ಯಶಸ್ವಿ ವರ್ಷಕ್ಕೆ ಜಯದ ವಿದಾಯ


By Editor
08:55:43 AM / Wed, Feb 21st, 2018
ಮುಂಬೈ:

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಮೂವರು ವೇಗಿಗಳು ಮತ್ತು ಇ‌ಬ್ಬರು ಸ್ಪಿನ್ನರ್‌ಗಳ ದಾಳಿಗೆ ಕಂಗೆಟ್ಟು 135 ರನ್‌ ಗಳಿಸಿತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ಏಳು ಓವರ್‌ಗಳಾಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಕಳೆದುಕೊಂಡಿತು. ಆದರೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ತಂಡದ ಗೆಲುವಿನ ಓಟಕ್ಕೆ ಇದರಿಂದ ಅಡ್ಡಿಯಾಗಲಿಲ್ಲ.

ವರ್ಷದ ಕೊನೆಯ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿದ ಭಾರತ ತಂಡ ಶ್ರೀಲಂಕಾ ಎದುರಿನ ಟ್ವೆಂಟಿ–20 ಸರಣಿಯನ್ನು 3–0ರಲ್ಲಿ ಕೈವಶ ಮಾಡಿಕೊಂಡಿತು. ಕ್ರಿಸ್‌ಮಸ್ ಮುನ್ನಾ ದಿನವಾದ ಭಾನುವಾರ ರಾತ್ರಿ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಐದು ವಿಕೆಟ್‌ಗಳ ಜಯ ಸಾಧಿಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಮೂವರು ವೇಗಿಗಳು ಮತ್ತು ಇ‌ಬ್ಬರು ಸ್ಪಿನ್ನರ್‌ಗಳ ದಾಳಿಗೆ ಕಂಗೆಟ್ಟು 135 ರನ್‌ ಗಳಿಸಿತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ಏಳು ಓವರ್‌ಗಳಾಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಕಳೆದುಕೊಂಡಿತು. ಆದರೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ತಂಡದ ಗೆಲುವಿನ ಓಟಕ್ಕೆ ಇದರಿಂದ ಅಡ್ಡಿಯಾಗಲಿಲ್ಲ.

ಶ್ರೇಯಸ್ ಅಯ್ಯರ್‌ ಮತ್ತು ಮನೀಷ್ ಪಾಂಡೆ ಜೊತೆಗೂಡಿ ಮೂರನೇ ವಿಕೆಟ್‌ಗೆ 42 ರನ್‌ ಸೇರಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು. ಪರಿಸ್ಥಿತಿಗೆ ತಕ್ಕಂತೆ ತಾಳ್ಮೆಯಿಂದ ಆಡಿದ ಅಯ್ಯರ್‌ 32 ಎಸೆತಗಳಲ್ಲಿ 30 ರನ್‌ ಗಳಿಸಿದರೆ ಮನೀಷ್ ಪಾಂಡೆ ಸ್ಫೋಟಕ ಬ್ಯಾಟಿಂಗ್ ಮಾಡಿದರು. 29 ಎಸೆತಗಳಲ್ಲಿ 32 ರನ್‌ ಗಳಿಸಿದ ಅವರ ಇನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿಗಳಿದ್ದವು..

ಹಾರ್ದಿಕ್ ಪಾಂಡ್ಯ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಆದರೆ ಆರನೇ ವಿಕೆಟ್‌ಗೆ ಜೊತೆಗೂಡಿದ ದಿನೇಶ್ ಕಾರ್ತಿಕ್ ಮತ್ತು ಮಹೇಂದ್ರ ಸಿಂಗ್ ದೋನಿ ನಿರಾಯಾಸವಾಗಿ ಬ್ಯಾಟ್‌ ಬೀಸಿ ತಂಡವನ್ನು ಜಯದ ದಡ ಸೇರಿಸಿದರು. ದಿನೇಶ್ ಕಾರ್ತಿಕ್‌ 12 ಎಸೆತಗಳಲ್ಲಿ 18 ರನ್‌ ಗಳಿಸಿದರೆ ದೋನಿ 10 ಎಸೆತಗಳಲ್ಲಿ 16 ರನ್ ಸಿಡಿಸಿದರು. ತಿಸಾರ ಪೆರೇರ ಹಾಕಿದ 20ನೇ ಓವರ್‌ನ ಎರಡನೇ ಎಸೆತವನ್ನು ಫೈನ್‌ ಲೆಗ್‌ಗೆ ಫ್ಲಿಕ್‌ ಮಾಡಿ ಬೌಂಡರಿಗೆ ಅಟ್ಟಿದ ದೋನಿ ಗೆಲುವಿನ ರನ್‌ ಗಳಿಸಿದರು.

ಭಾರತ ತಂಡ ಈ ವರ್ಷ ಎಲ್ಲ ಮಾದರಿಗಳಲ್ಲೂ ಒಟ್ಟು 37 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿತು. ಈ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಸಾಲಿನಲ್ಲಿ ಎರಡನೇ ಸ್ಥಾನ ಗಳಿಸಿತು. ಆಸ್ಟ್ರೇಲಿಯಾ ತಂಡ 2003ರಲ್ಲಿ 38 ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿದೆ.

Leave A Comment

ಟಾಪ್ ಸುದ್ಧಿಗಳು

ಬೆಂಗಳೂರು:

ಟಾಪ್ ಸುದ್ಧಿಗಳು

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
08:55:43 AM / Wed, Feb 21st, 2018
ಬೆಂಗಳೂರು:

ಬೆಂಗಳೂರು:

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆ

By Editor
08:55:43 AM / Wed, Feb 21st, 2018
ದಾವೋ (ಫಿಲಿಪ್ಪೀನ್ಸ್‌):

ದಾವೋ (ಫಿಲಿಪ್ಪೀನ್ಸ್‌):

ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ

By Editor
08:55:43 AM / Wed, Feb 21st, 2018
ಬೆಂಗಳೂರು:

ಬೆಂಗಳೂರು:

ವಿಮಾನ ಪ್ರಯಾಣ ದರ ಇಳಿಕೆ

By Editor
08:55:43 AM / Wed, Feb 21st, 2018
ನವದೆಹಲಿ:

ನವದೆಹಲಿ:

ಕೇಂದ್ರ ಬಜೆಟ್ 2018:

By Editor
08:55:43 AM / Wed, Feb 21st, 2018
ಮುಂಬೈ:

ನವದೆಹಲಿ:

ಯಶಸ್ವಿ ವರ್ಷಕ್ಕೆ ಜಯದ ವಿದಾಯ

By Editor
08:55:43 AM / Wed, Feb 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017