ಜೈ ಕೇಸರಿ ನಂದನ್ ಸಿನಿಮಾವನ್ನು ಉತ್ತರ ಕರ್ನಾಟಕದ ಜನತೆ ಪ್ರೋತ್ಸಹಿಸಿ

ನರೇಗಲ್ಲ : ಉತ್ತರ ಕರ್ನಾಟಕದ ಯುವ ಕಲಾವಿದರ ತಂಡದಿಂದ ನಿರ್ಮಾಣಗೊಂಡಿರುವ ಜೈಕೇಸರಿ ನಂದನ್ ಚಲನಚಿತ್ರವು ಶುಕ್ರವಾರ ರಾಜ್ಯದ್ಯಂತ ಬಿಡುಗಡೆಗೊಂಡಿದ್ದು, ಸಿನಿಮಾವನ್ನು ಉತ್ತರ ಕರ್ನಾಟಕದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಣೆ ಮಾಡುವ ಮೂಲಕ ಯುವ ಕಲಾವಿದರಿಗೆ ಪ್ರೋತ್ಸಹ ನೀಡಬೇಕು ಎಂದು ಸಿದ್ದನಕೊಳ್ಳಮಠ ಡಾ| ಶಿವಕುಮಾರ ಸ್ವಾಮೀಜಿ ಹೇಳಿದರು.

ಅವರು ಸಮೀಪದ ಕೋಡಿಕೊಪ್ಪ ಗ್ರಾಮದ ನಿವಾಸದಲ್ಲಿ ಶುಕ್ರವಾರ ಸಂಜೆ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಊರು ಸುಟ್ಟರೂ ಆಂಜನೇಯ ಹೊರಗೆ ಎಂಬ ನಾಟಕ ಆಧಾರಿತ ಹಾಸ್ಯಮಯ ಚಿತ್ರ ಇದಾಗಿದೆ. ದೇವರು ಮತ್ತು ಮನುಷ್ಯನ ನಡುವೆ ಇರುವ ಸಂಬಂಧವು ಚಿತ್ರದಲ್ಲಿ ಮೂಡಿಬಂದಿದೆ. ಜತೆಗೆ ದೇವರು ಮೊದಲ ಆರೋಪಿಯಾದ್ರೆ ಯಾವ ಸ್ಥಾನದಲ್ಲಿ ನಿಲ್ಲತ್ತೆ ಎಂಬ ವ್ಯಂಗ್ಯದ ಮೂಲಕ ಮೂಢನಂಬಿಕೆ ವಿರೋಧಿಸುವ ಚಿತ್ರವಾಗಿದೆ. ದೇಶದಲ್ಲಿರುವ ಮುಸ್ಲಿಂ ಸಮಾಜದ ಯುವಕರಿಗೆ ದೇಶ ಭಕ್ತಿಯ ಸಂದೇಶ ಕೂಡ ಚಿತ್ರದಲ್ಲಿ ಅಡಗಿದೆ. ಗೆಳೆತನ ಮಹತ್ವ ಮತ್ತು ಅದರ ಬೆಳವಣೆಗೆ ಸೇರಿದಂತೆ ಅನೇಕ ಪ್ರವೇಶಗಳನ್ನು ಗ್ರಾಮೀಣ ಸೊಗಡಿನಲ್ಲಿ ಚಿತ್ರ ಮೂಡಿಬಂದೆ. ಸಮೀಪದ ಲಕ್ಕಲಕಟ್ಟಿಯ ಯುವ ಕಲಾವಿದ ಶ್ರೀಧರ ಜಾವೂರ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಸ್ಯ ಕಲಾವಿದ ರಾಜು ತಾಳಿಕೋಟಿ, ಭರತ್ ತಾಳಿಕೋಟಿ, ಶಶಿಧರ್ ದಾನಿ, ಪ್ರವೀಣ ಪತ್ರಿ, ಲಕ್ಷ್ಮಣ ಚಿತ್ರದಲ್ಲಿ ನಟರಾಗಿದ್ದಾರೆ ಎಂದರು

ರಾಘ ಎಸ್. ಮಲ್ಲಯ್ಯ ಗುಂಡಗೋಪುರಮಠ, ನಾಗಪ್ಪ ಹುಯಿಲಗೋಳ, ಸತೀಶ ಹೊನ್ನಾಳಿ, ಆದರ್ಶ ಕುಲಕರ್ಣಿ, ವೀನಾಕ್ಷಿ ಗುಂಡಗೋಪುರಮಠ, ರಮೇಶ ಹತ್ತಿಕಟಗಿ ಇದ್ದರು.

Leave a Reply

Your email address will not be published. Required fields are marked *

Pin It on Pinterest