ಸಂಪಾದಕೀಯ

ರಾಜಕೀಯ ವಿಕೃತ ಮನಸ್ಸುಗಳ ಬೆಂಕಿ !

By Editor
08:45:36 AM / Wed, Feb 21st, 2018

ಭಾರತದಲ್ಲಿ ಎಡ ಮತ್ತು ಬಲ ಪಂತೀಯ ವೈಮನಸ್ಸಗಳನ್ನು ರಾಜಕೀಯ ಪಕ್ಷಗಳ ಈ ಪಂತಗಳನ್ನು ತಮ್ಮ ತಮ್ಮ ಲಾಭ ಮತ್ತು ಭವಿಷ್ಯದ ಚುನಾವಣೆಗಾಗಿ ಬಳಸಿಕೊಳ್ಳುತ್ತಾ ದೇಶದಲ್ಲಿ ಅಶಾಂತಿಯ ಬೆಂಕಿ ಹಚ್ಚಿದ್ದಾರೆ.ಮತೀಯ ಶಕ್ತಿಗಳು ಎಷ್ಟು ಪ್ರಬಲವಾಗಿಯೆ ಅನ್ನದರೆ ಬೇಕಾದರೆ ಇತಿಹಾಸ,ಧಾರ್ಮಿಕ ಆಚರಣೆಗಳು ಜೊತೆಗೆ ಸಂವಿಧಾನವನ್ನು ತಿದ್ದಿ ತಮ್ಮ ಲಾಭಕ್ಕಾಗಿ ಬಳಸುವಷ್ಟು ಬಲಿಷ್ಠ ಬಾಹುಗಳನ್ನು ಹೊಂದಿವೆ.ಕೇಲವರು ದೇಶದ ಪ್ರಗತಿಯ ಕನಸನ್ನು ಜನರಲ್ಲಿ ಬಿತ್ತಿ ಮೋಸ ಮಾಡಿದರೆ ಇನ್ನು ಹಲವರು ಜಾತಿ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ. ದೇಶದಲ್ಲಿ ಬಹುತೇಕ ರಾಜ್ಯದ ಆಡಳಿತ ನಡೆಸುವ ಸರ್ಕಾರಗಳನ್ನು ನೋಡಿದರೆ ದರೋಡೆಕೋರರ ಆಡಳಿತದ ಮಾದರಿ ಅನ್ನಿಸುತ್ತದೆ. ಭವ್ಯ ಭಾರತ ಆಚಾರ ವಿಚಾರ ಶಾಂತಿ ಅನ್ನುವ ಪದ್ದಗಳನ್ನು ಪಠ್ಯಪುಸ್ತಕದಲ್ಲಿ ವೈಚಾರಿಕ ಗ್ರಂಥಗಳಲ್ಲಿ ನೋಡಬಹುದೇ ಹೊರತು ಸುತ್ತಲೂ ಅಥವಾ ಮಾಧ್ಯಮಗಳಲ್ಲಿ ಕಾಣುವುದು ಅತ್ಯಂತ ವಿರಳ ಏಕೆಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೋಮುದಳ್ಳುರಿಗೆ ದೇಶನಡುಗುತ್ತಿದೆ. ಉತ್ತರದ ಗಡಿ ಭಾಗದಲ್ಲಿ ವಿದೇಶರ ಭಯ.ಕಾಶ್ಮೀರದಲ್ಲಿ ಭಯೋತ್ಪಾದಕರ ಭಯ, ಬಂಡುಕೋರರ ಮತು ನಕ್ಸಲೆಟ್‍ಗಳ ಭಯಗಳ ಮಧ್ಯ ನಮ್ಮ ಸುತ್ತಲೇ ಇರುವ ಹಿಂದೂ ಮುಸ್ಲಿಂ ಗಲಾಟೆಗಳು, ಇದರ ಮಧ್ಯ ವಿದೇಶಿಯರ ಪ್ರಾಯೋಜಿತ ಕ್ರಿಶ್ಚಿಯನ್ ಮಂತಾತಂರವು ನಡೆಯುತ್ತಲ್ಲೇ ಇದೆ. ಕೇಲವೆ ದಶಕಗಳ ಹಿಂದೆ ಸಹೋದರರಂತೆ ಹಿಂದೂ ಮುಸ್ಲಿಂರು ಪರಸ್ಪರ ಹಬ್ಬ ಆಚರಿಸುತ್ತಿದ್ದರು. ಎಲ್ಲ ವಿಷಯದಲ್ಲೂ ಒಂದಾಗಿ ಇದ್ದ ಈ ಮುಗ್ದ ಮನಸ್ಸಿನಲ್ಲಿ ವಿಷದ ಬೀಜ ಬಿತ್ತಿದವರು ಯಾರು ?. ಆಯಾ ಧರ್ಮಗಳ ಜಾತಿಗಳ ಮಧ್ಯ ಇದ್ದ ವಿರೋದವು ಕೂಡಾ ಹಿಂದೂ-ಮುಸ್ಲಿಂರಲ್ಲಿ ಇರಲಿಲ್ಲ ಅಂತಹ ಸಿಹಿಯಾದ ಸಂಬಂದಕ್ಕೆ ವಿಷ ಹಾಕಿದವರು ಬೇರೆ ಯಾರು ಅದು ನಮ್ಮ ರಾಜಕಾರಣಿಗಳು,ಕೇಟ್ಟ ನಿಂತ ರಾಜಕೀಯ ಮನಸ್ಸಗಳು. ಹಿಂದುಗಳ ಹೆಸರಿನಲ್ಲಿ ಬಿಜೆಪಿ,ಅಲ್ಪಸಂಖ್ಯಾತರ,ಮುಸ್ಲಿಂರ ಹೆಸರಿನಲ್ಲಿ ಕಾಂಗ್ರೆಸ್, ಇವು ಸಾಲದೇ ಅನ್ನುವಂತೆ ಜಾತಿ ಧರ್ಮಕ್ಕೆ ಒಂದರಂತೆ ಪಕ್ಷಗಳು ಹುಟ್ಟಿ, ಜನರ ಏಕತೆಯನ್ನು ಒಡೆಯುವ ಹುನ್ನಾರ ನಡೆಸಿವೆ.ಈ ಕೃತ್ಯವನ್ನು ವಿಶ್ವದ ಅತ್ಯಂತ ಭಯಂಕರ. ಏಕೆಂದರೆ ಏಕತೆ ಐಕತ್ಯೆಯ ನಾಡನ್ನು ಧರ್ಮ ಮತ್ತು ಜಾತಿ ಭಾಷೆಯ ಹೆಸರಿನಲ್ಲಿ ಒಡೆದು ಓಟ ಬ್ಯಾಂಕ್‍ನು ಭದ್ರ ಮಾಡಿಕೊಳ್ಳುತ್ತಿದ್ದಾರೆ ಈ ಕಾರ್ಯದಲ್ಲಿ ಯಾವುದೇ ಪಕ್ಷಗಳು ಹಿಂದೆ ಬಿದ್ದಿಲ್ಲ ಕರ್ನಾಟಕದ ಕರಾವಳಿ ಗಲಾಟೆಯಾಗಲಿ,ಕೇರಳದ ಹತ್ಯೆಯಾಗಲಿ,ಮಂಗಳೂರು ಸುತ್ತ ಮುತ್ತ ನಡೆಯುವ ಹತ್ಯೆಗಳಾಗಲಿ ಎಲ್ಲವು ರಾಜಕೀಯ ಪೇರಿತ ಘಟನೆಗಳೆ ಆಗಿವೆ. ಶತಶತಮಾನಗಳಿಂದ ಕೂಡಿ ಬಾಳಿದ ನಮ್ಮರವನ್ನು ಒಡೆಯಲ್ಲು ರಾಜಕೀಯ ಪಕ್ಷಗಳಿಗೆ ಅಥವಾ ರಾಜಕಾರಣಿಗಳಿಗೆ ಹವಾಲಾ ಹಣ ಬರತ್ತಿರುವ ಅನುಮಾನವು ಇದೆ. ಏPಂದರೆ ಅಮೇರಿಕದಂತಹ ದೇಶಗಳು ವಿಶ್ವದಲ್ಲಿ ಧರ್ಮ ಮತ್ತು ಜಾತಿ ವ್ಯವಸ್ಥೆಯನ್ನು ಮುಕ್ತಗೊಳಿಸಲು ಕ್ರಿಶ್ಚಿಯನ್ ಧರ್ಮವನ್ನು ಬೆಳೆಸಲು ಹಣ ಹಂಚುವುದು, ಧರ್ಮ ಪ್ರಚಾರ,ಏಸುವಿನ ಮಹಿಮೆಯನ್ನು ಮರು ಸೃಷ್ಟಿ, ಜೊತೆಗೆ ಬಡ ಮತ್ತು ಧಾರ್ಮಿಕ ನಂಬಿಕೆಯ ಜನತೆಯಲ್ಲಿ ವಿಷ ಬಿತ್ತುವ ಕೇಲವು ಸಂಘ-ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಕೋಟಿ ಕೋಟಿ ಹಣ ವಿದೇಶಗಳಿಂದ ಭಾರತಕ್ಕೆ ಬರುತ್ತದೆ. ಅಂತವರ ಪಟ್ಟಿಯಲ್ಲಿ ನಮ್ಮ ರಾಜಕಾರಣಿಗಳು ಇರಬಹುದು ಏಕೆಂದರೆ ಹಣ ಮತ್ತು ಅಧಿಕಾರ ಎರಡು ಒಂದೇ ಏಟಿಗೆ ಸಿಗುವುದರಿಂದ ಇದಕ್ಕೆ ಹಲವಾರು ರಾಜಕಾರಣಿಗಳು ಒಪ್ಪುತ್ತಾರೆ. ಹೀಗೆ ದೇಶದ ಐಕ್ಯತೆಯನ್ನು ಹಾಳು ಮಾಡುವ ಜೊತೆಗೆ ದೇಶವನ್ನು ದಿವಾಳಿ ಮಾಡಿ.ತಾವೇ ಮೆರೆಯುವ ಹುನ್ನಾರ ರಾಜಕಾರಣಿಗಳು ನಡೆಸುತ್ತಾರೆ. ನಾವು ಹೇಳುತ್ತಿರುವುದು ಯಾರ ಪರ ಅಥವಾ ವಿರೋಧವು ಅಲ್ಲ. ನಮಗೆ ಯಾವುದೇ ಜಾತಿ ಧರ್ಮದ ವ್ಯಕ್ತಿಯ ಹತ್ಯೆಯನ್ನು ಅಷ್ಟೇ ಪ್ರಾಮಾಣಿಕವಾಗಿ ಖಂಡಿಸುತ್ತೇವೆ. ಶಾಂತಿಯ ನೆಲೆಯಲ್ಲಿ ಬೆಂಕಿ ಹಚ್ಚಿದವರು ರಾಜಕಾರಣಿಗಳು, ಬುದ್ಧಿಜೀವಿಗಳು, ಧರ್ಮದ ಮುಖವಾದ ಹಾಕಿಕೊಂಡ ಮುಖಂಡರು ಮತ್ತು ಮಾಧ್ಯಮಗಳು ಅಂತ ನಮಗೆ ಸ್ವಷ್ಟವಾಗಿ ಅರ್ಥ ಆಗುತ್ತಿದೆ. ಈ ಶಾಂತಿಯ ಬಿಡು ಹಾಗೇ ಉಳಿಯಬೇಕಾದರೆ ರಾಜಕೀಯ ಕಾರ್ತಕರ್ತರು ಮತ್ತು ಸಾಮಾನ್ಯ ಜನರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ, ಶಾಂತಿಯುತ ಹೋರಾಟದಿಂದ ತಮ್ಮ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.ಹಾಗೂ ರಾಜಕೀಯ ಮುಖಂಡರ ನಿಜ ಬಣ್ಣ ಅರಿತು ನಡೆದುಕೊಳ್ಳಬೇಕು.ಗಾಳಿಸುದ್ದಿಗೆ ಕಿವಿಗೊಡಬಾರದು ದ್ವೇಷ ಸಾಧಿಸದೇ ಶಾಂತಿ ಪಾಲಿಸಿ. ರಾಜಕೀಯ ವಿಕೃತ ಮನಸ್ಸುಗಳಿಂದ ಹೊತ್ತಿ ಉರಿಯುತ್ತಿರುವ ಜ್ವಾಲೆಯಲ್ಲಿ ಯಾರು ಮೈಕಾಸಿಕೊಳ್ಳದೆ ನ್ಯಾಯ ಧರ್ಮದ ಆಧಾರದಲ್ಲಿ ಶಾಂತಿ ಪಾಲಿಸಿ. ಒಗ್ಗಟ್ಟಾಗಿ,ಒಂದಾಗಿ ಯಾವುದೇ ಒಂದು ಹನಿ ರಕ್ತವು ಭೂಮಿಗೆ ಬಿದ್ದಾಗ ಭೂ ನಡುಗುವ ಜೊತೆಗೆ ಮಾನವೀಯ ಹೃದಯಗಳು ಅಳುತ್ತವೆ ಆ ನೋವು ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಒಬ್ಬ ಮುಸ್ಲಿಂ ಒಬ್ಬ ಹಿಂದೂ ಎಲ್ಲರು ದೇವರ ಮುಂದೆ ಸಮಾನರು ಅದಕ್ಕಾಗಿ ಗಾಳಿ,ಬೆಳಕು,ಭೂಮಿ,ನೀರಿಗೆ ಬೇದ ಇಟ್ಟಿಲ್ಲ ಆದರೆ ರಾಜಕಾರಣಿಗಳಿಗೆ ಮಾತ್ರ ಧರ್ಮ,ಜಾತಿ ಹೆಸರಿನಲ್ಲಿ ನಾವೇಲ್ಲರೂ ಬೇರೆ ಬೇರೆ ಅದಕ್ಕಾಗಿ ಯಾರು ರಾಜಕೀಯ ಅಸ್ತ್ರಗಳಾಗಿ ಜೀವನ ಹಾಳು ಮಾಡಿಕೊಳ್ಳುವ ಜೊತೆಗೆ ದೇಶದ ಶಾಂತಿಯನ್ನು ಹಾಳು ಮಾಡಬೇಡಿ.

Leave A Comment

   

ಸಂಪಾದಕೀಯ ಸುದ್ಧಿಗಳು

News Tag

News Name

News Name

By Editor
08:45:36 AM / Wed, Feb 21st, 2018
News Tag

News Name

News Name

By Editor
08:45:36 AM / Wed, Feb 21st, 2018
News Tag

News Name

News Name

By Editor
08:45:36 AM / Wed, Feb 21st, 2018
News Tag

News Name

News Name

By Editor
08:45:36 AM / Wed, Feb 21st, 2018
News Tag

News Name

News Name

By Editor
08:45:36 AM / Wed, Feb 21st, 2018
News Tag

News Name

News Name

By Editor
08:45:36 AM / Wed, Feb 21st, 2018
News Tag

News Name

News Name

By Editor
08:45:36 AM / Wed, Feb 21st, 2018
News Tag

News Name

News Name

By Editor
08:45:36 AM / Wed, Feb 21st, 2018
News Tag

News Name

News Name

By Editor
08:45:36 AM / Wed, Feb 21st, 2018