ಹರೆಯಕ್ಕೂ ಸಂಧಿವಾತ

By Editor
08:46:10 AM / Wed, Feb 21st, 2018

ವಯಸ್ಸಾದ ಮೇಲೆ ಎನ್ನುವ ನಂಬಿಕೆಯನ್ನು ಸಂಧಿವಾತ ಸುಳ್ಳು ಮಾಡಿದ್ದು,ಇದೀಗ ಯುವ ಜನತೆ ವ್ಯಾಪಕವಾಗಿ ಈ ಸಮಸ್ಯೆಗೆ ಗುರಿ ಆಗಿದ್ದಾರೆ. ಹೌದು ಇತ್ತೀಚೆಗೆ ಯುವ ಜನತೆಯನ್ನು ಸಂಧಿವಾತ ಸಮಸ್ಯೆ ಕಾಡುತ್ತಿದ್ದು,ಇದಕ್ಕೆ ವ್ಯಾಯಾಮದ ಕೊರತೆ,ಅಸಹಜ ಭಂಗಿ,ಕಂಪ್ಯೂಟರ್ ಮುಂದೆ ದೀರ್ಘಾವಧಿಯವರೆಗೆ ಕೆಲಸ ಮಾಡುವುದು,ಅಸಮತೋಲಿತ ಆಹಾರ ಪದ್ದತಿ ಕಾರಣ.ಅನಾರೋಗ್ಯಕರ ಜೀವನಶೈಲಿಯು ಯೌವನಾವಸ್ಥೆಯಲ್ಲೇ ಸಂಧಿವಾತ ಹಾಗೂ ಕೀಲು ನೋವಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ.ಸಂಧಿವಾತ ಹದಿವಯಸ್ಸಿನಲ್ಲೇ ಉಂಟಾದಲ್ಲಿ ಅದು ಕ್ರಮೇಣ ಮಾರಕವಾಗುವುದಲ್ಲದೆ ನೋವು ಕ್ರಮೇಣ ಹೆಚ್ಚಿಗುತ್ತದೆ.ಸಂಧಿವಾತ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಎಂದು ಒಂದು ಕಾಲದಲ್ಲಿ ನಂಬಲಾಗಿತ್ತು. ಆದರೆ ಈಗ ಪ್ರತಿದಿನ ಪತ್ತೆಯಾಗುತ್ತಿರುವ ಪ್ರಕರಣಗಳನ್ನು ನೋಡಿದಲ್ಲಿ ಸಂಧಿವಾತದಿಂದ ಬಳಲುತ್ತಿರುವ ಹದಿವಯಸ್ಸಿನವರ ಸಂಖ್ಯೆಯೂ ದಿನೇದಿನೆ ಹೆಚ್ಚಾಗುತ್ತಿದೆ.ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ.15 ರಷ್ಟು ಮಂದಿ ಅಂದರೆ ಸುಮಾರು 180 ದಶಲಕ್ಷ ಮಂದಿ ಸಂಧಿವಾತದಿಂದ ಬಳಲುತ್ತಿದ್ದಾರೆ.ಇದು ಮಧುಮೇಹ,ರಕ್ತದೊತ್ತಡ ಹಾಗೂ ಎಚ್.ಐ.ವಿ ಸೋಂಕಿನ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಗಿಂತಲೂ ಹೆಚ್ಚಾಗಿದೆ.ಆದ್ದರಿಂದ ಉತ್ತಮ ಜೀವನಶೈಲಿ ನಿಮ್ಮದಾಗಿಸಿಕೊಳ್ಳಿ.

ಹೀಗೆ ಮಾಡಿ.

