ಅಡುಗೆ ಮನೆ

ಅಡುಗೆ ಮನೆ

By Editor
08:53:10 AM / Wed, Feb 21st, 2018

ಗೋಧಿ ನುಚ್ಚಿನ ಖಾರ ಪೊಂಗಲ್

ಬೇಕಾಗುವ ಸಾಮಗ್ರಿ:

ಗೋಧಿ ನುಚ್ಚು ಒಂದು ಕಪ್,ಹೆಸರುಬೇಳೆ ಅರ್ಧ ಕಪ್, ಕಾಳುಮೆಣಸು ಸ್ವಲ್ಪ,ಜೀರಿಗೆ ಒಂದು ಕಪ್,ಇಂಗು ಒಂದು ಚಿಟಿಕೆ,ಹಸಿ ಮೆಣಸಿನಕಾಯಿ ಮೂರು, ಶುಂಠಿ ಅರ್ಧ ಇಂಚು,ಉಪ್ಪು ರುಚಿಗೆ ತಕ್ಕಷ್ಟು , ಅರಶಿಣ ಅರ್ಧ ಚಮಚ, ಕೊಬ್ಬರಿ ಅರ್ಧ ಕಪ್, ತುಪ್ಪ, ಗೋಡಂಬಿ ಅರ್ಧ ಕಪ್.

ಮಾಡುವ ವಿಧಾನ :

ಗೋಧಿ ನುಚ್ಚು ಮತ್ತು ಹೆಸರುಬೇಳೆಯನ್ನು ಸ್ವಲ್ಪ ಬೆಚ್ಚಗೆ ಹುರಿದು ತೊಳೆದು ಬೇಯಿಸಿ,ಉಪ್ಪು ಹಾಕಿ ಇಡಿ, ತುಪ್ಪದಲ್ಲಿ ಹೆಚ್ಚಿದ ಹಸಿ ಮೆಣಸಿನಕಾಯಿ,ಜೀರಿಗೆ,ಕಾಳುಮೆಣಸು,ಕರಿಬೇವು ಮತ್ತು ಗೋಡಂಬಿಯ ಒಗ್ಗರಣೆ ಮಾಡಿ ಗೋಧಿ ನುಚ್ಚು ಮತ್ತು ಹೆಸರುಬೇಳೆಯ ಮಿಶ್ರಣಕ್ಕೆ ಹಾಕಿ.ನಂತರ ಇದಕ್ಕೆ ಕಾಯಿತುರಿ,ಸ್ವಲ್ಪ ತುಪ್ಪ ಹಾಕಿ.

ಗೋಧಿ ತರಿಯ ಬಿಸಿ ಬೇಳೆಭಾತ್

ಬೇಕಾದ ಸಾಮಗ್ರಿ :

ಗೋಧಿ ತರಿ ಒಂದು ಕಪ್,ತೊಗರಿ ಬೇಳೆ ಒಂದು ಕಪ್, ಬಿಸಿ ಭೇಳೆಭಾತ್ ಪುಡಿ ಅರ್ಧ ಕಪ್, ಉಪ್ಪು ರುಚಿಗೆ ತಕ್ಕಷ್ಟು,ಹುಣಸೆ ರಸ ಅರ್ಧ ಕಪ್,ಕೊಬ್ಬರಿ ತುರಿ ಅರ್ಧ ಕಪ್

ಮಾಡುವ ವಿಧಾನ :

ತೊಗರಿ ಭೇಳೆಯನ್ನು ತೊಳೆದು ಬೇಯಿಸಿ,ನಂತರ ಇದಕ್ಕೆ ಬಿಸಿ ಬೇಳೆಭಾತ್ ಪುಡಿ,ಉಪ್ಪು ಮತ್ತು ಹುಣಸೆ ರಸ ಹಾಕಿ ಕುದಿಸಿ, ಆಮೇಲೆ ಇದಕ್ಕೆ ತೊಳೆದ ಗೋಧಿ ನುಚ್ಚು ಹಾಕಿ ಬೇಯಿಸಿ,ಕೊನೆಗೆ ಕೊಬ್ಬರಿ ತುರಿ ಹಾಕಿ ಒಗ್ಗರಣೆ ಕೊಡಿ ಇದಕ್ಕೆ ಬೇಕಿದ್ದರೆ ತರಕಾರಿಗಳನ್ನು ಹಾಕಬಹುದು. .

