ದೇಶದಲ್ಲಿನ ಅಭಿವೃದ್ಧಿ ಕೆಲಸ ಕಾಂಗ್ರೆಸ್ ಪಕ್ಷದ್ದು

ನರೇಗಲ್ಲ : ದೇಶದಲ್ಲಿ 60ನ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿಲ್ಲ ಎಂಬ ಸುಳ್ಳನ್ನು ಬಿಜೆಪಿಯವರು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಾಟಿದ್ದಾರೆ ಎಂದು ಮಾಜಿ ಶಾಸಕ ಎಸ್.ಆರ್. ನಂಜಯ್ಯನಮಠ ಹೇಳಿದರು.

ಅವರು ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಮಂಗಳವಾರ ಹಾವೇರಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಪರ ರೋಡ್ ಶೋ ಮೂಲಕ ಮತಯಾಚನೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ದೇಶದ ಪ್ರತಿಷ್ಟೆ ಹೆಚ್ಚಿಸಿರುವ ಇಸ್ರೋ, ಐಐಟಿ, ಡ್ಯಾಂಗಳು, ವಿಮಾನ ಮತ್ತು ರೈಲು ನಿಲ್ದಾಣ, ಗ್ರಾಮೀಣ ರಸ್ತೆ, ಶಾಲೆ, ಕಾಲೇಜುಗಳು, ಮಹಾನಗರಗಳ ಅಭಿವೃದ್ಧಿ ಸೇರಿದಂತೆ ಎಲ್ಲವೂ ಕಾಂಗ್ರೆಸ್ ಸರ್ಕಾರದಲ್ಲಿ ಆಗಿವೆ. ಇವೆಲ್ಲಾ ಮೋದಿ ಮಾಡಿರುವುದಲ್ಲ. ಅಲ್ಲದೇ ಕೇಂದ್ರದಲ್ಲಿ ಮನಮಹೋನ್‍ಸಿಂಗ ದಶಕ ಕಲಾ, ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಜನರು ಮೆಚ್ಚುವಂತ ಆಡಳಿತ ನೀಡಿದ್ದಾರೆ. ಆದ್ದರಿಂದ ಬಿಜೆಪಿಯವರಂತೆ ಸುಳ್ಳು ಹೇಳುವ ಪ್ರಮೇಯವಿಲ್ಲ. ಬದಲಾಗಿ ಜನರ ಬಳಿ ನಮ್ಮ ಪಕ್ಷ ದವರು ಸತ್ಯವನ್ನೇ ಹೇಳಿ ಮತ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದೇಶ ಮತ್ತು ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ರೈತಪರ, ಜನಪರ, ಬಡವರ ಪರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಆಡಳಿತ ನಡೆಸಿದ ಸಿದ್ಧರಾಮಯ್ಯ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದರು. ಆತ್ಮಹತ್ಯ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ, ಪಿಂಚಣಿ ನಿಡಿದರು. ಯಾರೂ ಉಪವಾಸ ಇಬಾರದು ಎಂದು ಎಲ್ಲ ಜಾತಿಯ ಬಡವರಿಗೆ ಪಡಿತರ ಅನ್ನಭಾಗ್ಯ ನೀಡಿದ್ದಾರೆ. ಯುಪಿಎ ಅವಧಿಯಲ್ಲಿ ಜಾರಿ ಮಾಡಿದ ಉದ್ಯೋಗ ಖಾತ್ರಿ ಹಳ್ಳಿಗಳ ಅಭಿವೃದ್ಧಿಗೆ ಮಹತ್ವ ಕೊಡುಗೆ ನೀಡಿದೆ. ಯುವಜನರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಹದಿನೆಂಟು ವರ್ಷಕ್ಕೆ ಮತದಾನದ ಹಕ್ಕು ನೀಡದ್ದು ರಾಜೀವ್ ಗಾಂಧಿ. ಮೋದಿ ಶೋಕಿದಾರ್… ಈ ಚೌಕಿದಾರ್ ಬಡವರು, ದೇಶದ ಚೌಕಿದಾರ್ ಅಲ್ಲ, ಶೋಕಿದಾರ್. ಮುಖ ಬಾಡಿರಲ್ಲ. ಬಟ್ಟೆ ಸುಕ್ಕಾಗಿರೋದಿಲ್ಲ. ಕೋಟ್ಯಾಂತರ ರೂಪಾಯಿ ಧಿರಿಸು ಐಶರಾಮಿ ಪ್ರಧಾನ ಮಂತ್ರಿ. ಸದಾ ವಿದೇಶ ಸುತ್ತುವ ಪ್ರಧಾನಿ ಕೇವಲ ಹತ್ತೊಂಬತ್ತು ಬಾರಿ ಮಾತ್ರ ಸಂಸತ್ತಿನಲ್ಲಿದ್ದರು. ಶಾಸನ ರಚಿಸುವ ಸಂಸ್ಥೆಯಲ್ಲಿ ಗೈರಾಗಿದ್ದರು. ಅಧಿವೇಶನ ನಡೆಯುವಾಗ ಪ್ರಧಾನಿಯಾದವರು ವಿದೇಶಿ ಪ್ರವಾಸ ಹೋಗುತ್ತಾರಾ ಎಂದು ಪ್ರಶ್ನಿಸಿದರು.

