ವಿಕಲಚೇತನರು ನಿರ್ಭೀತಿ ಯಿಂದ ಮತಟ್ಟೆಗೆ ಬಂದು ಮತದಾನದ ಹಕ್ಕನ್ನು ಚಲಾಯಿಸುವಂತೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ಚಂದ್ರಶೇಖರ್ ಹೇಳಿದರು.

ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದೆ. 18 ವರ್ಷತುಂಬಿದ ಪ್ರತಿಯೊಬ್ಬ ನಾಗರೀಕರು ಮತದಾನದಿಂದ ವಂಚಿತರಾಗಬಾರುದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ದೈಹಿಕ ಊನತೆ ಮತದಾನಕ್ಕೆ ಅಡ್ಡಿಯಾಗಬಾರದು ವಿಕಲಚೇತನರು ನಿರ್ಭೀತಿ ಯಿಂದ ಮತಟ್ಟೆಗೆ ಬಂದು ಮತದಾನದ ಹಕ್ಕನ್ನು ಚಲಾಯಿಸುವಂತೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ಚಂದ್ರಶೇಖರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಸಂಭಾಗಣದಲ್ಲಿ ತಾಲೂಕಿನ ವಿಕಚನೇನತ ಎಂಆರ್‍ಡ್ಲ್ಯೂ ಗಳಿಗೆ ಆಯೋಜಿಸಿದ್ದ ಮತದಾನ ಜಾಗೃತಿ ಹಾಗು ಸೌಲಭ್ಯಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಕೇವಲ ಒಂದು ಓಟಿನಿಂದ ಅಭ್ಯರ್ಥಿಗಳು ಸೋತ ಹಾಗೂ ಗೆದ್ದ ನಿದರ್ಶನಗಳಿಗೆ ಆದ್ದರಿಂದ ಪ್ರತಿಯೊಂದು ಓಟಿಗೆ ಮಹತ್ವವಿದೆ. ವಿಕಲಚೇತನರು ಸರಕಾರದಿಂದ ಅನೇಕ ಸೌಲಭ್ಯಗಳನ್ನು ಪಡೆದಿದ್ದು. ಚಳ್ಳಕೆರೆ ವಿಧಾಸಭಾ ಕ್ಷೇತ್ರವ್ಯಾಪ್ತಿಯಲ್ಲಿ 3474 ಮತದಾರನ್ನು ಹೊಂದಿದ್ದು. ಪ್ರತಿಯೊಂದು ಮತ ಅಮೂಲ್ಯವಾಗಿದ್ದು ಮತಗಟ್ಟೆಗೆ ಬರಲು ವಾಹನದ ವ್ಯವಸ್ಥೆ, ಭೂತಗÀನ್ನಡಿ, ಗಾಲಿ ಕುರ್ಚಿ, ರ್ಯಾಂಪ್, ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಿಲಾಗುತ್ತಿದೆ ಇವನ್ನೆಲ್ಲಾ ಸದುಪಯೋಗ ಪಡಿಸಿಕೊಂಡು 3474 ವಿಕಲಚೇತನರು ಮತಗಟ್ಟೆಗೆ ಬಂದು ಮತಚಲಾಯಿಸುವ ಜತೆಗೆ ಇತರರಿಗೆ ಮತದಾನದಲ್ಲಿ ಪಾಲ್ಗೊಂಡು ಶೇ 100 ರಷ್ಟು ಮತದಾನ ಗುರು ಸಾಧನೆ ಮುಂದಾಗುವಂತೆ ತಿಳಿಸಿದರು.
ಬಿಇಒ ವೆಂಕಟೇಶಪ್ಪ ಮಾತನಾಡಿ ಶೇ97 ರಷ್ಟು ಮತಗಟ್ಟೆಗಳು ಸರಕಾರಿ ಶಾಳೆಗಳಲ್ಲಿ ಸ್ಥಾಪನೆ ಮಾಡಿರುವುದರಿಂದ ವಿಕಲಚೇತನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜತಗೆ ದೃಷ್ಠಿ ಮಾಂದ್ಯರಿಗೆ ಬ್ರೈಲ್ ನಲ್ಲಿ ಮುದ್ರಿಸಲಾಗಿರುವ ಮತ ಪತ್ರಗಳನ್ನು ವಿಕಲಚೇತನರ ಮತಗಟ್ಟೆಗಳಲ್ಲಿ ಒದಗಿಸಲಾಗಿದೆ. ಸರತಿ ಸಾಲಿನಲ್ಲಿ ವಿಕಲಚೇತರಿಗೆ ಆಧ್ಯತೆ ನೀಡಲಾಗಿದೆಎ ಇವರಿಗೆ ಸಹಾಯ ಮಾಡಲು ಮತಗಟ್ಟೆಗಳಲ್ಲಿ ಮತದಾನದ ಹಕ್ಕು ಹೊಂದದ ಮಕ್ಕಳನ್ನು ಸ್ವಯಂ ಸೇವಕರನ್ನು ನೇಮಿಸಲಾಗಿದೆ.
ಪ್ರಜಾಪ್ರಭುತ್ವದ ಈ ಸಂಭ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಮತಚಲಾಯಿಸುವ ಮೂಲಕ ಏ 18 ರಂದು ಮತದಾನದ ಹಬ್ಬವಾಗಿ ಆಚರಿಸೋಣ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮೀಣ ಭಾಗದ ನೋಡೆಲ್ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿ ಗಿರಿಜಾಂಭ, ನಗರದ ನೋಡೆಲ್ ಅಧಿಕಾರಿ ಹಾಗೂ ಪೌರಾಯುಕ್ತ ಪರಮೇಶ್ವರಪ್ಪ, ಸದಸ್ಯ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ತಾಲೂಕು ಎಂಆರ್ ಡ್ಲ್ಯೂ ನರಸಿಂಹಮೂರ್ತಿ ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

Pin It on Pinterest