ಅಂಗಲಾಚಿದರೂ ಬರಲು ಆಗುವದಿಲ್ಲ ನೀವೆಲ್ಲ ಏನು ಬೇಕಾದರೂ ಮಾಡಿಕೊಳ್ಳಿ !

ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಾಂಕ 10/04/2019 ರಂದು ಸಮಯ ಸಂಜೆ 5.30ಕ್ಕೆ ಒಂದು ಹೆರಿಗೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ ಇಲ್ಲದಕ್ಕೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ
ನರ್ಸ ಶ್ರೀಮತಿ ದ್ಯಾಮಕ್ಕ ಇವರನ್ನು ಬಾಣಂತಿಯ ಸಂಬಂಧಿಕರು ಆಸ್ಪತ್ರೆಗೆ ಬನ್ನಿ ನಮ್ಮ ಮಗಳು ಹೆರಿಗೆ ನೋವಿನಿಂದ ತುಂಬಾನೆ ನೋವು ಅನುಭವಿಸುತ್ತಿದ್ದಾಳೆ ದಯವಿಟ್ಟು ಬಂದು ಬನ್ನಿ ಎಂದು ಅಂಗಲಾಚಿದರೂ ನಾನು ಬರಲು ಆಗುವದಿಲ್ಲ ನೀವೆಲ್ಲ ಏನು ಬೇಕಾದರೂ ಮಾಡಿಕೊಳ್ಳಿ ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ತಮ್ಮ ಮನೆಯ ಬಾಗಿಲನ್ನು ಮುಚ್ಚಿಕೊಂಡರು ಇದನ್ನು ನೋಡಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ಮತ್ತೆ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಕೆಲಸ ಮಾಡುವ ಚಂದ್ರಕಾಂತ ಪತ್ತಾರ ಇವರ ಕಡೆಯಿಂದ 108 ಪೋನ ಮಾಡಿಸಿ ಅಂಬುಲೆನ್ಸ್ ನ್ನು ಕರೆಯಿಸಿ ಯಲಬುರ್ಗಾಕ್ಕೆ ಹೆರಿಗೆಯಾಗುವ ಹೆಣ್ಣು ಮಗಳನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡಿದರು ಆ ಹೆಣ್ಣು ಮಗಳನ್ನು ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಹೆರಿಗೆಯಾಯಿತು ಈ ನರ್ಸಮ್ಮನ ವರ್ತನೆಯಿಂದ ಬೇಸತ್ತ ವಜ್ರಬಂಡಿ ಹಾಗೂ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಇಂತವರಿಂದ ಗ್ರಾಮೀಣ ಭಾಗದ ನಮ್ಮಂತವರಿಗೆ ಏನು ಉಪಯೋಗ?ಈ ನರ್ಸಮ್ಮನಂತವರು ಸರ್ಕಾರಿ ಕೆಲಸಕ್ಕೆ ಸೂಕ್ತ ಅಲ್ಲ ಅದರಲ್ಲೂ ಇವರನ್ನೆ ದೇವರೆಂದು ತಿಳಿಯುವ ನಮ್ಮಂತಹ ಗ್ರಾಮೀಣ ಪ್ರದೇಶಗಳಲ್ಲಿ ಅವಶ್ಯಕತೆ ಇರುವುದಿಲ್ಲ ಈ ಭಾರಿ ಏನೋ ದೇವರ ಕೃಪೆಯಿಂದ ತಾಯಿ,ಮಗು ಅಪಾಯದಿಂದ ಪಾರಾಗಿ ಆರೋಗ್ಯದಿಂದ ಇದ್ದಾರೆ ಆದರೂ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಬುರ್ಗಾ ತಾಲೂಕಾ ವೈದ್ಯಾಧಿಕಾರಿಗಳು ಪೂರ್ವಾಪರ ವಿಚಾರಿಸಿ ಇವರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್ ಹಾಗೂ ನರ್ಸಗಳು ಸಮಯಕ್ಕೆ ಸರಿಯಾಗಿ ಇದ್ದು ಕಾರ್ಯನಿರ್ವಹಿಸುಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಪ್ರಗತಿಪರ ಸಂಘಟನೆಗಳು ಹಾಗೂ ಗ್ರಾಮಸ್ಥರ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಕನಸಿನ ಭಾರತ ಪತ್ರಿಕೆಯ ಮೂಲಕ ಎಚ್ಚರಿಸಿದ್ದಾರೆ
-ನಮ್ಮ ಟೀಮ್ ಕೊಪ್ಪಳ

Leave a Reply

Your email address will not be published. Required fields are marked *

Pin It on Pinterest