ಚೈತನ್ಯದ ಚಿಲುಮೆ ಮಹಾದೇವ ಬಿರಾದಾರ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಎಂಬ ಪುಟ್ಟ ಗ್ರಾಮ, ರಾಜ್ಯದ ಮೂಲೆ ಮೂಲೆಯಿಂದಲೂ ಗಣ್ಯಾತಿಗಣ್ಯರನ್ನು ‘ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್’ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಹಾದೇವ ಬಿರಾದಾರ ಇವರ ಸಂಪರ್ಕ ಇರುವುದು ದೊಡ್ಡ ದೊಡ್ಡ ಆಲದ ಮರದಂತೆ ಬೆಳೆದಿರುವ ಜನರ ಸಂಪರ್ಕದಲ್ಲಿ ಸದಾಕಾಲ ಇರುವುದರಿಂದ ಚಮಕೇರಿ ಎಂಬ ಪುಟ್ಟ ಗ್ರಾಮಕ್ಕೆ ಭೇಟಿ ನೀಡಿಸಿರುವ ಶ್ರೇಯಸ್ಸು ಮಹಾದೇವ ಬಿರಾದಾರ ಅವರಿಗೆ ಸಲ್ಲುತ್ತದೆ.

ಶರಣರ ವಚನಗಳು ರೋಗಗ್ರಸ್ಥ ಜಗತ್ತಿಗೆ ಮಾತ್ರೆಗಳು, ಮಾರ್ಗದರ್ಶನಕ್ಕೆ ಮಂತ್ರಗಳು, ಸ್ವಾರ್ಥ ಜೀವನಕ್ಕೆ ಸೋಪಾನಗಳು ಮತ್ತು ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ ನುಡಿಮುತ್ತುಗಳು ಎನ್ನುವಂತೆ, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮೂರು ಅಂಗಗಳು ಒಟ್ಟಿಗೆ ಪತ್ರಿಕೆಯ ಒಂದು ಅಂಗ. ಶರಣ ಚೇತನ ಪಾಕ್ಷಿಕ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸಿ ನಾಡಿನಾದ್ಯಂತ ಶರಣರ ಒಡನಾಟದ ವಿಷಯಗಳನ್ನು ಹೊತ್ತು ತರುವ ಪತ್ರಿಕೆ ಬಹಳಷ್ಟು ಉತ್ತಮವಾಗಿ ಮೂಡಿ ಬರುತ್ತಿದೆ. ಜೀವನದಲ್ಲಿ ಬರುವ ಪ್ರತಿಯೊಂದು ಕ್ಷಣವನ್ನು ದೇವರು ಕೊಟ್ಟ ಅಮೂಲ್ಯ ಕೊಡುಗೆ ಅದನ್ನು ಸಮಯೋಚಿತವಾಗಿ ಉಪಯೋಗಿಸಿಕೊಳ್ಳಬೇಕು ಮಹಾದೇವ ಅವರ ಆಲೋಚನಾ ಲಹರಿಯೇ ಬೇರೆ. ಅವರೇ ಸ್ಥಾಪಿಸಿಕೊಂಡಿರುವಂತಹ ಟ್ರಸ್ಟ್ ಮುಖಾಂತರ ಪ್ರತಿವರ್ಷ ಬಹಳಷ್ಟು ವಿಶೇಷ ಮತ್ತು ವಿಶಿಷ್ಟವಾಗಿ ರುವಂತಹ ಅಪ್ಪನ ಮೇಲೆ ಇರುವ ಹಂಬಲಕ್ಕಾಗಿ ನಾಡಿನಲ್ಲೆಲ್ಲ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ‘ಅಪ್ಪ ಪ್ರಶಸ್ತಿ’ ನೀಡುತ್ತಾ ಬಂದಿರುವ ಇವರ ಕಾಯಕ ನಾವೆಲ್ಲ ಮೆಚ್ಚಲೇಬೇಕು. ಅವ್ವನ ಕುರಿತು ಸಂಘಟನೆಗಳು ಸಾಕಷ್ಟು ಸಿಗುತ್ತವೆ. ಅಪ್ಪನ ಮಹಿಮೆಯ ಕುರಿತು ನಾಡಿಗೆ ಪರಿಚಯಿಸಿರುವ ಮಹಾದೇವರ ಆಲೋಚನಾ ಶಕ್ತಿಯೇ ಬೇರೆಯಾಗಿದೆ.

ಗುರುವಂದನಂ ಮತ್ತು ಗಡಿಯ ರಕ್ಷಣೆಯಲ್ಲಿ ತೊಡಗಿರುವ ಯೋಧರ ಪಾದ ಪೂಜೆ ಎನ್ನುವ ವಿನೂತನ ಕಾರ್ಯಕ್ರಮವನ್ನು ಈಚೆಗೆ ಹಮ್ಮಿಕೊಂಡಿದ್ದರು. ನಾನು ಕೂಡ ಇಂತಹ ಅಭೂತಪೂರ್ವ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾದುದು ವಿಶೇಷ. ಈ ನಾಡಿನಲ್ಲಿಯೇ ಇದೊಂದು ವಿಶೇಷವಾದಂತ ಅಭೂತಪೂರ್ಣ ಸಮಾರಂಭ. ಪ್ರತಿವರ್ಷ ಪಂಡರಪುರದ ದಿಂಡೆಯಾತ್ರೆಯವರಿಗೆ ಅನ್ನದಾಸೋಹ, ರಮಜಾನ ಹಬ್ಬದಲ್ಲಿ ಇಪ್ತಿಯಾರ ಕೂಟವನ್ನು, ಸಪ್ಟೆಂಬರ್ ದಲ್ಲಿ ಶಿಕ್ಷಕರಿಗಾಗಿ ಗುರುವಂದನಂ, ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ ಸಮಾರಂಭಗಳನ್ನು ಹಮ್ಮಿಕೊಳ್ಳುತಿರುತ್ತಾರೆ.

