ಬಿಜೆಪಿ ಸರ್ಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ಉಂಟಾಗಿದೆ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ

ಸಿಂಧನೂರು : ಕಳೇದು ಐದು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ಉಂಟಾಗಿದೆ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊಪ್ಪಳ ಲೋಕಸಭಾ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹೀಟ್ನಾಳ ಪರ ನಡೆದು ಚುನಾವಣೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರದ ಬಿಜೆಪಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಚಿವ ಸಂಪುಟ ಸಚಿವನೇ ಸಂವಿಧಾನ ಬದಲಾಯಿಸುತ್ತೇನೆ ಎಂದು ಹೇಳಿರುವುದು, ಪ್ರಪಂಚದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಬೃಹತ್ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಂತಹ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ದಕ್ಕೆ ಬಂದೊದಗಬಹುದು, ಪ್ರಭುದ್ಧರಾಗಿರುವ ನೀವು ಮತದಾರರ ಪ್ರಭುಗಳು ಯೋಚಿಸಿ ಮತ ನೀಡಿ, ಮೈತ್ರಿ ಸರ್ಕಾರ ಸಾಧನೆಗಳನ್ನು ನೋಡಿ ಕೊಪ್ಪಳ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳರವರಿಗೆ ಮತ ನೀಡಿ ಎಂದು ಮತಯಾಚಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಮಾತನಾಡಿ ಕಳೇದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ 70 ಸಾವಿರ ಮತಗಳನ್ನು ಪಡೆದಿದ್ದರು, ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ 72ಸಾವಿರ ಮತಗಳನ್ನು ಪಡೆದಿದ್ದು, ಒಟ್ಟಾರೆಯಾಗಿ ಒಂದು ಲಕ್ಷ ನಾಲ್ವತ್ತು ಎರಡು ಸಾವಿರ ಮತಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು, ಮೈತ್ರಿ ಸರ್ಕಾರದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳರಿಗು ಒಂದು ಲಕ್ಷ ನಲ್ವತ್ತು ಸಾವಿರ ಮತಗಳ ಬಿದ್ದಾಗ ಮಾತ್ರ ಎರಡು ಪಕ್ಷಗಳ ಮುಖಂಡರಿಗೆ ಬೆಲೆ ಸಿಗುವುದು ಎಂದು ಹೇಳಿದರು. ಜೆಡಿಎಸ್ ರಾಜ್ಯ ಜಿ. ಸತ್ಯನಾರಾಯಣ, ಜೆಡಿಎಸ್ ತಾಲೂಕಾಧ್ಯಕ್ಷ ಲಿಂಗಪ್ಪ, ದೇವೆಂದ್ರಗೌಡ, ಬಿ. ಹರ್ಷ, ನೀಲಕಂಠರಾವ್ ಜಾಗಿರದಾರ್, ನಗರ ಸಭೆ ಸಸ್ಯ ಚಂದ್ರುಮೈಲಾರ್, ನದಿಮುಲ್ಲಾ, ನಿರುಪಾದೆಪ್ಪ, ಬಸವರಾಜ ಸೇರಿದಂತೆ ಅನೇಕರು ಇದ್ದರು.
ಜಿಪಂ ಅನುಪಸ್ಥಿತಿ
ರೌಡಕುಂದಾ ಜಿಪಂ ಕ್ಷೇತ್ರದ ಸ್ವಗ್ರಾಮ ರೌಡಕುಂದಾ ಗ್ರಾಮದದಲ್ಲಿ ಕೊಪ್ಪಳ ಲೋಕಸಭಾ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಪರ ಪ್ರಚಾರ ಬಹಿರಂಗ ಸಭೆಯಲ್ಲಿ ಜಿಪಂ ಸದಸ್ಯ ಬಸವರಾಜ ಹೀರೆಗೌಡ್ರ ಹಾಜರಾಗದೆ ಗೈರು ಹಾಜರಾಗದಿರುವುದು ಸಭೆಯಲ್ಲಿ ಎದ್ದುಕಂಡುಬಂದಿತು.

Leave a Reply

Your email address will not be published. Required fields are marked *

Pin It on Pinterest