ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಂಪ್ಯೋಟರ್ ಜ್ಞಾನವನ್ನು ಅರಿತು ಕೊಳ್ಳುವ ಜತೆಗೆ ಸರಕಾರದ ಯೋಜನೆಗಳು, ಫಲಾಬವಿಗಳ ಪಟ್ಟಿಗಳನ್ನು ತಂತ್ರಾಂಶದಲ್ಲಿ ಅಳವಡಿಸ ಬೇಕೆಂದು ತಾಪಂ ಇಒ ಚಂದ್ರಶೇಖರ್

ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಂಪ್ಯೋಟರ್ ಜ್ಞಾನವನ್ನು ಅರಿತು ಕೊಳ್ಳುವ ಜತೆಗೆ ಸರಕಾರದ ಯೋಜನೆಗಳು, ಫಲಾಬವಿಗಳ ಪಟ್ಟಿಗಳನ್ನು ತಂತ್ರಾಂಶದಲ್ಲಿ ಅಳವಡಿಸ ಬೇಕೆಂದು ತಾಪಂ ಇಒ ಚಂದ್ರಶೇಖರ್ ತಿಳಿಸಿದರು.
ನಗರದಾ ಹೆಚ್‍ಪಿಪಿಸಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕೊಠಡಿಯಲ್ಲಿ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಪಿಡಿಗಳಿಗೆ ಶನಿವಾರ ಆಯೋಜಿಸಿದ್ದ ಶೌಚಾಲಯ, ನರೇಗಾ ಹಾಗೂ ಗ್ರಾಪಂ ವ್ಯಾಪ್ತಿಯ ಮತಗಟ್ಟೆಗಳಿಗೆ ಮೂಲ ಭೂತ ಸೌಲಭ್ಯಗಳ ಒದಗಿಸುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನ 40 ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರ್ಮಿಕರು ಗುಳೆ ಹೋಗುವುದನ್ನು ತಡೆಯಲು ಹೆಚ್ಚು ಮಾನವ ದಿನಗಳು ಸೃಜಿಸುವ ಕೆರೆ, ಕಾಲೂವೆ, ಗೋಕಟ್ಟೆ, ಕೃಷಿ ಹೊಂಡಗಳ ಹೂಳೆತ್ತುವ ಕಾಮಗಾರಿಗಳನ್ನು ಗ್ರಾಮಸಭೆ ಮೂಲಕ ಆಯ್ಕೆಮಾಡಿ ಕ್ರಿಯಾ ಯೋಜನೆ ಮಂಜುರಾತಿ ಮಾಡಿಸಿಕೊಂಡು ನಿಗಧಿ ಪಡಿಸಿದ 17 ಲಕ್ಷ ಮಾನವದಿನಗಳನ್ನು ಪೂರ್ಣಗೊಳಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೊಡುವಂತೆ ತಿಳಿಸಿದರು.
ತಾಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮತಯಂತ್ರಗಳು ಕೈಕೊಡುವ ಸಾಧ್ಯತೆ ಇದೆ ಆದ್ದರಿಂದ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಕೊಠಡಿಗಳು ಸೀಟ್ ಅಥವಾ ಹೆಂಚುಗಳಿಂದ ಕೂಡಿದ್ದರೆ ಮೇಲ್ಚಾವಣಿ ಮೇಲೆ ತೆಂಗಿನ ಗರಿಗಳನ್ನು ಅಥವಾ ತಾಡಾಪಾಲ್ ಹಾಕುವುದರ ಮೂಲಕ ಬಿಸಿಲಿನ ತಾಪವನ್ನು ಕಡಿಮೆ ಮಾಡಬೇಕು, ಕುಡಿಯುವ ನೀರು, ವಿದ್ಯುತ್, ಗಾಳಿ ಬೆಳೆಕು, ಮತದಾರರಿಗೆ ನೆರಳಿನ ವ್ಯವಸ್ಥೆ ಒದಗಿಸುವಂತೆ ತಿಳಿಸಿದರು.
ನರೇಗಾ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ ಗ್ರಾಪಂವ್ಯಾಪ್ತಿಯಲ್ಲಿ ಇಂಜಿನಿಯರ್, ಕಂಪ್ಯೂಟರ್ ಆಪರೇಟರ್ ಹಾಗೂ ಪಿಡಿಒಗಳು ಒಂದಾಗಿ ಕೆಲಸ ಮಾಡಿದಾಗ ನರೇಗಾ ಯೋಜನೆ ಯಶಸ್ವಿಯಾಗಿ ಗ್ರಾಮೀಣ ಭಾಗಗಳು ಅಭಿವೃದ್ಧಿ ಹೊಂದಲು ಸಾಧ್ಯ. ಇನ್ನುಮುಂದೆ ನರೇಗಾ ಕಾಮಗಾರಿಗಳ ಯೋಜನಾಪಟ್ಟಿಗಳನ್ನು ಇಡಿದುಕೊಂಡು ಎಲ್ಲೆಂದರಲ್ಲೆ ಎಂಐಎಸ್ ಮಾಡುವಂತಿಲ್ಲ ಆಯಾ ಗ್ರಾಪಂ ಕಚೇರಿಯಲ್ಲೇ ಮಾಡಬೇಕು.
ಈಗಾಗಲೆ ಸ್ವಚ್ಚಭಾರತ ಯೋಜನೆಯಡಿಯಲ್ಲಿ ಶೌಚಾಲಯ ಫಲಾನುಭವಿಗಳ ಪಟ್ಟಿಯಲ್ಲಿ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಟ್ಟು ಅರ್ಹ ಫಲಾನುಭವಿಗಳನ್ನು ಸೇರಿಸಿ ಗ್ರಾಮಗಳಲ್ಲಿ ಪ್ರತಿಯೊಬ್ಬರು ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಮಾಡಿ ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ಮಾಡುವಂತೆ ತಿಳಿಸಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Pin It on Pinterest