕನ್ನಡ ನಾಡು ಕಟ್ಟುವಲ್ಲಿ ದೇ.ಜವರೇಗೌಡರ ಪಾತ್ರ ಅಭೂತಪೂರ್ವವಾದುದು. ರಾಜ್ಯದಲ್ಲಿ ಜನಪದ ವಿಶ್ವವಿದ್ಯಾಲಯ ಸ್ಥಾಪನೆ, ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ಸಿಗುವಲ್ಲಿ ಅವರು ಶ್ರಮಿಸಿದ ಹೋರಾಟ ದೊಡ್ಡದು ಎಂದು ಡಾ| ಗುರುಪಾದ ಮರಿಗುದ್ದಿ ಸಂಕೇಶ್ವರ ಅಭಿಪ್ರಾಯಪಟ್ಟರು.

ಪಟ್ಟಣದ ವಿರಕ್ತಮಠದಲ್ಲಿ ಕಸಾಪ ಮತ್ತು ಪ್ರಭುದೇವರ ಜನಕಲ್ಯಾಣ ಸಂಸ್ಥೆ ವತಿಯಿಂದ ಕನ್ನಡ ಸಾಹಿತಿಗಳ ಶತಮಾನ ಸ್ಮರಣೆ ಕಾರ್ಯಕ್ರಮದಲ್ಲಿ ದೇ.ಜ.ಗೌ ಕುರಿತು ಮಾತನಾಡಿದ ಅವರು, ಬಸವಣ್ಣ ಮತ್ತು ಕುವೆಂಪು ಅವರ ಬಗ್ಗೆ ಇಡೀ ನಾಡಿಗೆ ಪೂರ್ಣ ಪರಿಚಯಿಸುವಂತಹ, ಸಾಹಿತ್ಯ ರಚಿಸುವಂತಹ ಮಹತ್ತರ ಕಾರ್ಯ ದೇ.ಜ.ಗೌ ಮಾಡಿದವರು ಎಂದರು.

ಕನ್ನಡ ಭಾಷೆ ವಿದೇಶಕ್ಕೆ ಪಸರಿಸಲು ಅನುವಾದ ಮಾಡಿದ ಕಾರ್ಯ, ಅನೇಕ ಸಾಹಿತಿಗಳನ್ನು ಕರೆ ತಂದು ಮೈಸೂರು ವಿಶ್ವವಿದ್ಯಾಲಯ ಶ್ರೇಷ್ಠ ವಿಶ್ವವಿದ್ಯಾಲಯವನ್ನಾಗಿ ಮಾಡಿದ ಕೀರ್ತಿ ದೆ.ಜೆ. ಗೌ ಅವರಿಗೆ ಸಲ್ಲುತ್ತದೆ. ಅವರು 365 ಕೃತಿಗಳನ್ನು ಪ್ರಕಟಿಸಿದರು ಎಂದು ತಿಳಿಸಿದರು.

ಡಾ|ಎಚ್‌.ಎಸ್‌. ಸತ್ಯನಾರಾಯಣ ಮಾತನಾಡಿ, ಬಿ.ಜಿ.ಎಲ್‌. ಸ್ವಾಮಿಯವರು ಡಿ.ವಿ.ಗುಂಡಪ್ಪನವರ ಮಗನಾಗಿದ್ದರೂ ಸಹ ಅವರನ್ನು ಹೊರತುಪಡಿಸಿ ಸ್ವಂತ ಬೆಳೆದು ನಿಂತವರಲ್ಲಿ ಬಿ.ಜಿ.ಎಲ್‌. ಸ್ವಾಮಿ ಒಬ್ಬರು. ಅವರು ಒಬ್ಬ ಶೇಷ್ಠ ಸಸ್ಯ ವಿಜ್ಞಾನಿಯಾಗಿ ಕನ್ನಡ ಸಾಹಿತ್ಯವನ್ನು ರಚಿಸಿ ಇಡೀ ವಿಶ್ವಕ್ಕೆ ತಮ್ಮ ಸಾಹಿತ್ಯವನ್ನು ಪರಿಚಯ ಮಾಡಿದವರು. ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದೆ ಮತ್ತು ಮಗ ಪಡೆದವರಲ್ಲಿ ಮೊದಲಿಗರಾಗಿ ಬಿ.ಜಿ.ಎಲ್‌.ಸ್ವಾಮಿ ಮತ್ತು ಡಿ.ವಿ.ಜಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಡಾ| ಅಮರೇಶ್‌ ನುಗಡೋಣಿ ಮಾತನಾಡಿ, ಪ್ರತಿಯೊಂದು ಮಠಕ್ಕೆ ಒಬ್ಬ ಸಾಹಿತಿ ಮಾರ್ಗದರ್ಶನ ಮಾಡಿದರೆ ಬೌದ್ಧಿಕವಾಗಿ ಆ ಮಠ ಬೆಳೆಯಲು ಕಾರಣವಾಗುತ್ತದೆ. ಕವಿಗಳ ಸಾಹಿತ್ಯದ ಸಾಧನೆ ಮತ್ತು ಅವರ ನಿಜವಾದ ಕೃತಿಗಳ ಪರಿಚಯವನ್ನು ಸಾಹಿತ್ಯ ಮೂಲಕ, ಚಿಂತನೆ ಮೂಲಕ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

Leave A Comment

   

ಬಳ್ಳಾರಿ ಜಿಲ್ಲಾ ಸುದ್ಧಿಗಳು

News Tag

News Name

News Name

By Editor
08:52:40 AM / Wed, Feb 21st, 2018
News Tag

News Name

News Name

By Editor
08:52:40 AM / Wed, Feb 21st, 2018
News Tag

News Name

News Name

By Editor
08:52:40 AM / Wed, Feb 21st, 2018
News Tag

News Name

News Name

By Editor
08:52:40 AM / Wed, Feb 21st, 2018
News Tag

News Name

News Name

By Editor
08:52:40 AM / Wed, Feb 21st, 2018
News Tag

News Name

News Name

By Editor
08:52:40 AM / Wed, Feb 21st, 2018
News Tag

News Name

News Name

By Editor
08:52:40 AM / Wed, Feb 21st, 2018
News Tag

News Name

News Name

By Editor
08:52:40 AM / Wed, Feb 21st, 2018
News Tag

News Name

News Name

By Editor
08:52:40 AM / Wed, Feb 21st, 2018