ಪಕ್ಷದ ಪರ ಪ್ರಚಾರ ಮಾಡಲು ಎಷ್ಟು ವಯಸ್ಸಾಗಿರ ಬೇಕು ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ

ಮತದಾನ ಮಾಡಲು 18 ವರ್ಷ ತುಂಬಿರ ಬೇಕು ಆದರೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಬಹಿರಂಗ ಸಭೆಗಳಲ್ಲಿ ಭಾಗವಹಿಸಲು ಹಾಗೂ ಪಕ್ಷದ ಪರ ಪ್ರಚಾರ ಮಾಡಲು ಎಷ್ಟು ವಯಸ್ಸಾಗಿರ ಬೇಕು ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ ಮಕ್ಕಳಿಗೆ ಮತದಾನದ ಕ್ಕಿಲ್ಲದಿದ್ದರೂ ಅವರನ್ನು ಪ್ರಚಾರ ಸಭೆಗಳಿಗೆ ಬಳಸಿಕೊಳ್ಳಾಗುತ್ತಿದೆ.
ಪ್ರಾಥರ್ಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಇರುವುರಿಂದ ತಾಲೂಕಿನ ವಿವಿಧ ಗ್ರಾಮೀಣ ಭಾಗದಿಂದ ಇಂದು ನಡೆದ ಬಿಜೆಪಿ ಬಹಿರಂಗ ಸಭೆಗೆ ವಿದ್ಯಾರ್ಥಿಗಳು ಪಕ್ಷದ ಬಾವುಟ ಇಡಿದ ಕಾರ್ಯಕದಲ್ಲಿ ಬಾಗವಹಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು, ಮಕ್ಕಳನ್ನು ರಾಜಕೀಯ ಪ್ರಚಾರಗಳಿಗೆ ಬಳಸಬಾರದು ಎನ್ನುವ ಅರಿವು ಬಹುತೇಕ ಪೋಷಕರಿಗೆ ಇದ್ದತ್ತಿಲ್ಲ ಕೆಲವು ಪ್ರಚಾರ ಸಭೆಗಳಿಗೆ ಪೋಷಕರು ತಮ್ಮೊಂದಿಗೆ ಮಕ್ಕಳನ್ನೂ ಹಣದಾಸೆಗೆ ಕರೆದೊಯ್ಯುತ್ತಿದ್ದಾರೆ. ಇನ್ನೂ ಕೆಲವು ಕಡೆ ಮಕ್ಕಳು ತಾವಾಗಿಯೇ ಬಂದು ಪಕ್ಷಗಳ ಬಾವುಟ ಬಾವುಟ ಹಿಡಿದು ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತವೆ.
ಕಾರ್ಯಕ್ರಮಕ್ಕೆ ಬಂದ ಕಾರ್ಯಕರ್ತರಿಗೆ ಹಣವೂ ಸಹ ಬಹಿರಂಗವಾಗಿ ಹಂಚಿಕೆ ಮಾಡುತ್ತಿರುವ ದೃಶ್ಯ ಕಾಣುತ್ತಿತ್ತು. ಈಗಾಲಾದರು ಸಂಬಧಪಟ್ಟಿ ಅಧಿಕಾರಿಗಳು ರಾಜಕೀಯ ಪ್ರಚಾರದ ಕಾರ್ಯಕ್ರಮಗಳಿಗೆ ಮಕ್ಕಳ ಕರೆತರುವುದಕ್ಕೆ ಬ್ರೇಕ್ ಹಾಕುವರೇ ಕಾದು ನೋಡ ಬೇಕಿದೆ.

Leave a Reply

Your email address will not be published. Required fields are marked *

Pin It on Pinterest