ಗಬ್ಬುಹೊಡೆಯುತ್ತಿರುವ ಹಳ್ಳ


By ವೀರಭದ್ರಪ್ಪ.ಜಿ
08:52:29 AM / Wed, Feb 21st, 2018 0 Comments 1,200
ಗಬ್ಬುಹೊಡೆಯುತ್ತಿರುವ ಹಳ್ಳ

ಭತ್ತದ ನಾಡು ಎಂದು ಹೆಸರುವಾಸಿಯಾಗಿರುವ ಗಂಗಾವತಿಗೆ ಕಾಯಕಯೋಗಿ ಶ್ರೀ ಚನ್ನಬಸವ ತಾತನ ಹಾಗೂ ಪಕ್ಕದಲ್ಲಿಯೇ ಇರುವ ದುರ್ಗಾಮಾತೆಯ ದೇವಸ್ಥಾನಗಳು ನಮ್ಮ ಊರಿಗೆ ಕಳಶಪ್ರಾಯದಂತೆ ನಗರದ ಹೃದಯ ಭಾಗದಲ್ಲಿರುವ ಈ ದೇವಸ್ಥಾನಗಳ ಪಕ್ಕದಲ್ಲಿಯೇ ಹರಿಯುವ ದುರ್ಗಮ್ಮನ ಹಳ್ಳ ಇಂದು ಅತ್ಯಂತ ಮಲೀನವಾಗಿದೆ ಈ ದೇವಸ್ಥಾನಗಳಿಗೆ ಬರುವ ಭಕ್ತರು ಮಡಿಯುಟ್ಟು ಮೂಗು ಮುಚ್ಚಿಕೋಂಡು ದೇವರ ದರ್ಶನಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ಈ ಹಳ್ಳ ಹರಿಯುವ ಭಾಗದಲ್ಲಿ ಸುಮಾರು ಆರೇಳು ವಾರ್ಡಗಳು ಬರುತ್ತವೆ ಆಯಾ ವಾರ್ಡ್‍ಗಳಲ್ಲಿ,ಕಲುಷಿತ ವಾತಾವರಣ, ಇತ್ತೀಚೆಗೆ ಡೇಂಗ್ಯೂ ಜ್ವರ ಇನ್ನಿತರೆ ಮಾರಣಾಂತಿಕ ಕಾಯಿಲೆಗಳು ಹರಡುತ್ತಿದ್ದು ಬಹುತೇಕ ನಗರವಾಸಿಗಳು ತ್ಯಾಜ್ಯ ಸಂಗ್ರಹ , ಆಸ್ಪತ್ರೆಯ ತ್ಯಾಜ್ಯ ವಸ್ತುಗಳನ್ನು ಈ ಹಳ್ಳಕ್ಕೆ ಚೆಲ್ಲುವುದರಿಂದ ಅತ್ಯಂತ ಮಲೀನವಾಗಿದ್ದು , ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನವಾದಂತಾಗಿದ್ದು ನಾಲ್ಕಾರು ಶಾಲೆಗಳೂ ಈ ಹಳ್ಳ ಹರಿಯುವ ಪಕ್ಕದಲ್ಲಿಯೇ ಇರುವುದರಿಂದ . ಮಕ್ಕಳು ಮೂಗು ಮುಚ್ಚಿಕೊಂಡು ಪಾಠ ಕೇಳುವ ಪರಿಸ್ಥಿತಿ ತಲೆದೂರಿದೆ. MORE...

ನಿಜಕ್ಕೂ ನೇಕಾರರಿಗೆ ದಕ್ಕಿದ್ದೆಷ್ಟು


By ಕಿರಣ್ ಕರಲಟ್ಟಿ ಬನಹಟ್ಟಿ
08:52:29 AM / Wed, Feb 21st, 2018 0 Comments 1,200
ನಿಜಕ್ಕೂ ನೇಕಾರರಿಗೆ ದಕ್ಕಿದ್ದೆಷ್ಟು

