ಮತದಾನದ ಜಾಗೃತಿ ಸ್ವೀಪ್ ಸಮತಿ ಕೈಗೊಂಡ ಪ್ರಚಾರದ ಅಬ್ಬರವೇ ಹೆಚ್ಚಾಗಿದೆ.

ಚುನಾವಣೆಗಳು ಬಂತೆಂದರೆ ವಿವಿಧ ಪಕ್ಷಗಳ ಅಭ್ಯರ್ಥಿಗ್ಳು ಗೆಲುವಿಗಾಗಿ ಅನೇಕ ಕಸರತ್ತುಗಳನ್ನು ಮಾಡುವ ಮೂಲಕ ಪ್ರಚಾರ ನೆಸಿದರೆ. ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆಬೀಳಲಿದ್ದು ವಿವಿಧ ಪಕ್ಷಗಳು ಅಭ್ಯರ್ಥಿಗಳ ಗೆಲುವಿಗಾಗಿ ಎನೆಲ್ಲಾ ಕಸರತ್ತು ನೆಸುತ್ತಿವೆ.
ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗಿಂದ ಮತದಾನ ಜಾಗೃತಿಗೆ ಚುನಾವಣೆ ಆಯೋಗ ತಾಲೂಕು ಸ್ವೀಪ್ ಸಮಿತಿ ಮೂಲಕ ಶೇ 100 ರಷ್ಟು ಮತದಾನ ಗುರು ತಲುಪುವ ನಿಟ್ಟಿನಲ್ಲಿ ಮತದಾನದ ಜಾಗೃತಿ ಸ್ವೀಪ್ ಸಮತಿ ಕೈಗೊಂಡ ಪ್ರಚಾರದ ಅಬ್ಬರವೇ ಹೆಚ್ಚಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಶೇ 100 ರಷ್ಟು ಮತದಾನ ಮಾಡಿಸುವ ಗುರಿಯೊಂದಿಗೆ ಜಾಗೃತಿ ಮೂಡಿಸಲು ತಾಲೂಕು ಆಡಳೀತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜಕೀಯ ಪಕ್ಷಗಳ ಪ್ರಚಾರ ವಾಹನಗಳು ಆಗೋಮ್ಮೆ ಈಗೊಮ್ಮೆ ಬಂದು ಹೋದರೆ ಸ್ವೀಪ್ ಸಮತಿಯ ಪ್ರಚಾರದ ಅಲೆಯೇ ಹೆಚ್ಚಾಗಿದೆ. ಸ್ವೀಪ್ ಸಮಿತಿ ನೇತೃತ್ವದಲ್ಲಿ ನಗರಭೆ ಕಸ ಸಂಗ್ರಹಿಸುವ ವಾಹನಗಳು ಕೂಡ ಚುನಾವಣಾ ಜಾಗೃತಿ ಹಾಡುಗಳ ಮೂಲಕ ಗಲ್ಲಿ ಗಲ್ಲಿ ರಸ್ತೆಗಳಲ್ಲಿ ಸುತ್ತಿತ್ತಿವೆ.
ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ,ಆರೋಗ್ಯ ಇಲಾಖೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯರ್ತೆಯರು, ನಗರಸಭೆ, ತಾಪಂ, ಗ್ರಾಪಂ, ಶಿಕ್ಷಣ ಇಲಾಖೆ ಸಬ್ಬಂದಿಗಳು ಏ. 18 ರ ಗುರುವಾರನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಜನರಲ್ಲಿ ಅರಿವು ಮೂಡಿಸಲು ಸೋಮವಾರ ರಾತ್ರಿ ನಗರದ ಪ್ರಮುಖ ರಸ್ತೆ ಹಾಗೂ ನೆಹರು ವೃತ್ತದಲ್ಲಿ ಕ್ಯಾಂಡಲ್ ಇಡಿದು ಜಾಗೃತಿ ಮೂಡಿಸಿದರೆ ಮಂಗಳವಾರ ಬೆಳಗ್ಗೆಯೂ ಬಿಳಿ ಬಣ್ಣದ ಟೀಷರ್ಟ್ ಹಾಗೂ ಟೋಪಿ ದರಸಿ ನಗರದ ಪ್ರಮುಖ ರಸ್ತೆಗಳಲ್ಲಿ ಆಟೋದಲ್ಲಿ ದ್ವನಿವರ್ಧಗಳ ಮೂಲಕ ಪ್ರಚಾರ ಹಾಗೂ ನೆಹರು ವೃತ್ತದಲ್ಲಿ ಮತದಾನ ಜಾಗೃತಿಗಾಗಿ ಆಕಾಶದಲ್ಲಿ ಬೃಹತ್ ಬಲೂನ್ ಹಾರಿಬಿಡುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಸಹಾಯಚುನಾವಣಾಧಿಕಾರಿ ರಾಜಶೇಖರ್, ತಹಸೀಲ್ದಾರ್ ತುಷಾರ್ ಬಿ ಹೊಸೂರ್, ತಾಲೂಕು ಸ್ವೀಪ್ ಸಮಿತಿಅಧ್ಯಕ್ಷ ತಾಪಂ ಇಒ ಚಂದ್ರಶೇಖರ್, ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ಬಿಇಒ ವೆಂಕಟೇಶಪ್ಪ, ಸಿಡಿಪಿಒ ಗಿರಿಜಾಂಭ, ಸಮಾಜಕಲ್ಯಾಣಾಧಿಕಾರಿ ಮಂಜಪ್ಪ, ಕೃಷಿ ಉಪನಿರ್ಧೇಶಕಿ ಡಾ, ಸುಜಾತ, ಮಾಲತಿ, ವಿರುಪಾಕ್ಷಪ್ಪ, ಡಾ.ಮಾರುತಿ, ತಾಪಂ ವ್ಯವಸ್ಥಾಪಕ ಎನ್.ಆರ್.ತಿಪ್ಪೇಸ್ವಾಮಿ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Pin It on Pinterest