ಮೋದಿಯವರನ್ನು ಮತ್ತೋಮ್ಮೆ ಈ ರಾಷ್ಟ್ರದ ಪ್ರಧಾನ ಮಂತ್ರಿಯಾಗಿಸುವ ಉದ್ದೇಶದಿಂದ ಅಷ್ಟೇ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ರಾಗಲಪರ್ವಿ

ಸಿಂಧನೂರು : ಮೋದಿಯವರನ್ನು ಮತ್ತೋಮ್ಮೆ ಈ ರಾಷ್ಟ್ರದ ಪ್ರಧಾನ ಮಂತ್ರಿಯಾಗಿಸುವ ಉದ್ದೇಶದಿಂದ ಅಷ್ಟೇ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ರಾಗಲಪರ್ವಿ ಜೆಡಿಎಸ್ ಜಿಪಂ ಸದಸ್ಯ ಶಿವನಗೌಡ ಗೋರೆಬಾಳ ಹೇಳಿದರು.
ನಗರದ ಗಂಗಾವತಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಯಾವುದೇ ಅಮಿಷ್, ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿಗೆ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟಡಿಸಿ, ಈಗ ರಾಷ್ಟ್ರದ ಹಿತದೃಷ್ಠಿಯಿಂದ ಮತ್ತೋಮ್ಮೆ ಪ್ರಧಾನ ಮಂತ್ರಿಯಾಗಳನ್ನಾಗಿ ಮೋದಿಯವರನ್ನು ಮಾಡಬೇಕಾಗಿರುವುದು ಅತ್ಯವಶ್ಯವಾಗಿರುವುದರಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷ ಬಿಡಲು ಪ್ರಮುಖ ಕಾರಣವೆಂದರೆ ತುಂಗಭದ್ರ ಡ್ಯಾಂನಲ್ಲಿ 6ಟಿಎಮ್‍ಸಿ ನೀರು ಸಂಗ್ರಹವಾಗಿದ್ದರು, ತುಂಗಭದ್ರ ಅಚ್ಚುಕಟ್ಟು ಪ್ರದೇಶ ರೈತರಿಗೆ ಏರಡನೇ ಬೆಳೆಗೆ ನೀರು ಹರಿಸದಿರುವುದು, ಸ್ಥಳೀಯ ನಗರ ಸಭೆ ಚುನಾವಣೆ ಸಂಬಂಧಪಟ್ಟಿದ್ದು ಅಷ್ಟೇ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ನೀವು ಜಿಪಂ ಸದಸ್ಯರಾಗಿದ್ದೀರಿ ಜೆಡಿಎಸ್ ನಿಮ್ಮನ್ನು ಉಚ್ಚಾಟನೆ ಮಾಡುವ ಮೊದಲು ನೀವು ಪಕ್ಷಕ್ಕೆ ಮತ್ತು ಜಿಪಂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದಲ್ಲವೆ ಎಂಬ ಪ್ರಶ್ನೆಗೆ ಜೆಡಿಎಸ್ ಉಚ್ಛಾಟನೆ ಮಾಡಲಿ ಅದಕ್ಕೆ ನನ್ನದೆಯಾದ ಉತ್ತರವಿದೆ ಎಂದು ಜೆಡಿಎಸ್ ಪಕ್ಷದ ವಿರುದ್ಧ ಹರಿಹಾಯ್ದುರು.
ಬಿಜೆಪಿ ಸೇರ್ಪಡೆಗೆ ಕೆಲವರ ವಿರೋಧವಿದೆ ಎಂಬ ಪ್ರಶ್ನೆಗೆ ನಾನು ಬಿಜೆಪಿ ಪಕ್ಷ ಸೇರಲು ಯಾರ ವಿರೋಧ ಇಲ್ಲ ಎಂದು ಹೇಳಿದರು. ಕನಕಗಿರಿ ಶಾಸಕ ಬಸವರಾಜ ದಡೇಸುಗೂರು, ಬಿಜೆಪಿ ಮುಖಂಡರಾದ ಕೊಲ್ಲಾ ಶೇಷಗಿರಿ ರಾವ್, ಮಧ್ವರಾಜ್ ಆಚಾರ್ಯ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

Pin It on Pinterest