ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ನೀಚ ರಾಜಕಾರಣ ಮಾಡುತ್ತಿದೆ

ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ನೀಚ ರಾಜಕಾರಣ ಮಾಡುತ್ತಿದೆ. ಕೀಳು ಮಟ್ಟದ ರಾಜಕಾರಣಕ್ಕೆ ಇಳಿಸಿದ್ದಾರೆ ಕಾಂಗ್ರೆಸ್ ಧರ್ಮ ಒಡೆಯುವ ನೀಚ ಕೆಲಸಕ್ಕೆ ಕೈ ಹಾಕಿದೆ ಲಿಂಗಾಯಿತ. ವೀರಶೈವ ಅಂತಾ ವಿಷ ಬೀಜ ಬಿತ್ತಿದ್ದಾರೆ ಪ್ರತ್ಯೇಕ ಧರ್ಮ ಕುರಿತು ಎಂ.ಬಿ. ಪಾಟಿಲ್ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡೀಯಪ್ಪ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ಬಿಸಿ ನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿರುವ ಬಯಲು ರಂಗಮಂಧಿರದಲ್ಲಿ ಚಿತ್ರದುರ್ಗ ಲೋಕಷಭೆ ಅಭ್ಯರ್ಥಿ ಎ.ನಾರಾಯಸ್ವಾಮಿ ಪರ ಮತಯಾಚನೆ ಬೃಹತ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೋರ್ಟ್ ರೆಫೆಲ್ ಯುದ್ದ ವಿಮಾನ ಹಗರಣದಲ್ಲಿ ಮೋದಿ ಚೋರ್ ಹೈ ಎಂದು ತಿರುಚಿದ್ದಕ್ಕೆ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿ ಛೀಮಾರಿ ಹಾಕಿದೆ ರಾಹುಲ್ ಇನ್ನು ಎಳಪು ಅನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ರಾಜಕೀಯ ಅನುಭವವಿಲ್ಲದ ಇನ್ನು ಯುವಕ ಎಂದು ಲೇವಡಿ ಮಾಡಿದರು.
37 ಸೀಟನ್ನು ಪಡೆದು ಮುಖ್ಯ ಮಂತ್ರಿ ಅಧಿಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಬಂದ 24 ಗಂಟೆ ಒಳಗೆ ರೈತರ ಸಾಲ ಮನ್ನ ಮಾಡುತ್ತೇನೆ ಎಂದು ಹೇಳಿದ ಭರವಸೆಗಳು 9 ತಿಂಗಳು ಕಳೆದರೂ ರೈತರ ಸಾಲಮನ್ನ ಮಾಡದೆ ಸುಳ್ಳ ಹೇಳಿ ಕಮೀಷನ್ ಏಜೆಂಟ್ ನಂತೆ ವರ್ತನೆ ಮಾಡುತ್ತಾ ವಂಚನೆ,ನಂಬಿಕೆ ದ್ರೋಹ ಮಾಡಿದ್ದಾರೆ.
ನಾನು ನನ್ನ ಮಗನ ಪರ ಪ್ರಚಾರ ಮಾಡಲು ಇದುವೆರೆಗೂ ಹೋಗಲು ಆಗಿಲ್ಲ ರಾಜ್ಯದ ಮುಖ್ಯ ಮಂತ್ರಿಗಳು ಮಂಡದ ಅಂಬರೀಶ್ ವಿರುದ್ದ ಮಾತನಾಡಿ ಸುಮಲತ ಒಬ್ಬ ಹೆಣ್ಣು ಮಗಳಿಗೆ ಅಪಮಾನ ಮಾಡುತ್ತಿದ್ದಾರೆ ಸುಮಲತಾ ನೂರಕ್ಕೆ ನೂರು ಗೆಲ್ಲುತ್ತಾರೆ ಮುಖ್ಯ ಮಂತ್ರಿ ಕುಮಾರಸ್ವಾಮಿಯ ರಾಜಕೀಯ ದೊಂಬರಾಟಕ್ಕೆ ಮಂಡ್ಯದಲ್ಲಿ ಅಂತ್ಯವಾಗುತ್ತದೆ. ನನ್ನ ಅವಧಿಯಲ್ಲಿ ಅಪ್ಪರ್ ಭದ್ರಯೋಜನೆ ಜಾರಿಗೊಳಿಸಿದ್ದೆ ಆದರೆ ಮುಖ್ಯ ಮಂತ್ರಿಗಳು ನೀರಾವರಿ ಯೋಜನೆ ಜಾರಿಗೊಳಿಸದೆ ನಿರ್ಲಕ್ಷ ತೋರಿದ್ದಾರೆ ಇಂತಹ ನೀಚ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನ ಮನಮೋಹನಸಿಂಗ್ ಹತ್ತು ವರ್ಷಗಳ ಕಾಲ ಪ್ರಧಾನಿಯಾದರೂ ಯಾರು ಮನಮೋಹನಸಿಂಗ್ ಎಂದು ಕೂಗುವುದಿಲ್ಲ ಆದರೆ ಐದು ವರ್ಷಗಳಲ್ಲಿ ದೇಶದ ಪ್ರಧಾನಿಯಾದ ನರೇಂದ್ರಮೋಧಿಯವರನ್ನು ಮೋದಿ ಮೋದಿ ಎಂದು ಚಿಕ್ಕವರಿಂದ, ಯುವಕರು ಹಾಗೂ ವೃದ್ದರೂ ಮೋದಿ, ಮೋದಿ ಎಂದು ಕೂಗುತ್ತಿದ್ದಾರೆ ಇದಕ್ಕೆ ಮೋದಿಯವರ ಜನಪರ ಯೋಜನೆಗಳೇ ಕಾರಣ ಎಂದರು.
