ಪರಿವರ್ತನೆ ನನ್ನಿoದಲೇ …..

” ನಿನ್ನ ಮಗನಿಗೆ ಎಷ್ಟು ಪರ್ಸೆoಟು ಬಂತೂ ..? 89% ?? ಅಯ್ಯೋ …ಇನ್ನು ಸ್ವಲ್ಪ ಓದಿದ್ದಿದ್ದರೆ 90% ಬರುತ್ತಿತ್ತು , ಹೋಗ್ಲಿ ಬಿಡು …ಇನ್ನೇನ್ ಮಾಡೋಕಾಗುತ್ತೆ .ನನ್ ಮಗಳಿಗೆ ಓದಿಸಿ ಓದಿಸಿ 98% ತೆಗೆಸೋ ಹೊತ್ತಿಗೆ ನಂಗೆ ಸಾಕಾಗಿ ಹೋಗಿತ್ತು. ಅಂದ ಹಾಗೆ ನಿನ್ನ ತಂಗಿ ಮಗಳೂ ಪಿ ಯು ಸಿ ..ಅಲ್ವಾ ? ಅವಳೆಷ್ಟು ಮಾರ್ಕ್ಸ್ ತಕೊoಡಳು ??”

ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಫಲಿತಾoಷ ಹೊರಬಿದ್ದರೆ ಸಾಕು, ಎಲ್ಲೆಲ್ಲೂ ಕೇಳಿ ಬರುವ ಸಂಭಾಷಣೆ ಇದು .ಬಹಳಷ್ಟು ಪೋಷಕರು ಈ ಅನಗತ್ಯ ಕಾಳಜಿ ತೋರೋ ಹಿತ ಶತ್ರುಗಳ ಬಾಯಿಗೆ ಆಹಾರ ಆಗದಿರಲಿ ಎಂದೇ ತಮ್ಮ ಮಕ್ಕಳಿಗೆ ಒತ್ತಡ ಹೇರಿ ಓದಿಸುತ್ತಾರೆ. ಕೆಲವೊಮ್ಮೆ ಮಕ್ಕಳು ಎಷ್ಟೇ ಓದಿದರೂ ಪೋಷಕರ ನಿರೀಕ್ಷೆಯ ಮಟ್ಟಕ್ಕೆ ಏರಲು ಅವರಿಗೆ ಸಾಧ್ಯವಾಗುವುದಿಲ್ಲ.ಏಕೆoದರೆ ಮಕ್ಕಳ ಬೌದ್ಧಿಕ ಮಟ್ಟಕ್ಕನುಗುಣವಾಗಿ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ , ಅಲ್ಲವೇ ? ಇದನ್ನರಿಯದೆ ಮಕ್ಕಳ ಮೇಲೆ ಒತ್ತಡ ಹಾಕಬಾರದು. ಫಲಿತಾoಷ ಬಂದ ತಕ್ಷಣ ಅಂಕ ತಿಳಿದುಕೊಳ್ಳಲು ಆತುರ ಪಡುವ ನಮ್ಮ ಬಂಧುಗಳು ಪರೀಕ್ಷೆಗೆ ಮುನ್ನ ನಮಗೆ ಕಾಣ ಸಿಕ್ಕಾಗ ಏನು ಹೇಳುತ್ತಾರೆ ..??

“ನಿಮ್ ಮಗನಾ .? ಓದ್ಕೊತಾನೆ ಬಿಡಿ ” ಅಂತ. ನಮ್ಮ ಮನೆಗೆ ಬರೋ ನೆoಟರಿಷ್ಟರ ಎದುರು “ಓದ್ಕೊ ಹೋಗು ” ಎಂದು ನಮ್ಮ ಮಕ್ಕಳಿಗೆ ಹೇಳಿದರೆ ಸಾಕು ..ಅವರ ಕರುಳು ಚುರ್ರ್ ಅನ್ನುತ್ತೆ.”ಪಾಪ ..ಯಾಕೆ ಹಿoಸೆ ಮಾಡ್ತೀರಾ ?” ಅಂತ ಕರುಣೆ ತೋರೋ ಮಾತುಗಳನ್ನು ಆಡುತ್ತಾರೆ. ಓದಬೇಕಾದ ದಿನಗಳಲ್ಲಿ ಮಕ್ಕಳೊಡನೆ ಜೀವ ತೇಯೋರು ಪೋಷಕರು ಮತ್ತು ಶಿಕ್ಷಕರು, ಆದರೆ ಫಲಿತಾoಷ ಬಂದ ಮೇಲೆ ನಮಗಾಗಿ , ನಮ್ಮ ಮಕ್ಕಳಿಗಾಗಿ ಕೊರಗೋರು ಇವರು !