ಗೋಧಿ ತರಿಯ ವೆಜಿಟೇಬಲ್ ಭಾತ್

ಬೇಕಾದ ಸಾಮಗ್ರಿ :

ಮಿಕ್ಸಡ್ ವೆಜಿಟೇಬಲ್ ಒಂದು ಕಪ್, ಗೋಧಿ ತರಿ ಒಂದು ಕಪ್, ವಾಂಗಿ ಭಾತ್ ಪುಡಿ ಅರ್ಧ ಕಪ್, ಉಪ್ಪು ರುಚಿಗೆ ತಕ್ಕಷ್ಟು, ನಿಂಬೆ ರಸ ಒಂದು ಚಮಚ,ಎಣ್ಣೆ ಸ್ವಲ್ಪ,ಸಾಸಿವೆ ಅರ್ಧ ಚಮಚ,ಕೊಬ್ಬರಿ ಅರ್ಧ ಕಪ್.

ಮಾಡುವ ವಿಧಾನ :

ಗೋಧಿ ತರಿಯನ್ನು ಬೇಯಿಸಿ,ನಿಮಗೆ ಬೇಕಾದ ತರಕಾರಿಗಳನ್ನು ಉದ್ದುದ್ದಕ್ಕೆ ಹೆಚ್ಚಿ ಒಗ್ಗರಣೆ ಮಾಡಿ ಬೇಯಿಸಿ,ಇದಕ್ಕೆ ಉಪ್ಪು,ವಾಂಗಿ ಭಾತ್ ಪುಡಿ ಹಾಕಿ ತಿರುವಿ ಬೆಂದ ಗೋಧಿ ನುಚ್ಚು ಹಾಕಿ ಬೆರೆಸಿ,ಕೊನೆಗೆ ಕೊಬ್ಬರಿ ತುರಿ ಮತ್ತು ನಿಂಬೆ ರಸ ಹಾಕಿ ಬೆರೆಸಿ. .

ಗೋಧಿ ನುಚ್ಚಿನ ಸ್ವೀಟ್ ಪೊಂಗಲ್

ಬೇಕಾದ ಸಾಮಗ್ರಿ :

ಗೋಧಿ ನುಚ್ಚು ಒಂದು ಕಪ್,ಹೆಸರುಬೇಳೆ ಒಂದು ಕಪ್, ಬೆಲ್ಲ ಒಂದೂವರೆ ಕಪ್,ತುಪ್ಪ ಅರ್ಧ ಕಪ್,ಗೋಡಂಬಿ ಮತ್ತು ದ್ರಾಕ್ಷಿ ಅರ್ಧ ಕಪ್,ಏಲಕ್ಕಿ ಪುಡಿ ಅರ್ಧ ಚಮಚ,ಕೊಬ್ಬರಿ ತುರಿ ಅರ್ಧ ಕಪ್.

ಮಾಡುವ ವಿಧಾನ :

ಗೋಧಿ ನುಚ್ಚು ಮತ್ತು ಹೆಸರುಬೇಳೆಯನ್ನು ಘಮ ಅನ್ನುವವರೆಗೆ ಹುರಿದು ಬೇಯಿಸಿ.ನಂತರ ಬೆಲ್ಲವನ್ನು ಕರಗಿಸಿ ಸೋಸಿ ಬೆಂದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ,ದ್ರಾಕ್ಷಿ ಹಾಕಿ.ನಂತರ ತುಪ್ಪ ಏಲಕ್ಕಿ ಪುಡಿ ಕೊಬ್ಬರಿ ತುರಿ ಹಾಕಿ ಸಣ್ಣ ಉರಿಯಲ್ಲಿಟ್ಟು ಮಿಕ್ಸ್ ಮಾಡಿ. .

Leave A Comment

   

ಕವನ ಸುದ್ಧಿಗಳು

News Tag

News Name

News Name

By Editor
08:53:10 AM / Wed, Feb 21st, 2018
News Tag

News Name

News Name

By Editor
08:53:10 AM / Wed, Feb 21st, 2018
News Tag

News Name

News Name

By Editor
08:53:10 AM / Wed, Feb 21st, 2018
News Tag

News Name

News Name

By Editor
08:53:10 AM / Wed, Feb 21st, 2018
News Tag

News Name

News Name

By Editor
08:53:10 AM / Wed, Feb 21st, 2018
News Tag

News Name

News Name

By Editor
08:53:10 AM / Wed, Feb 21st, 2018
News Tag

News Name

News Name

By Editor
08:53:10 AM / Wed, Feb 21st, 2018
News Tag

News Name

News Name

By Editor
08:53:10 AM / Wed, Feb 21st, 2018
News Tag

News Name

News Name

By Editor
08:53:10 AM / Wed, Feb 21st, 2018