ಫಿಲಿಪ್ಪೀನ್ಸ್‌: ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ ದುರಂತ, 37 ಬಲಿ


By Editor
08:50:19 AM / Wed, Feb 21st, 2018
ದಾವೋ (ಫಿಲಿಪ್ಪೀನ್ಸ್‌):

ಕ್ರಿಸ್ಮಸ್‌ ಸಂಭ್ರಮ ಕಸಿದ ದುರಂತ | ದಟ್ಟ ಹೊಗೆಯಿಂದ ರಕ್ಷಣಾ ಕಾರ್ಯ ವಿಳಂಬ

ನಗರದ ಪ್ರಸಿದ್ಧ ಶಾಪಿಂಗ್‌ ಮಾಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಕ್ರಿಸ್ಮಸ್‌ ಶಾಪಿಂಗ್‌ ಸಂಭ್ರಮದಲ್ಲಿದ್ದ 37 ಜನರನ್ನು ಬಲಿ ತೆಗೆದುಕೊಂಡಿದೆ.

ದಕ್ಷಿಣ ಫಿಲಿಪ್ಪೀನ್ಸ್‌ನ ದೊಡ್ಡ ನಗರವಾದ ದಾವೋದಲ್ಲಿ ಈ ದುರ್ಘಟನೆ ನಡೆದಿದೆ. ಕ್ರಿಸ್ಮಸ್‌ ಸಂಭ್ರಮ ಹಾಗೂ ವೀಕೆಂಡ್‌ ಮೂಡ್‌ನಲ್ಲಿದ್ದ ಜನರು ಶನಿವಾರ ಸಂಜೆ ತರಹೇವಾರಿ ವಸ್ತುಗಳ ಖರೀದಿಗೆಂದು ನಾಲ್ಕು ಮಹಡಿಯ ಎನ್‌ಸಿಸಿಸಿ ಮಾಲ್‌ಗೆ ಲಗ್ಗೆ ಇಟ್ಟಿದ್ದರು. ಭಾರಿ ಜನಜಂಗುಳಿಯ ಕಾರಣ ಸಾವಿನ ಸಂಖ್ಯೆ ಹೆಚ್ಚಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಟ್ಟೆ ಮಳಿಗೆಗಳು, ಕಟ್ಟಿಗೆಯ ಪೀಠೋಪಕರಣ ಹಾಗೂ ಪ್ಲಾಸ್ಟಿಕ್‌ವೇರ್‌ ಮಳಿಗೆಗಳು ಇದ್ದ ಕಾರಣ ಬೆಂಕಿಯ ಜ್ವಾಲೆ ಬಹುಬೇಗ ಇಡೀ ಕಟ್ಟಡವನ್ನು ಆವರಿಸಿಕೊಂಡಿತು. ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಭಾನುವಾರ ಬೆಳಗಿನ ಜಾವ 3 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರಾದರೂ ಅಷ್ಟೊತ್ತಿಗಾಗಲೇ 37 ಮಂದಿ ಸುಟ್ಟು ಕರಕಲಾಗಿದ್ದರು ಎಂದು ಪೊಲೀಸ್‌ ಅಧಿಕಾರಿ ರಾಲ್ಫ್‌ ಕನೋಯಿ ಅವರ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ..

ಕಟ್ಟಡದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿಕೊಂಡಿದ್ದು, ಅವರು ಬದುಕುಳಿದಿರುವ ಸಾಧ್ಯತೆಗಳು ಕ್ಷೀಣಿಸಿದೆ. ದಟ್ಟ ಹೊಗೆ ಇಡೀ ಕಟ್ಟಡವನ್ನು ಆವರಿಸಿದ್ದರಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ರಕ್ಷಣಾ ಕಾರ್ಯಚರಣೆ ವಿಳಂಬವಾಗಿ ಹೆಚ್ಚಿನ ಜೀವಗಳು ಬಲಿಯಾದವು ಎಂದು ಸರಕಾರ ಹೇಳಿದೆ.

ಅಧ್ಯಕ್ಷರ ಸಾಂತ್ವನ::

ದುರ್ಘಟನೆ ನಡೆದ ಸ್ಥಳಕ್ಕೆ ಫಿಲಿಪ್ಪೀನ್ಸ್‌ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಭೇಟಿಕೊಟ್ಟು ಪರಿಶೀಲನೆ ನಡೆಸಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಸರಕಾರ ನೀಡಿದೆ.

Leave A Comment

ಟಾಪ್ ಸುದ್ಧಿಗಳು

ಬೆಂಗಳೂರು:

ಟಾಪ್ ಸುದ್ಧಿಗಳು

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
08:50:19 AM / Wed, Feb 21st, 2018
ಬೆಂಗಳೂರು:

ಬೆಂಗಳೂರು:

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆ

By Editor
08:50:19 AM / Wed, Feb 21st, 2018
ದಾವೋ (ಫಿಲಿಪ್ಪೀನ್ಸ್‌):

ದಾವೋ (ಫಿಲಿಪ್ಪೀನ್ಸ್‌):

ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ

By Editor
08:50:19 AM / Wed, Feb 21st, 2018
ಬೆಂಗಳೂರು:

ಬೆಂಗಳೂರು:

ವಿಮಾನ ಪ್ರಯಾಣ ದರ ಇಳಿಕೆ

By Editor
08:50:19 AM / Wed, Feb 21st, 2018
ನವದೆಹಲಿ:

ನವದೆಹಲಿ:

ಕೇಂದ್ರ ಬಜೆಟ್ 2018:

By Editor
08:50:19 AM / Wed, Feb 21st, 2018
ಮುಂಬೈ:

ನವದೆಹಲಿ:

ಯಶಸ್ವಿ ವರ್ಷಕ್ಕೆ ಜಯದ ವಿದಾಯ

By Editor
08:50:19 AM / Wed, Feb 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017