2023ರ ವಿಶ್ವಕಪ್‍ಗೆ ಭಾರತ ಆತಿಥ್ಯ

By Editor
08:49:16 AM / Wed, Feb 21st, 2018

ಎರಡು ಬಾರಿಯ ಚಾಂಪಿಯನ್ಸ್ ಭಾರತ 2023ರ ಐಸಿಸಿ ಏಕದಿನ ವಿಶ್ವಕಪ್‍ಗೆ ಆತಿಥ್ಯವಹಿಸಲಿದೆ.ಅಲ್ಲದೆ 2021ರ ಐಸಿಸಿ ಚಾಂಪಿಯನ್ಸ್ ಟ್ರೋಪಿ ಟೂರ್ನಿಯೂ ಭಾರತದಲ್ಲೇ ನಡೆಯಲಿದೆ.2023ರ ವಿಶ್ವಕಪ್‍ಗೆ ಆತಿಥ್ಯ ವಹಿಸುವ ಮೂಲಕ ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಭಾರತ ಮೊದಲ ಬಾರಿ ಆತಿಥ್ಯ ವಹಿಸಿದಂತಾಗುತ್ತದೆ.1987,1996 ಮತ್ತು 2011ರ ವಿಶ್ವಕಪ್ ಭಾರತದಲ್ಲಿ ನಡೆದಿದ್ದರೂ ಕೆಲ ಪಂದ್ಯಗಳಿಗೆ ಪಾಕಿಸ್ತಾನ,ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆತಿಥ್ಯ ವಹಿಸಿದ್ದವು.ಇದೇ ವೇಳೆ ಅಫಘಾನಿಸ್ತಾನ ವಿರುದ್ಧ ಭಾರತದಲ್ಲಿ ಮೊದಲ ಹಾಗೂ ಇತಿಹಾಸ ಟೆಸ್ಟ್ ಪಂದ್ಯವಾಡುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಆದರೆ ಪಂದ್ಯದ ದಿನಾಂಕವನ್ನು ನಿಗದಿ ಪಡಿಸಲಾಗಿಲ್ಲ.ಕಳೆದ ಜೂನ್‍ನಲ್ಲಿ ಅಫಘಾನಿಸ್ತಾನದ ಮತ್ತು ಐರ್ಲೆಂಡ್ ತಂಡಗಳಿಗೆ ಐಸಿಸಿ ಟೆಸ್ಟ್ ಮಾನ್ಯತೆ ಲಭಿಸಿತ್ತು. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ)ದ ವ್ಯಾಪ್ತಿಗೆ ಬರುವ ವಿಚಾರದಲ್ಲಿ ಬಿಸಿಸಿಐನ ವಿರೋಧ ಮುಂದುವರಿದಿದ್ದು,ತಾನು ಈಗಾಗಲೇ ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ)ದ ನಿಯಮಗಳನ್ನು ಪಾಲಿಸುತ್ತಿರುವುದಾಗಿ ತಿಳಿಸಿದೆ. ಬಿಡುವಿಲ್ಲದ ವೇಳಾಪಟ್ಟಿಗೆ ಬ್ರೇಕ್:ಕ್ರಿಕೆಟಿಗರ ಬಿಡುವಿಲ್ಲದೆ ವೇಳಾಪಟ್ಟಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ 2019 ರಿಂದ 2023ರವರೆಗಿನ ಕ್ರಿಕೆಟ್ ಪಂದ್ಯಗಳ ದಿನಗಳನ್ನು 390 ರಿಂದ 306ಕ್ಕೆ ಕಡಿತಗೊಳಿಸಲಾಗಿದೆ.ಆದರೆ 2021ರ ಐಸಿಸಿ ಚಾಂಪಿಯನ್ಸ್ ಟ್ರೋಪಿ ಮತ್ತು 2023ರ ಐಸಿಸಿ ವಿಶ್ವಕಪ್ ಟೂರ್ನಿ ಇದರಲ್ಲಿ ಸೇರಿಲ್ಲ. ಈ ಎರಡೂ ಪ್ರಮುಖ ಟೂರ್ನಿಗಳನ್ನು ಸೇರಿಸಿದರೆ ಭಾರತ ಈ ಅವಧಿಯಲ್ಲಿ ಆಡಲಿರುವ ಪಂದ್ಯಗಳ ಒಟ್ಟು ದಿನ 350 ದಾಟಲಿದೆ.2019-23ರ ಅವಧಿಯಲ್ಲಿ ಭಾರತ ತಂಡ ಕ್ರಿಕೆಟ್‍ನ ಮೂರು ಪ್ರಕಾರಗಳಲ್ಲಿ ಒಟ್ಟು 81 ತವರು ಪಂದ್ಯಗಳನ್ನಾಡಲಿದೆ.ತಂಡದ ಕ್ರಿಕೆಟ್ ವೇಳಾಪಟ್ಟಿಯ ಬಗ್ಗೆ ನಿರ್ಧರಿಸಲು ಬಿಸಿಸಿಐ ಅಧ್ಯಕ್ಷ,ಕಾರ್ಯದರ್ಶಿ ಮತ್ತು ಖಜಾಂಚಿಯನ್ನೊಳಗೊಂಡ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ.ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಭಾರತ ತಂಡ ಹೆಚ್ಚು ಸೀಮಿತ ಓವರ್‍ಗಳ ಪಂಧ್ಯಗಳನ್ನಾಡಲಿದೆ.ಆರ್.ಸಿ.ಎಸ್: ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಮೇಲೆ ಹೇರಿದ್ದ ನಿಷೇಧವನ್ನೂ ಬಿಸಿಸಿಐ ವಾಪಸ್ ಪಡೆದಿದೆ.ಆರ್.ಸಿ.ಎ ಕ್ರಿಕೆಟ್ ಆಡಳಿತದಿಂದ ಲಲಿತ್ ಮೋದಿ ಸ್ವಯಂ ಪ್ರೇರಿತರಾಗಿ ಹಿಂದೆ ಸರಿದಿರುವ ಕಾರಣ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯ ಪ್ರಮುಖ ನಿರ್ಧಾರಗಳು

