ರೈತರು ಮತ್ತು ದುಡಿಯುವ ವರ್ಗದ ಜನರ ಜಲ್ವಂತ ಸಮಸ್ಯೆಗಳನ್ನು ಗಂಬೀರವಾಗಿ ಪರಿಗಣಿಸುತ್ತಿಲ್ಲ ಎಂದು ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಡಿಹೆಚ್ ಪೂಜಾರ

ಸಿಂಧನೂರು : ರಾಯಚೂರು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಸ್ಪರ್ದಿಸಿರುವ ಅಭ್ಯರ್ಥಿಗಳಿಗೆ ರೈತರು ಮತ್ತು ದುಡಿಯುವ ವರ್ಗದ ಜನರ ಜಲ್ವಂತ ಸಮಸ್ಯೆಗಳನ್ನು ಗಂಬೀರವಾಗಿ ಪರಿಗಣಿಸುತ್ತಿಲ್ಲ ಎಂದು ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಡಿಹೆಚ್ ಪೂಜಾರ ಆರೋಪಿಸಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನರೇಗಾ ಯೋಜನೆ ಜಾರಿಗೆ ಲೋಕಸಭಾ ಚುನಾವಣೆ ಅಡ್ಡಿಯಾಗುವುದಿಲ್ಲ ಎಂದು ಚುನಾವಣೆ ಆಯೋಗ ಹೇಳಿದ್ಧರು, ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ನಿರಂತರಾಗಿರುವುದರಿಂದ ಯೋಜನೆ ಜಾರಿಗದಿರುವುದು ಗ್ರಾಮೀಣ ಜನತೆ ಕೆಲಸಕ್ಕಾಗಿ ಗುಳೆ ಹೋಗಿದ್ದು, ಅಲ್ಲಿ ಕೂಡ ಕೆಲಸ ಸಿಗದೆ ಸಂಕಷ್ಟ ಏದುರಿಸುತ್ತಿದ್ದು, ಇಂತಹ ಸಂಕಷ್ಟದ ಪರಿಸ್ಥಿತಿ ಕುರಿತು ಅಭ್ಯರ್ಥಿಗಳು ಗಮನಹರಿಸುತ್ತಿಲ್ಲ ಎಂದು ಟೀಕಿಸಿದರು.
ತುಂಗಭದ್ರ ಜಲಾಯಶದ ಕುರಿತು ಯಾರು ಗಂಬೀರವಾಗಿ ಯೋಚಿಸುತ್ತಿಲ್ಲ, ನವಲಿ ಗ್ರಾಮದ ಹತ್ತಿರ ಉದ್ದೇಶಿತ ಸಮಾನಂತರ ಜಲಾಶಯದ ಕುರಿತು ಯಾರು ಮಾತನಾಡುತ್ತಿಲ್ಲ, 8ಸಾವಿರ ಕೋಟಿ ರೂ ಯೋಜನೆಯ ಸಮಾನಂತರ ಜಲಾಯಶಕ್ಕೆ ಸರ್ಕಾರ ನಯಾ ಪೈಸೆ ಮಂಜೂರು ಮಾಡಿಲ್ಲ ಎಂದು ಆರೋಪಿಸಿದರು.
ತಾಲೂಕಿನ ತುಂಗಭದ್ರ ಎಡದಂಡೆ ನಾಲೆಯ ಮೇಲ್ಭಾಗದ ಗ್ರಾಮಗಳಾದ ಕಲ್ಮಂಗಿ, ಬೇರ್ಗಿ, ಗುಂಡಾ, ಬೋಗಾಪುರ, 20ಕ್ಕು ಹೆಚ್ಚು ಗ್ರಾಮಗಳು ಕಳೇದ ಐದು ದಶಕಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗಿವೆ, ಮೈತ್ರಿ ಸರ್ಕಾರ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಈ ಗ್ರಾಮಗಳಿಗೆ ಕೃಷ್ಣ ಬಿ. ಸ್ಕೀಂ ನೀರಾವರಿ ಕಲ್ಪಿಸಲು ಮುಂದಾಬೇಕು ಎಂದು ಒತ್ತಾಯಿಸಿದರು.
ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಎರಡು ಪಕ್ಷಗಳು ಸ್ವಾಮಿನಾಥನ್ ವರದಿ ಜಾರಿಗೊಳಿಸಲು ಮುಂದಾಗುತ್ತಿಲ್ಲ, ಈ ವರದಿ ಜಾರಿಗೊಂಡರೆ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯುತ್ತದೆ. ಈ ಕುರಿತು ಎರಡು ಪಕ್ಷದ ಅಭ್ಯರ್ಥಿಗಳು ಗಂಬೀರವಾಗಿ ಯೋಚಿಸಿ ವರದಿ ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು. ಸಿಂಧನೂರು ತಾಲೂಕಾಧ್ಯಕ್ಷ ರಮೇಶ ಪಾಟೀಲ್, ಪರಶುರಾಮ, ಬಸವರಾಜ ಯರದಿಹಾಳ, ಬಸವರಾಜ ಬೇಳಗುರ್ಕಿ, ಸಂತೋಷ ದಿನ್ನಿ ಸೇರಿದಂತೆ ಇನ್ನೀತರರು ಇದ್ದರು.

Leave a Reply

Your email address will not be published. Required fields are marked *

Pin It on Pinterest