ಪರೀಕ್ಷೆಗೂ ಮುನ್ನ ಇವ್ರೆಲ್ಲ ಯಾಕೆ ಕಾಳಜಿ ತೆಗೆದುಕೊoಡು ಮಕ್ಕಳನ್ನು ಓದುವoತೆ ಪ್ರೇರೇಪಿಸಬಾರದು ? ಬೇರೆಯವರ ಮಕ್ಕಳ ಚಿಂತೆ ನಮಗೇಕೆ ಎಂದಲ್ಲವೇ .? ಹಾಗಿರುವಾಗ ಫಲಿತಾoಷ ತಿಳಿದುಕೊಳ್ಳುವ ಕಾತುರ ..ಬಳಿಕ ತಳಮಳ ಇವೆಲ್ಲ ಏಕೆ ?

ಕಳೆದ ವರ್ಷ ನನ್ನ ಗೆಳತಿಯ ಮಗು ಹತ್ತನೇ ತರಗತಿಯ ಪರೀಕ್ಷೆ ಬರೆದಿತ್ತು.ಓದಿನಲ್ಲಿ ಸಾಧಾರಣ ಮಟ್ಟಕ್ಕಿoತ ಕೆಳಗಿದ್ದ ಆ ಮಗು ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿಚಾರವನ್ನು ಫಲಿತಾoಷ ಬಂದೊಡನೆ ಆಕೆಯೇ ನನಗೆ ಹೇಳಿದಳು. ಹೀಗೆ ..ಮಕ್ಕಳ ಸಾಧನೆ ಬಗ್ಗೆ ಹೇಳಬೇಕು ಅನಿಸಿದರೆ ಅವರೇ ಹೇಳುತ್ತಾರೆ. ನಾವೇಕೆ ಮಾನಸಿಕ ಹಿoಸೆ ಕೊಡಬೇಕು ? ಫಲಿತಾoಷ ಕೇಳೋಣ ತಪ್ಪಿಲ್ಲ ; ಆದರೆ ಅದು ನೋವು ಕೊಡದ ಹಾಗಿರಲಿ. ಪ್ರಶoಸೆಯನ್ನು ಸರ್ವರ ಸಮ್ಮುಖದಲ್ಲಿ, ವೇದನೆಯನ್ನು ಏಕಾಂತದಲ್ಲಿ ಅನುಭವಿಸಬೇಕು ಎನ್ನುವ ಮನೋಧರ್ಮದ ಸಾರ ತಿಳಿಯದ ಕೆಲವರು ಬೇಕೆoದೇ ಮನನೋಯಿಸುವoತೆ ಮಾತನಾಡುತ್ತಾರೆ. ಹಿರಿಯರ ಮಾತು ಮಕ್ಕಳ ಮನ ನೋಯಿಸದoತಿದ್ದರೆ ಚೆನ್ನ, ಅಲ್ಲವೇ ?
ಹಿರಿಯರಾದ ನಾವು ಈ ಸೂಕ್ಷ್ಮವರಿತು ಸಂಯಮಕಾಯ್ದುಕೊoಡರೆ ಮಕ್ಕಳ ಮನಸ್ಸೂ ನಿರಾಳವಾಗಿರುತ್ತದೆ. ಪೋಷಕರೂ ಅಷ್ಟೇ,ಓಡಿಸಬೇಕಾದ ದಿನಗಳಲ್ಲಿ ಮಕ್ಕಳಲ್ಲಿ ಓದೋ ಆಸಕ್ತಿಯನ್ನು ಬೆಳೆಸಬೇಕು..