ಮಂಗಳೂರು:

ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸರ್ಕಾರ ಪ್ರೋತ್ಸಾಹ: ಕೃಷ್ಣ ಭೈರೇಗೌಡ

By Editor
08:56:09 AM / Wed, Feb 21st, 2018

ರಾಜ್ಯದಲ್ಲಿ 14 ಒಕ್ಕೂಟಗಳ ಮೂಲಕ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಉದ್ಯಾನದಲ್ಲಿ ನಿನ್ನೆ ಎರಡು ದಿನಗಳ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ ಮತ್ತು ವಾಣಿಜ್ಯ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು

ಸಿರಿಧಾನ್ಯ ಮತ್ತು ಸಾವಯವ ಆಹಾರ ಬಳಕೆ ಮಹತ್ವ ಕುರಿತು ಅರಿವು ಮೂಡಿಸುವ ಮೂಲಕ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮುಂದಿನ ತಿಂಗಳ 19ರಿಂದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತಿದೆ, ಬೃಹತ್ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ರೈತ ದಿನಾಚರಣೆ ಅಂಗವಾಗಿ ಬೀದರ್‍ನಲ್ಲಿಂದು ಜಿಲ್ಲಾ ಸಾವಯವ ಕೃಷಿ ಸಮ್ಮೇಳನ ಮತ್ತು ಸಿರಿಧಾನ್ಯ ಮೇಳ ಏರ್ಪಾಡಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ರಾಜ್ಯ ಸರ್ಕಾರ ಸಿರಿಧಾನ್ಯ ಬೆಳೆಗಳು ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಸಿರಿಧಾನ್ಯ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಚಿಂತನೆ ಇದೆ. ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಲಾಗುತ್ತಿದೆ ಎಂದು ಹೇಳಿದರು.

Leave A Comment

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
08:56:09 AM / Wed, Feb 21st, 2018
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
08:56:09 AM / Wed, Feb 21st, 2018
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
08:56:09 AM / Wed, Feb 21st, 2018
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
08:56:09 AM / Wed, Feb 21st, 2018
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
08:56:09 AM / Wed, Feb 21st, 2018
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
08:56:09 AM / Wed, Feb 21st, 2018