ದಯೆ ಮತ್ತು ಸೇವೆಯನ್ನು ಬೋಧಿಸುವ ಮತ್ತು ಆಚರಿಸುವ ಧರ್ಮವೇ ಸರ್ವಶ್ರೇಷ್ಠ ಎನ್ನುವಂತೆ ಮಹಾದೇವರು ಕುಳಿತಾಗ, ನಿಂತಾಗ, ಮಲಗಿದಾಗಲೂ ಕೂಡ ಶರಣರ-ಸಂತರ ಸಂಸ್ಕೃತಿ, ಸಂಸ್ಕಾರದ ಕುರಿತು ಚಿಂತನ ದೊಂದಿಗೆ ನಾಡಿನೊಳಗಿನ ಮಠಾಧೀಶರೊಂದಿಗಿನ ಸಂಪರ್ಕ ಅನನ್ಯವಾದದ್ದು. ಇವರ ಬಿಚ್ಚು ಮನಸ್ಸಿನ ಆಲೋಚನೆಗಳು ಸಾರ್ವಕಾಲಿಕವಾಗಿ ಸತ್ಯವಾಗಿರುತ್ತವೆ. ಗುರುಗಳಲ್ಲಿ ಭಕ್ತಿ, ಹಿರಿಯರಲ್ಲಿ ಕಿರಿಯರಲ್ಲಿ ಸೌಜನ್ಯತೆ, ಕಾಯಕದಲ್ಲಿ ನಿಸ್ವಾರ್ಥತೆ, ನಡತೆಯಲ್ಲಿ ನಿಗರ್ವತೆ, ಮಾತಿನಲ್ಲಿ ಮೃದುತ್ವ ತೆ, ಚಿಂತನೆಯಲ್ಲಿ ಕ್ರಿಯಾಶೀಲತೆಯನ್ನು ಮೇಳೈಸಿಕೊಂಡು ಬಂದಿರುವ ಮಹಾದೇವ ಇವರಿಗೆ ಅನೇಕರು ಗೌರವಿಸಿದ್ದಾರೆ. ಸನ್ಮಾನಿಸಿದ್ದಾರೆ.

ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಕರುನಾಡ ಪದ್ಮಶ್ರೀ ಪ್ರಶಸ್ತಿ, ವೀರಶೈವ ರತ್ನ ಪ್ರಶಸ್ತಿ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, ಸೇವಾ ರತ್ನ ಪ್ರಶಸ್ತಿ, ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ, ಯಂಗ್ ಅಚೀವ್ ಮೆಂಟ್ ಅವಾರ್ಡ್, ಜಗದ್ಗುರು ರೇಣುಕಾಚಾರ್ಯ ಸದ್ಭಾವನ ಪ್ರಶಸ್ತಿ, ಅನಕೃ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಸಾಧಕಾಭಿನಂದನ ಪುರಸ್ಕಾರ ಸೇರಿದಂತೆ ಇವರ ಸೇವಾ ಸೌಭಾಗ್ಯತೆಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ.

ಮಹಾದೇವರು ನಿರ್ವಹಿಸುತ್ತಿರುವ ಕಾರ್ಯಗಳ ಬಗ್ಗೆ ಒಂದೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಬರೆಯುವ ಇವರ ಸಾಹಿತ್ಯ ಕೂಡ ಅಮೋಘವಾದದ್ದು. ಅನೇಕ ಪತ್ರಿಕೆಗಳಲ್ಲಿ ಬಿಡಿ ಲೇಖನಗಳನ್ನು ಬರೆದಿದ್ದಾರೆ. ಈ ಪರಿಯ ಅವಿರತ ಸಾಧನೆಗೆ ಇದೇ ಏಪ್ರಿಲ್ 19ರಂದು ಭಾಗೋಜಿಕೊಪ್ಪ ಹಿರೇಮಠವು ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ‘ಶಿವಯೋಗಿ ಸಿರಿ’ ಪ್ರಶಸ್ತಿ ನೀಡಿ ಗೌರವಿಸುತಿದ್ದಾರೆ. ಮಹಾದೇವ ಅವರ ಸಾಧನೆ ಸತ್ಪಥದಲಿ ಸಾಗಲಿ, ಎಲ್ಲಾ ಗುರು ಹಿರಿಯರ, ಬಂಧು ಬಾಂಧವರ ಸದ್ಭಾವ ಅವರೊಂದಿಗಿರಲಿ.

🚩ಸಂಜಯ್ ಕುರಣಿ
ಸಾಹಿತಿಗಳು, ಐನಾಪುರ

Leave a Reply

Your email address will not be published. Required fields are marked *

Pin It on Pinterest