ಅಸಮಾನತೆ, ಅಸ್ಪಶ್ಯತೆ, ಜಾತೀಯತೆ ವಿರುದ್ದ ಹೋರಾಟ ರೂಪಿಸಿದ ಡಾ.ಬಿ.ಆರ್. ಅಂಬೇಡ್ಕರ್

ಅಸಮಾನತೆ, ಅಸ್ಪಶ್ಯತೆ, ಜಾತೀಯತೆ ವಿರುದ್ದ ಹೋರಾಟ ರೂಪಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜ ಮುಖಿ ಚಿಂತನೆಗಳೊಂದಿಗೆ ಜನರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮರು ಎಂದು ಬಿಇಒ ಸಿ.ಎಸ್.ವೆಂಕಟೇಶಪ್ಪ ಅಭಿಪ್ರಾಯ ಪಟ್ಟರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬರಗಳ ಆಚರಣೆ ಸಮಿತಿ ಹಾಗೂ ಸಮಾಜಕಲ್ಯಾಣ ಇಲಾಖೆವತಿಯಿಂದ ಭಾನುವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಡಾ; ಬಿ.ಆರ್.ಅಂಬೇಡ್ಕರ್ ರವರು 1891 ರ ಏಪ್ರಿಲ್ 14 ರಂದು ಜನ್ಮ ತಾಳಿದ್ದು ಅಂದಿನಿಂದಲೇ ದೇಶ ಕತ್ತಲೆಯಿಂದ ಬೆಳಕಿನಡೆಗೆ ಬಂದಂತಾಯಿತು. ಅಪಾರವಾದ ಜ್ಞಾನ ಸಂಪತ್ತನ್ನು ಸಂಗ್ರಹಿಸುವ ಮೂಲಕ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನವನ್ನು ದೇಶಕ್ಕೆ ನೀಡುವ ಮೂಲಕ ಎಲ್ಲರಿಗೂ ಬೆಳಕನ್ನು ಕೊಟ್ಟಂತಹ ಮಹಾನ್ ನಾಯಕ ಡಾ; ಬಿ.ಆರ್.ಅಂಬೇಡ್ಕರ್‍ರವರು. ಸರ್ವರಿಗೂ ಸಮಪಾಲು, ಸಮಬಾಳನ್ನು ಸಂವಿಧಾನದ ಮೂಲಕ ದೇಶದಲ್ಲಿನ ಎಲ್ಲಾ ವರ್ಗದವರಿಗೂ ಕಲ್ಪಿಸಿರುವರು.
ಡಾ; ಬಿ.ಆರ್.ಅಂಬೇಡ್ಕರ್ ರವರಿಗೆ ಯಾವ ವಸ್ತುಗಳ ಮೇಲೆಯು ವ್ಯಾಮೋಹವಿರಲಿಲ್ಲ. ಆದರೆ ಪುಸ್ತಕ ಕಂಡರೆ ಎಲ್ಲಿಲ್ಲದ ಪ್ರೀತಿ ಪ್ರತಿ ದಿನ 18 ಗಂಟೆಗಳ ಕಾಲ ಓದಿಗಾಗಿ ಸಮಯದವನ್ನು ಮೀಸಲಿಡುತ್ತಿದ್ದರು ವಿದ್ಯಾರ್ಥಿಗಳು ಅಂಬೇಡ್ಕರ್ ರವರ ಜೀವನ ಚರಿತ್ರೆಯ ಪುಸ್ತಕಗಳನ್ನು ಅಬ್ಯಾಸ ಓದಿದರೆ ಜೀವನದಲ್ಲಿ ಹಾಗೂ ವ್ಯಾಸಂಗದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ತಳಮಟ್ಟದ ಸಮುದಾಯದವರಿಗೂ ಸಮನತೆ ಮತ್ತು ಸೌಲಭ್ಯಗಳನ್ನು ಕಲ್ಪಿಸಲು ತಮ್ಮ ಜೀವನವನ್ನು ಅರ್ಪಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅದರ್ಶ ಗುಣಗಳನ್ನು ಎಲ್ಲರೂ ಪಾಲಿಸಬೇಕು. ಎಲ್ಲ ಬಡ ವರ್ಗಗಳ ಜನರ ಕಷ್ಟಗಳನ್ನು ಪರಿಹರಿಸಬೇಕೆಂದು ಸಂವಿಧಾನದಲ್ಲಿ ಹತ್ತಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರು. ಹೀಗಾಗಿ ಸೌಲಭ್ಯಗಳಿಂದ ವಂಚಿರಾದದವರಿಗೆ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಚುನಾವಣಾಧಿಕಾರಿ ರಾಜಶೇಖರ್, ತಹಸೀಲ್ದಾರ್ ತುಷಾರ್ ಬಿ ಹೊಸೂರ್, ಡಿವೈಎಸ್‍ಪಿ ರೋಷನ್ ಜಮೀರ್, ಸಿಪಿಐ ಎನ್.ತಿಮ್ಮಣ್ಣ, ತಾಪಂ ಇ ಒ ಚಂದ್ರಶೇಖರ್, ಪೌರಾಯುಕ್ತ ಪರಮೇಶ್ವರಪ್ಪ, ಸಮಾಜಕಲ್ಯಾಣಾಧಿಕಾರಿ ಮಂಜಪ್ಪ, ತೋಟಗಾರಿಗೆ ಅಧಿಕಾರಿ ವಿರುಪಾಕ್ಷಪ್ಪ, ಪಶುಸಂಗೋನಾಧಿಕಾರಿ ಡಾ.ಹನುಮಪ್ಪ, ಸಿಡಿಪಿಒ ಗಿರಿಜಾಂಭ ಇತರರಿದ್ದರು.
ಕಾರ್ಯಕ್ರಮದಲ ಮೊದಲು ತಾಲೂಕು ಕಚೇರಿ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರೆವೇರಿಸಿದರು.

Leave a Reply

Your email address will not be published. Required fields are marked *

Pin It on Pinterest