  • 2023ರ ಐಸಿಸಿ ಏಕದಿನ ವಿಶ್ವಕಪ್‍ಗೆ ಭಾರತದ ಆತಿಥ್ಯ.
  • 2021ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಆತಿಧ್ಯ
  • ಅಫಘಾನಿಸ್ತಾನ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ
  • ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಮೇಲಿನ ನಿಷೇಧ ವಾಪಸ್
  • ಮುಂಬರುವ ಕ್ರಿಕೆಟ್ ವೇಳಾಪಟ್ಟಿಯಲ್ಲಿ ಹೆಚ್ಚು ಏಕದಿನ ಪಂದ್ಯಗಳಿಗೆ ಆಧ್ಯತೆ
  • ನಾಡಾ ವ್ಯಾಪ್ತಿಯಲ್ಲಿ ಬರಲು ಮುಂದುವರಿದ ವಿರೋಧ.

Leave A Comment

   

ಕವನ ಸುದ್ಧಿಗಳು

News Tag

News Name

News Name

By Editor
08:49:16 AM / Wed, Feb 21st, 2018
News Tag

News Name

News Name

By Editor
08:49:16 AM / Wed, Feb 21st, 2018
News Tag

News Name

News Name

By Editor
08:49:16 AM / Wed, Feb 21st, 2018
News Tag

News Name

News Name

By Editor
08:49:16 AM / Wed, Feb 21st, 2018
News Tag

News Name

News Name

By Editor
08:49:16 AM / Wed, Feb 21st, 2018
News Tag

News Name

News Name

By Editor
08:49:16 AM / Wed, Feb 21st, 2018
News Tag

News Name

News Name

By Editor
08:49:16 AM / Wed, Feb 21st, 2018
News Tag

News Name

News Name

By Editor
08:49:16 AM / Wed, Feb 21st, 2018
News Tag

News Name

News Name

By Editor
08:49:16 AM / Wed, Feb 21st, 2018