ದೇಶ ರಕ್ಷಿಸುವವರಿಗೆ ಮತ ನೀಡಿ

ನರೇಗಲ್ಲ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಗ್ರಾಮ ಘಟಕದ ವತಿಯಿಂದ ಗ್ರಾಮದ ಪ್ರಮುಖ ಓಣಿಗಳಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪ್ರಚಾರ ನಡೆಸಲಾಯಿತು.

ರವಿವಾರ ಸಂಜೆ ಸಮೀಪದ ಜಕ್ಕಲಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಲಾಯಿತು. ಮನೆ ಮನೆಗೆ ತೆರಳಿ ಹಾವೇರಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಮತ ನೀಡುವಂತೆ ಹಾಗೂ ನರೇಂದ್ರ ಮೋದಿ, ಶಿವಕುಮಾರ ಉದಾಸಿ ಅವರ ಸಾಧನೆಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರದ ಸಾಧನೆಗಳಿರುವ ಕರಪತ್ರಗಳನ್ನು ಹಂಚಲಾಯಿತು.

ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಕಡಗದ ಮಾತನಾಡಿ, ದೇಶ ರಕ್ಷಣೆ ಮಾಡುವವರಿಗೆ ಮತ ನೀಡಬೇಕು. ರಾಷ್ಟ್ರ ಕಂಡ ಉತ್ತಮ ಹಾಗೂ ದಕ್ಷ ಆಡಳಿತಗಾರ ಪ್ರಧಾನಿ ನರೇಂದ್ರ ಮೋದಿ ಜನನಾಯಕ. ಆರ್ಥಿಕ ತಜ್ಞ ಎನಿಸಿಕೊಂಡಿರುವ ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾದರೂ ದೇಶ ಆರ್ಥಿಕ ಕ್ಷೇತ್ರದಲ್ಲಿ ವೈಫಲ್ಯ ಕಂಡಿರುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತ ಕಾರ್ಯವೈಖರಿಗೆ ಹಿಡಿಸ ಕನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷ ಹಿಂದುಳಿದ ಜಾತಿಯವರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಹಿಂದುಳಿದ ಜನಾಂಗದವರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲ್ಲಿಸಲಿದ್ದಾರೆ. ಕಳೆದ ಐದು ವರ್ಷದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಶ್ವದ ಗಮನ ಸೇಳೆಯುವಂತೆ ಮಾಡಿದೆ. ದೇಶದ ಭದ್ರತೆಯಲ್ಲಿ ನಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಮತ್ತು ದೇಶ ಸುಭೀಕ್ಷೆಯಾಗಿದ್ದರೆ ದೇಶದ ನಾಗರೀಕರು ಸುರಕ್ಷಿತರಾಗಿರುತ್ತಾರೆ. ದೇಶದ ಚುಕ್ಕಾಣಿಯನ್ನು ಸರ್ಮಥ ನಾಯಕರಿಗೆ ಒದಗಿಸಿದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಹೀಗಾಗಿ ಮತ್ತೊಮ್ಮೆ ಶಿವಕುಮಾರ ಉದಾಸಿ ಅವರಿಗೆ ಮತ ನೀಡುವ ಮೂಲಕ ದೇಶ ರಕ್ಷಣೆಗೆ ಕಳುಹಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಪ್ರಭಣ್ಣ ಪಲ್ಲೇದ, ಮಹೇಶ ಕೋಡಿ, ತೋಟಪ್ಪ ಕಡಗದ, ಶಿವಪ್ಪ ಕೆಳಗಡೆ, ವಿಜಯಗೌಡ ಪಾಟೀಲ, ಭೀಮಪ್ಪ ರೋಣದ, ರವಿ ಜಂಗಣ್ಣವರ, ಚನ್ನಬಸರಾಜ ಕೊಪ್ಪದ, ಸಂದೇಶ ದೊಡ್ಡಮೇಟಿ, ಜಗದೀಶ ಪಲ್ಲೇದ, ಶೇಖಪ್ಪ ಮಾರನಬಸರಿ, ಶಿವನಗೌಡ ಪಾಟೀಲ, ಪ್ರಕಾಶ ವಾಲಿ, ಶರಣಪ್ಪ ಕೋರಿ, ಪ್ರಕಾಶ ಹೊಸಮನಿ, ಬಸವರಾಜ ಜೋಗಿ, ಮುತ್ತಪ್ಪ ಅಕ್ಕಿಶೆಟ್ಟರ್, ಅಂದಪ್ಪ ರಂಗಣ್ಣವರ, ಮುತ್ತಪ್ಪ ಗೌಡರ, ಸಂತೋಷ ಕೋರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Pin It on Pinterest