ಚುನಾವಣೆ ಸಮೀಪಿಸಿದಾಗಂತೂ ಜನಪ್ರತಿನಿಧಿಗಳಿಗೆ ತಮ್ಮ ಸ್ಥಾನದ ತಲೆಬಿಸಿ ಆರಂಭವಾಗುವುದು ಸರ್ವೇಸಾಮಾನ್ಯ , ಅದರಂತೆ ಸಾಮಾನ್ಯ ಜನರು ಸರಕಾರ ಇಂತಹ ಸಮಯದಲ್ಲಾದರೂ ಕೈಹಿಡಿಯುತ್ತೆ ಎಂದು ಜಾತಕ ಪಕ್ಷಿಯಂತೆ ಕಾಯುವುದು ಸಹಜ. ಈಗ ನಾನು ಹೇಳಲು ಹೊರಟಿರುವುದೆನೆಂದರೆ ಇತ್ತಿಚ್ಚಿಗಾದ ನೇಕಾರರ ಸಾಲಮನ್ನಾ ವಿಷಯದ ಕುರಿತು. ಈ ವಿಚಾರದಲ್ಲಿ ರಾಜಕೀಯ ಪ್ರಾದಂಭವಾಗುವುದು ಸರ್ವೇಸಾಮಾನ್ಯ , ಇಲ್ಲಿ ರಾಜಕೀಯ ಲೆಕ್ಕಕ್ಕಿಲ್ಲ , ವಿಷಯವಿಷ್ಟೇ, ನೇಕಾರರ ಸಾಲಮನ್ನಾದಲ್ಲಿ ನಿಜವಾಗ್ಲೂ ಕೆಳಹಂತದ ನೇಕಾರರ ಸಮಸ್ಯೆಗಳ ಪರಿಹಾರ ಹಾಗೂ ಅವರ ಸಾಲಮನ್ನಾ ಆಗುತ್ತದೆಯೋ ಎಂಬುದು ಇಲ್ಲಿ ಬಹುತೇಕ ಚರ್ಚಿತ ವಿಷಯ. ನಮ್ಮಲ್ಲಿ ನೇಕಾರ ಮುಖಂಡರು ಬಹಳಷ್ಟು ಪ್ರಬಲರಾಗಿರುವುದರಿಂದ ಅವರು ಸಾಲವನ್ನು ಯಾವುದೋ ಒಂದು ನೇಕಾರ ಬ್ಯಾಂಕ್ ನಲ್ಲಿ ತೆಗೆದಿರುವುದರಿಂದ ಅವರ ಸಾಲಮನ್ನಾ ಪ್ರಕ್ರಿಯೆ ಸುಲಭವಾಗಿರುತ್ತದೆ. ಅಂತೆಯೇ ನೇಕಾರ ಮುಖಂಡರಲ್ಲಿ ಕೆಲಸಕ್ಕಿದ್ದವರು ಅವರಲ್ಲಿಯೇ ಸಾಲ ಪಡೆದು ಬಾಕಿ ಹಣ ಎಂದು ಅದನ್ನು ತೀರಿಸುವುದರಲ್ಲಿಯೇ ಹೆಣಗಾಡುತ್ತಿರುತ್ತಾರೆ. ಇಂತವರು ಒಂದು ಸೂರು ಇಲ್ಲದೆಯೇ ನರಳಾಡುತ್ತಾ ಅತಂತ್ರ ಸ್ಥಿತಿಯಲ್ಲಿ ಇದ್ದುದು ಖೇದಕರ ಸಂಗತಿ. ಈ ಸಂದಿಗ್ಧ ಸ್ಥಿತಿಯಿಂದ ಕೆಳಮಟ್ಟದ ನೇಕಾರರು ಮೇಲೆದ್ದು ಬರುವುದು ಯಾವಾಗ ? More..

ಗಂಗಾವತಿಗೆ ದೇವ್ರೇ ಗತಿ...!?


By Editor
08:52:29 AM / Wed, Feb 21st, 2018 0 Comments 1,200
ಗಂಗಾವತಿಗೆ ದೇವ್ರೇ ಗತಿ...!?

ನಗರದ ಬಹುತೇಕ ರಸ್ತೆಗಳು ಹಾಳಾಗಿವೆ ಸಮಯಕ್ಕೆ ಸರಿಯಾದ ನಿರ್ವಹಣೆ ಇಲ್ಲದೇ , ಕಳಪೇ ಕಾಮಗಾರಿಗಳಿಂದ ಒಂದು ಸಣ್ಣ ಮಳೆಯಾದರೂ ಸಹ ವಾಹನಸಾವಾರರಿಗೆ ತೊಂದರೆ ತಪ್ಪಿದ್ದಲ್ಲಾ. ಈ ಶಿವೆ ಟಾಕೀಸ್ ನಿಂದ ಸಿ.ಬಿ.ಎಸ್ ಗಂಜ್ ಬೈ ಪಾಸ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ,ಸುಮಾರು ನೂರಕ್ಕೂ ಹೆಚ್ಚು ತಗ್ಗು ಗುಂಡಿಗಳು ಬಿದ್ದಿವೆ ,ಮಳೆಗಾಲದಲ್ಲಿ ಗುಂಡಿಗಳೆಲ್ಲ ನೀರು ತುಂಬಿ ಚಿಕ್ಕ ಚಿಕ್ಕ ಮರುಭೂಮಿಯಲ್ಲಿರುವ ಓಯಸಿಸ್ಗಳಂತೆ ಕಂಗೊಳಿಸುತ್ತಿರುತ್ತವೆ !! , ಭತ್ತದ ನಗರದ , ಮುಖ್ಯ ವಾಣಿಜ್ಯ ಕೇಂದ್ರವಾದ ಶ್ರೀ ಚನ್ನಬಸವ ಸ್ವಾಮಿ ಜ್ ಗೆ ಕಲ್ಪಿಸುವ ಈ ರಸ್ತಯಲ್ಲೇ ಬಹುತೇಕರು ವಾಣಿಜ್ಯ ಉದ್ದೇಶಕ್ಕಾಗಿ ತಿರುಗಾಡುತ್ತಾರೆ, ರಸ್ತೆಯ ಅವ್ಯವಸ್ಥೆಯ ಬಗ್ಗೆ ಸ್ಥಳೀಯರೂ ,ಆ ರಸ್ತೆಯಲ್ಲಿ ತಿರುಗಾಡುವ ವಾಹನಸವಾರರು ಜನಪ್ರತಿನಿಧಿಗಳ ಬಗ್ಗೆ ಹಿಡಿ ಶಾಪ ಹಾಕುತ್ತಾರೆ ಈ ರಸ್ತೆ ಯಾವಾಗ ರೀಪೇರಿ ಮಾಡತಾರೋ ಎಂದು ? More..

ಮೂಲ ಸೌಕರ್ಯದಿಂದ ವಂಚಿತ ಯಲಬುರ್ಗಾದ 3ನೇ ವಾರ್ಡ

By Editor
08:52:29 AM / Wed, Feb 21st, 2018 0 Comments 1,200
ಮೂಲ ಸೌಕರ್ಯದಿಂದ ವಂಚಿತ ಯಲಬುರ್ಗಾದ 3ನೇ ವಾರ್ಡ

ಕೊಪ್ಪಳ ಜಿಲ್ಲಾ ಯಲಬುರ್ಗಾ ಪಟ್ಟಣದ 3ನೇ ವಾರ್ಡಿನ ಕೊರವರ ಓಣಿ, ಲಂಬಾಣಿ ಓಣಿ ಮತ್ತು ಸುಣಗಾರ ಓಣಿಯ ಜನರಿಗೆ ರಸ್ತೆ ಮತ್ತು ನೀರಿನ ಸೌಕರ್ಯ ಇಲ್ಲ ವಾರ್ಡಿನ ಸದಸ್ಯರಿಗೆ, ಅಧ್ಯಕ್ಷರಿಗೆ , ಮಾನ್ಯ ಶಾಸಕರಿಗೆ ಮತ್ತು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರು ಸಹ ಗಮನಹರಿಸುತ್ತಿಲ್ಲ. ಈ 3ನೇ ವಾರ್ಡಿನ ಜನರಿಗೆ ಚಿಕ್ಕ ಪುಟ್ಟ ಕೆಲಸಗಳಿಗೆ ವಾಹನಗಳಿಗೆ ಗರ್ಭಿಣಿ ಮಹಿಳೆಯರಿಗೆ ರಸ್ತೆ ಇಲ್ಲದಂತಾಗಿದೆ. ಇಲ್ಲಿಯ ರಸ್ತೆಯ ಬಗ್ಗೆ ಸುಮಾರು ಸಲ ಅರ್ಜಿಗಳನ್ನು ನೀಡಿದ್ದೇವೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಸುಮಾರು 25 ವರ್ಷ ಗಳಿಂದ ರಸ್ತೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಇದರ ಬಗ್ಗೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುತ್ತೇವೆ ಚುನಾವಣೆ ಸಮೀಪಿಸುವತ್ತಿರುವ ಸಮಯದಲ್ಲಾದರೂ ಸಂಬಂಧ ಪಟ್ಟವರು ತಮ್ಮ ಜಾಣ ನಿದ್ರೆಯಿಂದ ಹೊರಬಂದು ಇನ್ನಾದರೂ ಈ ಸಮಸ್ಯೆಗೆ ಪರಿಹಾರ ನೀಡುವಿರೆಂದು ನಂಬಿರುವ 3ನೇ ವಾರ್ಡಿನ ಜನತೆ. More..