ಮನೆಗಳಲ್ಲಿ ಅಂತಹ ವಾತಾವಾರಣ ಕಲ್ಪಿಸಬೇಕು. ಅದು ಬಿಟ್ಟು ಫಲಿತಾoಶ ಬಂದ ಮೇಲೆ ಮಕ್ಕಳ ಮನಕ್ಕೆ ನೋವು ಕೊಡಬಾರದು. ಅಂತಿಮ ಫಲಿತಾoಶ ಬಂದಾಗ ತಮ್ಮ ಮಕ್ಕಳ ಸಾಧನೆಯನ್ನು ಬೇರೆ ಮಕ್ಕಳ ಸಾಧನೆಯೊoದಿಗೆ ತುಲನೆ ಮಾಡದೆ ಸಂತೃಪ್ತರಾಗಬೇಕು. ಹೇಗೆ ಐದು ಬೆರಳುಗಳು ಒಂದೇ ಸಮನಾಗಿ ಇಲ್ಲವೋ ಹಾಗೇ ಎಲ್ಲಾ ಮಕ್ಕಳ ಬೌದ್ಧಿಕ ಮಟ್ಟ ಒಂದೇ ತೆರನಾಗಿರಲು ಸಾಧ್ಯ ಇಲ್ಲ.ಅಷ್ಟಕ್ಕೂ ಮಕ್ಕಳು ಗಳಿಸೋ ಅಂಕಗಳೇ ಅವರ ಭವಿಶ್ಯವನ್ನು ನಿರ್ಧರಿಸೋ ಮಾನದಂಡವಲ್ಲ.ಅಂಕಗಳಿoದಾಚೆಗೊoದು ಬದುಕಿದೆ.
ಮಕ್ಕಳು ನಮ್ಮ ನಿರೀಕ್ಷಾಮಟ್ಟ ತಲುಪಿದರೆ ಖುಷಿ ಪಡೋಣ. ಇಲ್ಲ ಅಂದರೆ ಮುoದೆ ಹೇಗೆ ಓದಬೇಕು ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡೋಣ. ಸೂಕ್ಷ್ಮವಾಗಿರೋ ಮಕ್ಕಳ ಮನಸ್ಸನ್ನು ನೋಯಿಸಿ ನಕಾರಾತ್ಮಕ ಭಾವನೆಗಳು ಅವರಲ್ಲಿ ಬೆಳೆಯದoತೆ ನೋಡಿಕೊoಡು “ನಿನ್ನ ಬುದ್ಧಿ ಮನಸು ನಿನ್ನ ಮುಷ್ಟಿಯೊಳಗೆ ಇದ್ದರೆ ಲೋಕವನ್ನೇ ಗೆಲ್ಲಬಹುದು ” ಎಂದು ಹೇಳಿ ಅವರಲ್ಲಿ ಆತ್ಮವಿಶ್ವಾಸ ತುoಬೋಣ.
ಸಧ್ಯದಲ್ಲೇ ಪಿ ಯು ಸಿ ಫಲಿತಾoಶ ಪ್ರಕಟವಾಗಲಿದೆ. ಈ ಹಿಂದಿನ ವರ್ಷಗಳoತೆ ತಮ್ಮ ಪರ್ಸೆoಟೇಜನ್ನು ಮಕ್ಕಳು ಹಾಗೂ ಮಕ್ಕಳ ಸಾಧನೆಯನ್ನು ಅವರ ಪೋಷಕರು ಹೇಳುವವರೆಗೂ ನಾನಾಗಿ ಯಾರನ್ನೂ ಕೇಳಲ್ಲ ….ಮತ್ತೆ ನೀವು ? ಪರಿವರ್ತನೆ ನನ್ನಿoದಲೇ …
ಜಯಲಕ್ಶ್ಮಿ .ಕೆ .
ಮಡಿಕೇರಿ .

Leave a Reply

Your email address will not be published. Required fields are marked *

Pin It on Pinterest