ಪ್ರಾಧಾನಿ ನರೇಂದ್ರಮೋದಿಯವರು ದೇಶದಲ್ಲಿ ಗುಡಿಸಲು ಮುಕ್ತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬರಿಗೂ ಸೂರು,ಶುದ್ದ ಕುಡಿಯುವ ನೀರಿನ ಸಂಪರ್ಕ, ಶಾಶ್ವತ ಕುಡಿಯುವ ನೀರಿಯ ಯೋಜನೆಗೆ ನದಿಗಳ ಜೋಡಣೆ, ರೈತರ ಆಧಾಯ ಹೆಚ್ಚಿಸಲು ಕೃಷಿ ಚಟುವಟಿಕೆಗಳಿಗೆ ಬಡ್ಡಿರಹಿತ ಸಾಲ, ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ, ಯುವಕರಿಗೆ ಉದ್ಯೋಗ ಭರವಸೆ, 60 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಮಹಿಳೆಯರಿಗೆ ಯಾವುದೇ ಭದ್ರತೆಯಿಲ್ಲದೆ 50 ಸಾವಿರ ರೂ ಸಾಲ ಸೌಲಭ್ಯ,ರೈತರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ. ಸೇರಿದಂತೆ ಹತ್ತು ಹಲವು ಯೋಜನೆಗಳುನ್ನು ಜಾರಿಗೊಳಿಸಲಿದ್ದಾರೆ ಮತ್ತೊಮ್ಮೆ ಮೋದಿಗೆ ನಿಮ್ಮ ಮತ ಹಾಕುವಂತೆ ಮನವಿ ಮಾಡಿದರು.
ಚಳ್ಳಕೆರೆ ವಿಧಾನಸಭೆಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಖಾತೆ ತೆರೆದ ಮಾಜಿ ಸಚಿವ ದಿವಂಗ ತಿಪ್ಪೇಸ್ವಾಮಿಯನ್ನು ಸ್ಮರಿಸುತ್ತಾ ಈ ಕ್ಷೇತ್ರ ಎರಡು ಬಾರಿ ಬಿಜೆಪಿ ಸ್ಥಾನ ನೀಡಿಗೌರವಿಸಿದೆ ಅದೇ ರೀತಿ ಲೋಕ ಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಎ.ನಾರಾಯಣಸ್ವಾಮಿ 1 ಲಕ್ಷಕ್ಕೂ ಹೆಚ್ಚು ಮತದಾನ ಮಾಡುವ ಮೂಲಕ ಲೋಕಸಭೆಗೆ ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಿ.ವಿ.ಸಿರಿಯಣ್ಣ, ಮಾಜಿ ಮಂಡಲ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಅಭ್ಯರ್ಥಿ ಎ.ನಾರಯಣಸ್ವಾಮಿ, ಸಿದ್ದೇಶ್‍ಯಾದವ್, ಮಾತನಾಡಿದರು.
ಸಭೆಯಲ್ಲಿ ಮಾಜಿ ಎಂಎಲ್‍ಸಿ ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ್‍ಮಂಡಿಮಠ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್, ರತ್ನಮ್ಮ, ಶಿವಪುತ್ರಪ್ಪ, ಜಯಪಾಲಯ್ಯ, ಜಿ.ಕೆ.ವೀರಣ್ಣ, ಸುರೇಶ್, ಎಂ.ಎನ್.ಜಯರಾಂ, ಸೂರನಹಳ್ಳಿಶ್ರೀನಿವಾಸ್, ಜಯಣ್ಣ, ಇತರರಿದ್ದರು.

Leave a Reply

Your email address will not be published. Required fields are marked *

Pin It on Pinterest