ಜನಸಾಮಾನ್ಯರು ರಾಮನನ್ನು ಮರೆತಿರುವುದರಿಂದಲೇ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರವಾಗುತ್ತಿಲ್ಲ

ಸಿಂಧನೂರು : ಶ್ರೀರಾಮನ ಆದರ್ಶ, ರಾಮರಾಜ್ಯದ ಕಲ್ಪನೆ, ರಾಮಾಯಣದ ಚಿಂತನೆಗಳು ಇಂದಿನ ಭರಾಟೆಯ ಆಧುನೀಕ ಕಾಲಕ್ಕೆ ಅತಿ ಅವಶ್ಯ, ಜನಸಾಮಾನ್ಯರು ರಾಮನನ್ನು ಮರೆತಿರುವುದರಿಂದಲೇ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರವಾಗುತ್ತಿಲ್ಲ ಎಂದು ಮಂತ್ರಾಲಯದ ಸುಳಾದಿ ಹನುಮೇಶಾಚಾರ್ಯ ಹೇಳಿದರು .
ನಗರದ ಶ್ರೀರಾಮ ಮಂದಿರದಲ್ಲಿ ಜರುಗಿದ ಶ್ರೀರಾಮನವಮಿ ಉತ್ಸವದ ಅಂಗವಾಗಿ ವಸಿಷ್ಠಧಾಮ ಹಾಗೂ ತಾಲೂಕಾ ಬ್ರಾಹ್ಮಣ ಸಮಾಜ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶ್ರೀ ರಾಮಚಂದ್ರ ವೈಭವೋತ್ಸವ – 2019 ಕಾರ್ಯಕ್ರಮದಲ್ಲಿ ಮಾತನಾಡಿ ಜನಸಾಮಾನ್ಯರು ಶ್ರೀರಾಮ ತಾರಕಮಂತ್ರ ಜಪಮಾಡುವದರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ನಂತರ ರಾಮರಾಜ್ಯದ ಕನಸು ನನಸಾಗುವದು ಅಲ್ಲಿಯವರೆಗೂ ರಾಮಮಂತ್ರವನ್ನು ಪ್ರತಿದಿನ ಜಪಿಸಬೇಕೆಂದು ಕರೆಕೊಟ್ಟರು.
ರಾಮರಾಜ್ಯ ಬೇಕಾದರೆ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು ಅಂದಾಗ ರಾಮನ ಚಿಂತನೆ ಜನಸಾಮಾನ್ಯರಲ್ಲಿ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ ಕುಲಕರ್ಣಿ ಮಾತನಾಡಿ ವಸಿಷ್ಠಧಾಮ ಸಂಸ್ಥೆ ಬ್ರಾಹ್ಮಣ ಸಮಾಜದ ಹೆಮ್ಮೇಯ ಪ್ರತೀಕವಾಗಿದೆ ಪ್ರತಿಯೊಂದು ದಾಸಸಾಹಿತ್ಯ ಸಾಂಸ್ಕøತಿಕ ಸಂಗೀತ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲಿದ್ದು ಜನಸಾಮಾನ್ಯರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವೂ ಸಹ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ ಪ್ರಾಸ್ತಾವಿಕ ಮಾತನಾಡಿ ವಸಿಷ್ಠರು ಶ್ರೀರಾಮನ ಪುರೋಹಿತರು. ರಾಮನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಲು ರಾಮನಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಸಿದರು. ಧರ್ಮಪ್ರಜ್ಞೆಯು ಜಾಗೃತವಾಗಿ ಪರಿಪೂರ್ಣ ಆದರ್ಶಪುರುಷ ಶ್ರೀರಾಮನಾದ. ಶ್ರೀರಾಮನನ್ನು ಪೂಜಿಸಿ ರಾಯರುಕೂಡಾ ಕಲಿಯುಗದ ಜನಸಾಮಾನ್ಯರಿಗೆ ಕಾಮಧೇನು ಕಲ್ಪವೃಕ್ಷರಾಗಿದ್ದಾರೆ. ವಸಿಷ್ಠರು ಶ್ರೀರಾಮ ಮತ್ತು ರಾಯರು ಯಾವಾಗಲೂ ಜನಸಾಮಾನ್ಯರ ಕಷ್ಟಕಾರ್ಪಣ್ಯವನ್ನು ಪರಿಹರಿಸಿ ದಾರಿತೊರಿಸುವ ಮಹಾನುಭಾವಾರಾಗಿದ್ದಾರೆ. ನಮ್ಮ ವಸಿಷ್ಠಧಾಮದಿಂದ ಜನಸಾಮಾನ್ಯರು ಜಾಗೃತೆಗಾಗಿ ಹೋಮ ಧಾರ್ಮೀಕ ಸಾಂಸ್ಕøತಿಕ ಸಂಗೀತ ಸಾಹಿತ್ಯ ಚಿಕ್ಕಮಕ್ಕಳಿಂದ ವಯೋಮಾನದ ಜನರಿಗೂ ಹಲವು ಕಾರ್ಯಕ್ರಮಗಳನ್ನು ನಿಷ್ಕಾಮವಾಗಿ ನೇರವೇರಿಸಿ ಯಶಸ್ವಿಯಾಗಿದೆ ಎಂದರು.