  • ಸೂಕ್ತ ಚಿಕಿತ್ಸೆಯಿಂದ ಹಾಗೂ ಜೀವನಶೈಲಿಯ ಬದಲಾವಣೆಯಿಂದ ಇದನ್ನು ಸರಿಪಡಿಸಬಹುದು.
  • ನಿಮ್ಮ ತೂಕದ ಮೇಲೆ ನಿಗಾ ಇರಲಿ.ಹೆಚ್ಚಾದ ತೂಕ ನಿಮ್ಮ ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಬಹುದು.
  • ಸಾಕಷ್ಟು ನೀರು ಕುಡಿಯಿರಿ. ದಿನಕ್ಕೆ ಎಂಟು ಲೋಟ ನೀರು ಕುಡಿಯುತ್ತಿರಿ ಎಂಬುದನ್ನು ಖಾತರಿಪಡಿಸಿಕೊಳ್ಳಿರಿ.ಇದರಿಂದ ಕೀಲುಗಳ ಕಾರ್ಟಿಲೇಜ್ ತೇವಾಂಶದಿಂದ ಕೂಡಿರುತ್ತದೆ ಮತ್ತು ಇದರ ಪರಿಣಾಮವಾಗಿ ಮೂಳೆಗಳು ಒಂದಕ್ಕೊಂದು ಘರ್ಷಿಸದಂತೆ ಆರೋಗ್ಯಪೂರ್ಣವಾಗಿರುತ್ತವೆ.
  • ಸಮತೋಲಿತವಾದ ಆರೋಗ್ಯಕರವಾದ ಆಹಾರ ಸೇವನೆ ಪ್ರತಿಯೊಬ್ಬರಿಗೂ ಅತ್ಯಗತ್ಯ. ವಿಟಮಿನ್ ಸಿ,ಇ,ಕ್ಯಾಲ್ಷಿಯಂಗಳಿಂದ ಸಮೃದ್ಧವಾದ ಆಹಾರ ಸೇವನೆಯಿಂದ ಮೂಳೆಗಳಿಗೆ ಅಗತ್ಯವಾದ ಹಲವು ಬಗೆಯ ಪೌಷ್ಟಿಕಾಂಶಗಳು ಸಿಗುತ್ತವೆ.ಇದರ ಪರಿಣಾಮವಾಗಿ ಮೂಳೆಗಳು ಸದೃಡವಾಗಿ ಆರೋಗ್ಯಪೂರ್ಣವಾಗಿ ಇರುತ್ತವೆ.
  • ನಿಯತವಾದ ಶಾರೀರಿಕ ಚಟುವಟಿಕೆಗಳು ಆರೋಗ್ಯಪೂರ್ಣ ಮೂಳೆಗಳು,ಸ್ನಾಯುಗಳು ಹಾಗೂ ಕೀಲುಗಳನ್ನು ಬೆಳೆಸಿಕೊಳ್ಳಲು ಅತ್ಯಗತ್ಯ. ನಿಯತವಾದ ವ್ಯಾಯಾಮ ಕೀಲುಗಳ ಪೌಷ್ಟಿಕತೆಗೆ ನೆರವಾಗುತ್ತವೆ.ನೋವನ್ನು ಶಮನಗೊಳಿಸುತ್ತವೆ ಹಾಗೂ ಕೀಲುಗಳ ಜಡತ್ವ ನಿವಾರಿಸುತ್ತವೆ.

Leave A Comment

   

ಆರೋಗ್ಯ ಸುದ್ಧಿಗಳು

News Tag

News Name

News Name

By Editor
08:46:10 AM / Wed, Feb 21st, 2018
News Tag

News Name

News Name

By Editor
08:46:10 AM / Wed, Feb 21st, 2018
News Tag

News Name

News Name

By Editor
08:46:10 AM / Wed, Feb 21st, 2018
News Tag

News Name

News Name

By Editor
08:46:10 AM / Wed, Feb 21st, 2018
News Tag

News Name

News Name

By Editor
08:46:10 AM / Wed, Feb 21st, 2018
News Tag

News Name

News Name

By Editor
08:46:10 AM / Wed, Feb 21st, 2018
News Tag

News Name

News Name

By Editor
08:46:10 AM / Wed, Feb 21st, 2018
News Tag

News Name

News Name

By Editor
08:46:10 AM / Wed, Feb 21st, 2018
News Tag

News Name

News Name

By Editor
08:46:10 AM / Wed, Feb 21st, 2018