ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅನ್ನದಾನೇಶ್ವರ ಕಾಲೇಜಿನ ವಿದ್ಯಾರ್ಥಿಗಳು

ಗಜೇಂದ್ರಗಡ: ನಗರದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2018-19ನೇ ಸಾಲಿನ ಫೆಬ್ರವರಿ-ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಮೇರು ಸ್ಥಾನ ತಂದಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 174 ವಿದ್ಯಾರ್ಥಿಗಳಲ್ಲಿ 102 ವಿದ್ಯಾರ್ಥಿಗಳು ಉತ್ತೀರ್ಣರಾಗಿ 58.62% ಫಲಿತಾಂಶವನ್ನು ದಾಖಲಿಸಿದ್ದಾರೆ. ಇದರಲ್ಲಿ ಪ್ರಶಸ್ತಿ ಸಹಿತ ಪ್ರಥಮ ದರ್ಜೆ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 71 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಿದ್ಯಾರ್ಥಿಗಳಾದ ಯಮನಪ್ಪ ಕೊಪ್ಪಳ(92%) ಪ್ರಥಮ, ಕರುಣಾ ಜಕ್ಕಲಿ(88%) ಹಾಗೂ ಸ್ನೇಹಾ ಗಂಜಿಹಾಳ(88%) ದ್ವಿತೀಯ, ದೀಪಿಕಾ ಬಾವಿಕಟ್ಟಿ(87%) ತೃತಿಯ ಸ್ಥಾನಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಾ. ಅಭಿನವ ಅನ್ನದಾನ ಮಹಾಸ್ವಾಮೀಜಿ, ಪ್ರಾಚಾರ್ಯ ಬಸವರಾಜ ಚಿನಿವಾಲರ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

One Reply to “ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅನ್ನದಾನೇಶ್ವರ ಕಾಲೇಜಿನ ವಿದ್ಯಾರ್ಥಿಗಳು”

Leave a Reply

Your email address will not be published. Required fields are marked *

Pin It on Pinterest