ಗ್ರಾಮಗಳಲ್ಲಿ ಈಶ್ವರ ಖಂಡ್ರೆ ಪುತ್ರ ಪ್ರಚಾರ

ಬೀದರ ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಪರವಾಗಿ ಅವರ ಪುತ್ರ ಗುರುಪ್ರಸಾದ ಖಂಡ್ರೆಯವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಡಿದ್ದಾರೆ.
ಬೆಳಗ್ಗೆಯಿಂದಲ್ಲೆ ಸುಡುಬಿಸಿಲೆನ್ನದೆ ಯುವಪಡೆಯನ್ನು ಕಟ್ಟಿಕೊಂಡು ತಾಲೂಕಿನ ಪ್ರಮುಖ ಗ್ರಾಮಗಳಾದ ನಿಟ್ಟೂರ(ಬಿ) ಕೆರೂರ (ಎಚ್) ಅಹಮದಾಬಾದ ಅಂಬೆಸಾಂಗವಿ ತೆಗಂಪುರ ಹಲಬರ್ಗಾ ಕೋಣಮೇಳಕುಂದಾ ಸಿದ್ದೇಶ್ವರ ಸೇರಿದಂತೆ ವಿವಿಧ ಗ್ರಾಮಗಳ ಮನೆ -ಮನೆಗೆ ತೆರಳಿ ತಮ್ಮ್ ತಂದೆ ಈಶ್ವರ ಖಂಡ್ರೆಯವರಿಗೆ ಮತ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಮತದಾರರಿಗೆ ಮನವಿ ಮಾಡಿದರು. ಗಿರಿ ಬಾಬುರಾವ್ ಬಿರಾದಾರ ,ಶೇಖರ ವಂಕೆ ,ಜಗದೀಶ ಮಾಲಗಾರ ಸಂಗಮೇಶ, ಕಾರಾಮುಂಗೆ, ಚಂದಾ ಶೆಟಕಾರ, ಸಂಗಮೇಶ ವಾಲೆ ,ಕಪಿಲ ಕಲ್ಯಾಣಿ, ಟಿಂಕು ರಾಜಭವನ ಇನಿತರರು ಇದ್ದರು.

Leave a Reply

Your email address will not be published. Required fields are marked *

Pin It on Pinterest