ಹಾವೇರಿ ಲೋಕಸಭೆ ಅಭ್ಯರ್ಥಿ ಡಿ.ಆರ್. ಪಾಟೀಲ ಮಾತನಾಡಿ, ಮೋದಿ ಬಡವರು, ಶ್ರಮಜೀವಿಗಳು, ರೈತರು, ಕೂಲಿಕಾರ್ಮಿಕರ ಪರವಾಗಿ ಮಾತನಾಡಲಿಲ್ಲ. ದೊಡ್ಡ ದೊಡ್ಡ ಶ್ರೀಮಂತರ ಪರವಾಗಿ ಯೋಚಿಸಿದರು. ಅವರಿಗೆ ತಮ್ಮ ಸಚಿವ ಸಂಪುಟದ ಮಂತ್ರಿಗಳಾರು ಎಂಬುದೇ ಗೊತ್ತಿಲ್ಲ. ಸರ್ವಾಧಿಕಾರಿ ಮೋದಿ ಧಿಕ್ಕರಿಸಬೇಕು. ದೇಶಕ್ಕೆ ಗೌರವ ತರುವ ಪ್ರಧಾನಿ ಆಯ್ಕೆಗೆ ಬೆಂಬಲಿಸಬೇಕು. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಉದ್ಯೋಗ ಕೊಡಲಿಲ್ಲ. ಬ್ಲಾಕ್ ಮನಿ ತರಲಿಲ್ಲ. ತಾನು ಚೌಕಿದಾರ್ ಎಂದು ಹೇಳುವ ನರೇಂದ್ರ ಮೋದಿ ಆಡಳಿತದಲ್ಲಿ ರಫೇಲ್ ಹಗಣರದ ದಾಖಲೆ ಕಳುವಾಯಿತು. ದೊಡ್ಡ ಶ್ರೀಮಂತರು ದೇಶ ಬಿಟ್ಟು ಹೋಗುವಾಗ ಏಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದರು. ಹಾವೇರಿ ಲೋಕಸಭೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತದಲ್ಲಿರುವ ಉದಾಸಿಯವರು ಸಿಂಗಾಪುರದಲ್ಲಿ ವಾಸವಾಗಿರುತ್ತಾರೆ. ಇಲ್ಲಿನ ರೈತರ, ಬಡವರ ಬಗ್ಗೆ ವಿಚಾರ ಕೂಡ ಮಾಡದಂತಹ ವ್ಯಕ್ತಿ ಹಲವು ಗ್ರಾಮಗಳಲ್ಲಿ ಉದಾಸಿ ಯಾರೂ ಎಂದು ಕೂಡ ಗೊತ್ತಿಲ್ಲ. ಬಡವರ, ರೈತರ, ದೇಶ ಸೇವೆ ಮಾಡುವ ಅವಶ್ಯಕ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ನಂತರ ಜಕ್ಕಲಿ, ನಿಡಗುಂದಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ, ಜಿ.ಪಂ ಮಾಜಿ ಉಪಾಧ್ಯಕ್ಷೆ ರೂಪಾ ಅಂಗಡಿ, ಐ.ಎಸ್. ಪಾಟೀಲ, ಪ್ರಭು ಮೇಟಿ, ವೀರಣ್ಣ ಹರದಾರಿ, ಮಂಜುನಾಥ ಅಂಗಡಿ, ಶರಣಪ್ಪ ಬೆಟಗೇರಿ, ಪಿ. ಅಳಗವಾಡಿ, ಡಾ| ಆರ್.ಬಿ. ಬಸವಡ್ಡೇರ, ಬಸವರಾಜ ತಳವಾರ, ದೇವಕ್ಕ ಮಾರೆಪ್ಪನವರ, ಮಮತಾಜ ಹುಡೇದ, ಸರೋಜಾ ಕಲ್ಲಶ್ಯಾಣಿ, ಭೀಮಶಿ ಮಲ್ಲಾಪೂರ, ಮಹಾದೇವಪ್ಪ ಕಂಬಳಿ, ಹನಂಮತಪ್ಪ ದ್ವಾಸಲ್, ಮಲ್ಲಿಕಾಜಪ್ಪ ಕಲ್ಲಶ್ಯಾಣಿ, ರೈಮಾನಸಾಬ ಖಾದ್ರಿ, ಗುರಣ್ಣ ಅವರಡ್ಡಿ, ಚನ್ನಪ್ಪ ಬಸವರಡ್ಡೇರ, ಅಂದಾನಗೌಡ ಸಣ್ಣಮಲ್ಲಗೌಡ್ರ, ಅಂದಪ್ಪ ವೀರಾಪೂರ, ಸೇರಿದಂತೆ ಕಾಂಗ್ರೆಸ್ ಕಾರ್ಯತರ್ಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Pin It on Pinterest