ಕಾವೇರಿಕುಲಕರ್ಣಿ ಲಕ್ಷ್ಮಣನ ಗುಣಚಿಂತನೆ, ಉಷಾಜೋಷಿ ರಾಮನ ಆದರ್ಶಗಳು, ಪಾಂಡರಂಗ ಕನಸಾವಿ ರಾಮರಾಜ್ಯ ಹಾಗೂ ವಿಜಯಲಕ್ಷ್ಮೀ ತುರುವಿಹಾಳ ರಾವಣನವ್ಯಕ್ತಿತ್ವ, ನರ್ಮದಾಬಾಯಿ ಸೀತೆಯ ಕುರಿತು ವಿಷಯ ಮಂಡನೆಮಾಡಿದರು. ನಗರಸಭೆ ಸದಸ್ಯ ಸರಿತಾ ವೆಂಕಟರಾವ್ ಬಂಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಸಂತೋಷಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಶ್ವೇತಾ ಕಿನ್ನಾಳರವರಿಗೆ ವಸಿಷ್ಠಧಾಮ ಸಂಗೀತರತ್ನ ಪ್ರಶಸ್ತಿ ಪ್ರದಾನ.
ಸಿಂಧನೂರು ನಗರದ ಶ್ರೀರಾಮಮಂದಿರದಲ್ಲಿಶ್ರೀರಾಮನವಮಿ ಉತ್ಸವದ ಅಂಗವಾಗಿ ಸಂಗೀತಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ರಾಜ್ಯಮಟ್ಟದ ಕಲಾವಿದೆ ಶ್ವೇತಾಕಿನ್ನಾಳ ಇವರಿಗೆ ವಸಿಷ್ಠಧಾಮ ಸಂಗೀತ ರತ್ನ ಪ್ರಶಸ್ತಿಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ ಮಾತನಾಡಿ ಸಂಗೀತ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವದರಿಂದ ಸಮಾಜದಲ್ಲಿ ಕಲಾಜಗತ್ತು ಬೆಳೆಯುತ್ತದೆ. ಒಂದು ಪ್ರೋತ್ಸಾಹದ ಪ್ರೀತಿಯ ಮಾತು ಕಲಾವಿದರಿಗೆ ಹಲವು ಕನನಸುಗಳಿಗೆ ನಾಂದಿಯಾಗುವುದು ಮುಂದಿನ ದಿನಗಳಲ್ಲಿ ಸ್ಥಳೀಯ ಕಲಾವಿದರಿಂದ ಅಂತ್ಯಾಕ್ಷರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ರಾಜ್ಯದ ಮತ್ತು ರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸಲಾಗುವದು ಎಂದರು. ಈ ಸಂದರ್ಭದಲ್ಲಿ ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ವೆಂಕಣ್ಣಾಚಾರ್ಯ ಜೋಷಿ, ಶ್ರೀರಾಮ ಭಜನಾಮಂಡಳಿಯ ಅಧ್ಯಕ್ಷೆ ಪುಷ್ಪಾವತಿ ಕೆ ಮಸ್ಕಿ, ಕಾವೇರಿ ಕುಲಕರ್ಣಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Pin It on Pinterest